ಮಾಜಿ ಸಚಿವ ಡಿಕೆ ಶಿವಕುಮಾರ್ ಬಾಬರ್ ವಶಂಕ್ಕೆ ಸೇರಿದವರು. ದೇಗುಲದ ಮೇಲೆ ಶಿವಕುಮಾರ್ ಏಸು ಪ್ರತಿಮೆ ನಿರ್ಮಾಣ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಲಾಗಿದೆ.
ರಾಮನಗರ [ಜ.03]: ಕನಕಪುರ ತಾಲೂಕಿನ ಹಾರೋಬೆಲೆ ಬಳಿಯ ಕಪಾಲ ಬೆಟ್ಟದಲ್ಲಿ ಮುನೇಶ್ವರ ದೇಗುಲದ ಮೇಲೆ ಏಸುಕ್ರಿಸ್ತನ ಪ್ರತಿಮೆ ಸ್ಥಾಪಿಸಲು ಹೊರಟಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮೊಘಲ್ ಸಾಮ್ರಾಜ್ಯದ ಬಾಬರ್ ಸಂತತಿಗೆ ಸೇರಿದವರು ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ್ ನಾರಾಯಣಗೌಡ ಟೀಕಿಸಿದರು.
ರಾಮನಗರದಲ್ಲಿ ಮಾತನಾಡಿದ ಅವರು, ಬಾಬರ್ ದೇವಸ್ಥಾನಗಳನ್ನು ಕೆಡವಿ ಅದರ ಮೇಲೆ ಮಸೀದಿಗಳನ್ನು ನಿರ್ಮಾಣ ಮಾಡಿದನು. ಈಗ ಅದೇ ಬಾಬರ್ ಸಂತತಿಗೆ ಸೇರಿರುವ ಡಿ.ಕೆ. ಶಿವಕುಮಾರ್ ದೇಗುಲದ ಮೇಲೆ ಏಸುಪ್ರತಿಮೆಯ ಪ್ರತಿಷ್ಠಾಪನೆಗೆ ಹೊರಟಿದ್ದಾರೆ ಎಂದರು.
ದೇಗುಲ ಇರುವುದು ಸ್ಪಷ್ಟ : ಬೆಟ್ಟದಲ್ಲಿ ಬಂಡೆ ಮೇಲೆ ಮುನೇಶ್ವರ ದೇಗುಲ ಇರುವುದು ಸ್ಪಷ್ಟವಾಗಿದೆ. ಬೆಟ್ಟವನ್ನು ಕಬಳಿಸುವ ಉದ್ದೇಶದಿಂದ ದೇಗುಲದ ಮೇಲೆಯೇ ಸ್ಲಾಬ್‌ಗಳನ್ನು ಹಾಕಿ ಏಸು ಪ್ರತಿಮೆ ನಿಲ್ಲಿಸಲು ತಳಪಾಯ ಸಿದ್ಧಪಡಿಸಿದ್ದಾರೆ. ದೇವಸ್ಥಾನವನ್ನು ನಾಶ ಮಾಡಿರುವ ಡಿ.ಕೆ.ಶಿವಕುಮಾರ್ ಅವರಿಗೆ ಶಾಪ ತಟ್ಟದೆ ಬಿಡುವುದಿಲ್ಲ ಎಂದು ಹೇಳಿದರು.
ಕಂದಾಯ ಸಚಿವ ಅಶೋಕ್ ಅವರು ಕಪಾಲ ಬೆಟ್ಟದಲ್ಲಿ 10 ಎಕರೆ ಜಾಗ ಕಪಾಲಬೆಟ್ಟಅಭಿವೃದ್ಧಿ ಟ್ರಸ್ಟ್ ಮಂಜೂರಾಗಿರುವ ಸಂಬಂಧ ದಾಖಲೆಗಳನ್ನು ಪಡೆದು ಪರಿಶೀಲಿಸಲು ಆದೇಶಿಸಿದ್ದಾರೆ. ಜಾಗ ಮಂಜೂರಾತಿಯಲ್ಲಿ ಕಾನೂನು ಉಲ್ಲಂಘನೆ ಆಗಿರುವುದು ಸ್ಪಷ್ಟವಾಗಿದೆ. ಬೆಟ್ಟಕಬಳಿಸಲು ಹುನ್ನಾರ ಊರ್ಜಿತ ಆಗುವುದಿಲ್ಲ ಎಂದು ತಿಳಿಸಿದರು.
