ಸಿಎಂ ಸಾರಥ್ಯದಲ್ಲಿ ರೇವಣ್ಣ ನಾಮಪತ್ರ ಸಲ್ಲಿಕೆ

By Kannadaprabha News  |  First Published Apr 18, 2023, 7:07 AM IST

ಟಿ. ನರಸೀಪುರ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ. ರೇವಣ್ಣ ಅವರು ರಾಜ್ಯದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ಸಾರಥ್ಯದಲ್ಲಿ ನಾಮಪತ್ರ ಸಲ್ಲಿಸಿದರು.


 ಟಿ. ನರಸೀಪುರ :  ಟಿ. ನರಸೀಪುರ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ. ರೇವಣ್ಣ ಅವರು ರಾಜ್ಯದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ಸಾರಥ್ಯದಲ್ಲಿ ನಾಮಪತ್ರ ಸಲ್ಲಿಸಿದರು.

ಶ್ರೀ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಡಾ. ರೇವಣ್ಣ ಅವರು ಬಿ. ಫಾರಂ ಜೊತೆ ಪೂಜೆ ಸಲ್ಲಿಸಿ, ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ, ಮಿನಿ ವಿಧಾನಸೌಧ ತಲುಪಿದರು. ಡಾ. ರೇವಣ್ಣ ಅವರ ಜೊತೆಗುಡಿ ಸಹಸ್ರರಾರು ಕಾರ್ಯಕರ್ತರು ಸಾಥ್‌ ನೀಡಿದರು.

Tap to resize

Latest Videos

ಟಿ. ನರಸೀಪುರ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಅಭ್ಯರ್ಥಿ ಪರವಾಗಿ ನಾಮಪತ್ರ ಸಲ್ಲಿಸಲು ಮುಖ್ಯಮಂತ್ರಿಗಳು ಬಂದಿರುವುದು ಇತಿಹಾಸ ಪುಟದಲ್ಲಿ ದಾಖಲಾದಂತಾಗಿದೆ.

ಡಾ. ರೇವಣ್ಣ ಅವರು ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿ, ನನಗೆ ಹೊಸದಾದರು ರಾಜಕೀಯ ಕುಟುಂಬದಿಂದ ಬಂದಿದ್ದೇನೆ, ಆರೋಗ್ಯ ಸೇವೆಯಲ್ಲಿ ಕ್ಷೇತ್ರದ ಜನರಿಗೆ ಚಿರಪರಿಚಿತನಾಗಿದ್ದೇನೆ, ವೈದ್ಯಕೀಯ ಸೇವೆಯಲ್ಲಿ ತಾಲೂಕಿನಾದ್ಯಂತ ಬಡ ಮದ್ಯಮ ವರ್ಗ ಸೇರಿದಂತೆ ಎಲ್ಲ ಜನತೆಗೆ ಉತ್ತಮ ಸೇವೆ ಸಲ್ಲಿಸಿದ್ದೇನೆ, ನನ್ನ ಸೇವೆಯನ್ನ ಪರಿಗಣಿಸಿ ಟಿ. ನರಸೀಪುರದ ಜನತೆ ಈ ಚುನಾವಣೆಯಲ್ಲಿ ನನ್ನನು ಅರಸಿ ಹಾರೈಸುತ್ತಾರೆ ಎಂಬ ನಂಬಿಕೆ ಇದೆ. ಈ ಬಾರಿ ಟಿ. ನರಸೀಪುರದಲ್ಲಿ ಕಮಲ ಅರಳಲಿದೆ ಎಂದರು.

ನಾಮಪತ್ರ ಸಲ್ಲಿಕೆ ವೇಳೆ ಸಚಿವ , ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಪ್ರತಾಪ್‌ ಸಿಂಹ ಅವರು ಆಗಮಿಸಿ ಬಿಜೆಪಿ ಅಭ್ಯರ್ಥಿಗೆ ಸಾಥ್‌ ನೀಡಿದರು.

ಮಾಜಿ ವಿಧಾನ ಪರಿಷತ್‌ ಸದಸ್ಯ ಸಿದ್ದರಾಜು, ಮಂಡಲ ಅಧ್ಯಕ್ಷ ಲೋಕೇಶ್‌ ನಾಯಕ, ನಿಕಟ ಪೂರ್ವ ಅಧ್ಯಕ್ಷ ಹಿರಿಯೂರು ಪರಶಿವಮೂರ್ತಿ, ಉದ್ಯಮಿ ಎಸ್‌ಎಂಆರ್‌ ಪ್ರಕಾಶ್‌, ಜಿಲ್ಲಾ ಉಪಾಧ್ಯಕ್ಷ ದಾಸಯ್ಯ, ಟಿ. ನರಸೀಪುರ ಟೌನ್‌ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಎಸ್‌.ಕೆ. ಕಿರಣ…, ವಕೀಲರ ಸಂಘದ ಅಧ್ಯಕ್ಷ ಪಾಲಾಕ್ಷ ಮೂರ್ತಿ, ಯುವ ಮೋರ್ಚಾ ಅಧ್ಯಕ್ಷ ಶಿವಶಂಕರ್‌, ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ಶಿವಕುಮಾರ್‌, ದಯಾನಂದ್‌ ಪಾಟೀಲ…, ಶಕ್ತಿಕೇಂದ್ರದ ಅಧ್ಯಕ್ಷರಾದ ಅರವಿಂದ್‌, ಮರಿಸ್ವಾಮಿ, ಟಿಎಪಿಸಿಎಂಎಸ್‌ ನಿರ್ದೇಶಕ ಜಯಣ್ಣ, ಶೇಖರಪ್ಪ, ನಂದÜನ್‌, ಸಿದ್ದರಾಜು, ಗಿರೀಶ್‌, ಸಂತೋಷ್‌, ಪ್ರಕಾಶ್‌, ಉಮೇಶ್‌ ಇದ್ದರು.

ಪ್ರಚಾರಕ್ಕೆ ಸ್ಟಾರ್ರಂಗು

ಉಡುಪಿ (ಏ.13): ಕಾಂತಾರ ಸಿನಿಮಾದ ನಾಯಕ ರಿಷಭ್‌ ಶೆಟ್ಟಿ ಅವರು ನಮ್ಮ ಸಿದ್ದಾಂತಕ್ಕೆ ಹತ್ತಿರ ಇದ್ದವರು. ನಮ್ಮ ಸಿದ್ದಾಂತ ಪ್ರತಿಪ್ರಾದನೆ ಮಾಡಿದವರು ರಿಷಭ್ ಆಗಿದ್ದಾರೆ ಎಂದು ಹೇಳುವ ಮೂಲಕ ರಿಷಭ್‌ ಶೆಟ್ಟಿ ಬಿಜೆಪಿ ಪರವಾಗಿ ಪ್ರಚಾರದಲ್ಲಿ ಭಾಗವಹಿಸುತ್ತಾರೆ ಎಂಬ ಸುಳಿವನ್ನು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ನೀಡಿದ್ದಾರೆ.

ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ರಿಷಭ್‌ಶೆಟ್ಟಿ ಕೂಡ ದೇವರ ದರ್ಶನವನ್ನು ಮುಗಿಸಿಕೊಂಡು ಹೊರಬಂದರು.  ಇನ್ನು ರಿಷಭ್‌ ಶೆಟ್ಟಿ ಅವರು ಕೂಡ ಬಿಜೆಪಿಯ ಸ್ಟಾರ್‌ ಪ್ರಚಾರಕರಾಗಿ ಭಾಗವಹಿಸುವುದೇ ಎಂದು ಮಾಧ್ಯಮಗಳಿಂದ ಸಿಎಂ ಬೊಮ್ಮಾಯಿಗೆ ಪ್ರಶ್ನೆ ಮಾಡಲಾಯಿತು. ಈ ವೇಳೆ ಪ್ರತಿಕ್ರಿಯೆ ನೀಡಿದ ಸಿಎಂ, ನಮ್ಮ ಸಿದ್ದಾಂತ ಮತ್ತು ರಿಷಭ್‌ ಶೆಟ್ಟಿ ಅವರ ಸಿದ್ದಾಂತ ಒಂದೇ ಆಗಿದ್ದು, ಅವರೂ ಈ ಹಿಂದೆಯೂ ಹಲವಾರು ಬಾರಿ ಸಿದ್ದಾಂತ ಸಾಮ್ಯತೆ ಆಗಿರುವ ಬಗ್ಗೆ ಪ್ರತಿಪಾದನೆ ಮಾಡಿದ್ದಾರೆ. ಆದರೆ, ಈಗ ಅವರೊಂದಿಗೆ ಬಿಜೆಪಿ ಪರವಾಗಿ ಪ್ರಚಾರ ಮಾಡಿ ಎಂದು ಅಧಿಕೃತವಾಗಿ ಯಾವುದೇ ಚರ್ಚೆಯನ್ನು ಮಾಡಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಎಂದು ಚಿಂತನೆ ಮಾಡಿ ಕ್ರಮವಹಿಸುತ್ತೇವೆ.

click me!