ಸಿಎಎ ಬೆಂಬಲಿಸಿ ಬೃಹತ್ ಜನಾಂದೋಲನ ಜಾಥಾ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನ ಸಾಮಾನ್ಯರಿಗೆ ನಿಜಾಂಶ ತಿಳಿಸುವ ದಿಕ್ಕಿನಲ್ಲಿ ರಾಷ್ಟ್ರೀಯ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಜನಪರ ಸಂಘಟನೆಗಳು ಜ. 4ರಂದು ನಗರದಲ್ಲಿ ಬೃಹತ್ ಜನಾಂದೋಲನ ಜಾಥಾ ಹಮ್ಮಿಕೊಂಡಿವೆ ಎಂದು ಅಶ್ವತ್‌್ಥ ನಾರಾಯಣ್‌ಗೌಡ ಹೇಳಿದರು.
ಜನವರಿ 4ರ ಬೆಳಗ್ಗೆ 10ಗಂಟೆಗೆ ನಗರದ ಐಜೂರಿನಿಂದ ಆರಂಭವಾಗುವ ಜಾಥಾ, ಕಂಪೇಗೌಡ ವೃತ್ತದ ಮಾರ್ಗವಾಗಿ, ಸರ್ಕಾರಿ ಬಸ್‌ನಿಲ್ದಾಣ, ಹಳೇ ಬಸ್‌ನಿಲ್ದಾಣ, ಮುಖ್ಯರಸ್ತೆ, ಎಂ.ಜಿ.ರಸ್ತೆ, ಕಾಮನಗುಡಿ ವೃತ್ತ ಮಾರ್ಗವಾಗಿ ಪಿಡಬ್ಲ್ಯೂಡಿ ವೃತ್ತದಲ್ಲಿ ಮುಕ್ತಾಯವಾಗಿ, ಸರ್ಕಾರಿ ಕಾಲೇಜು ಮೈದಾನದಲ್ಲಿ ಸಮಾವೇಶಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಯೇಸು ಕ್ರಿಸ್ತನ ಪೋಟೋಕ್ಕೆ ಡಿಕೆಶಿ ಮುಖ.. ಇದೆಂಥಾ ಕುಚೇಷ್ಟೆ!...
ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಬಹುಮತದಿಂದ ಅಂಗೀಕಾರಗೊಂಡಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್ ಹಾಗೂ ಎಡಪಕ್ಷಗಳು ಈಗ ವಿರೋಧಿಸುತ್ತಿವೆ. ಆದರೆ, ಕಾಯ್ದೆ ಅನುಷ್ಠಾನಕ್ಕೂ ಮುನ್ನ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ನಾಯಕರನ್ನು ಒಳಗೊಂಡ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಲಾಗಿತ್ತು. ಆಗ ಯಾವುದೇ ವಿರೋಧ ಮಾಡದ ಪ್ರತಿಪಕ್ಷಗಳು, ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಜೀರ್ಣಿಸಿಕೊಳ್ಳಲಾರದೆ ವಿನಾಕಾರಣ ಆರೋಪ ಮಾಡುತ್ತಿವೆ ಎಂದು ಕುಟುಕಿದರು.
ದಾರಿ ತಪ್ಪಿಸುವ ಕೆಲಸ:
ಸಿಎಎ ವಿರೋಧಿಸಿ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ಕೈವಾಡವಿದ್ದು, ಅಲ್ಪಸಂಖ್ಯಾತ ಯುವಕರು ಮತ್ತು ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ, ಪ್ರತಿಭಟನೆ ಮೂಲಕ ದಾರಿತಪ್ಪಿಸುವ ಕೆಲಸ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ನಿಜಾಂಶ ತಿಳಿಸುವ ದಿಕ್ಕಿನಲ್ಲಿ ರಾಷ್ಟ್ರೀಯ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಜನಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಜನಸಾಮಾನ್ಯರು ಸ್ವಯಂ ಪ್ರೇರಿತರಾಗಿ ಬೃಹತ್ ಜನಾಂದೋಲನ ಜಾಥದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಶ್ವಥ್ ನಾರಾಯಣ್‌ಗೌಡ ತಿಳಿಸಿದರು.