ಬಿಜೆಪಿ ಟಿಕೆಟ್‌ ವಂಚಿತ ರಾಮದಾಸ್‌ ನಿರ್ಧಾರ ಇಂದು

By Kannadaprabha News  |  First Published Apr 18, 2023, 6:39 AM IST

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್‌. ಶ್ರೀವತ್ಸ ಮತ್ತು ಸಂಸದ ಪ್ರತಾಪ ಸಿಂಹ ಅವರು ಶಾಸಕ ಎಸ್‌.ಎ. ರಾಮದಾಸ್‌ ಭೇಟಿಯಾಗಲು ವಿಫಲ ಯತ್ನ ನಡೆಸಿದರು.


 ಮೈಸೂರು :  ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್‌. ಶ್ರೀವತ್ಸ ಮತ್ತು ಸಂಸದ ಪ್ರತಾಪ ಸಿಂಹ ಅವರು ಶಾಸಕ ಎಸ್‌.ಎ. ರಾಮದಾಸ್‌ ಭೇಟಿಯಾಗಲು ವಿಫಲ ಯತ್ನ ನಡೆಸಿದರು.

ಕೃಷ್ಣರಾಜ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್‌ ಘೋಷಣೆ ಆಗುತ್ತಿದ್ದಂತೆಯೇ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಟಿ.ಎಸ್‌. ಶ್ರೀವತ್ಸ ಅವರಿಗೆ ಅಭಿನಂದನೆಗಳ ಸುರಿಮಳೆಗೈದರು.

Latest Videos

undefined

ಬಳಿಕ ಸಂಸದ ಪ್ರತಾಪಸಿಂಹ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ. ರಾಜೇಂದ್ರ, ಪಕ್ಷದ ವಿಭಾಗೀಯ ಪ್ರಭಾರಿ ಮೈ.ವಿ. ರವಿಶಂಕರ್‌ ಅವರು ಟಿ.ಎಸ್‌. ಶ್ರೀವತ್ಸ ಅವರೊಡನೆ ಶಾಸಕ ರಾಮದಾಸ್‌ ಅವರ ವಿದ್ಯಾರಣ್ಯಪುರಂ ಕಚೇರಿಗೆ ತೆರಳಿ ಭೇಟಿಯಾಗಲು ಮುಂದಾದರು.

ಅಷ್ಟರಲ್ಲಾಗಲೇ ಟಿಕೆಟ್‌ ಕೈತಪ್ಪಿದ ಬೇಸರದಲ್ಲಿದ್ದ ಅವರು, ಬೆಂಬಲಿಗರೊಡನ ಮೊದಲ ಮಹಡಿಯಲ್ಲಿ ಸಭೆ ನಡೆಸುತ್ತಿದ್ದರು. ಆದರೆ ಸಭೆಗೆ ಸಂಸದರನ್ನಾಗಲಿ, ಅಭ್ಯರ್ಥಿಯನ್ನಾಗಲಿ ಬಿಡಲಿಲ್ಲ.

ಮೊದಲ ಮಹಡಿಯ ಮೆಟ್ಟಿಲ ಬಳಿಯೇ ರಾಮದಾಸ್‌ ಬೆಂಬಲಿಗರು ಮತ್ತು ಕಚೇರಿ ಸಹಾಯಕರು, ರಾಮದಾಸ್‌ ಅವರು ಕಾರ್ಯಕರ್ತರ ಸಭೆಯಲ್ಲಿದ್ದು, ಯಾರನ್ನೂ ಬಿಡಬಾರದು ಎಂದು ಹೇಳಿದ್ದಾರೆ. ಆದ್ದರಿಂದ ಅವರನ್ನು ಈಗ ಭೇಟಿಯಾಗಲು ಸಾಧ್ಯವಿಲ್ಲ. ನಾಳೆ ಅವರೇ ಬಂದು ಭೇಟಿ ಆಗುತ್ತಾರಂತೆ ಎಂದು ತಿಳಿಸಿದರು.

ಆಗ ಸಭೆ ಮುಗಿಯುವವರೆಗೆ ಕಾಯೋಣ ಎಂದು ಮೆಟ್ಟಿಲ ಬಳಿಯ ಕೊಠಡಿಯಲ್ಲಿ ಸಂಸದ ಪ್ರತಾಪ ಸಿಂಹ, ಅಭ್ಯರ್ಥಿ ಟಿ.ಎಸ್‌. ಶ್ರೀವತ್ಸ, ಪಕ್ಷದ ಉಪಾಧ್ಯಕ್ಷ ಎಂ. ರಾಜೇಂದ್ರ, ಪ್ರಭಾರಿ ಮೈ.ವಿ. ರವಿಶಂಕರ್‌ ಮೊದಲಾದವರು ಕಾದರು.

ಬಳಿಕ ಮೆಟ್ಟಿಲ ಬಳಿ ಕಾಣಿಸಿಕೊಂಡ ರಾಮದಾಸ್‌ ನಾಳೆ ಬೆಂಬಲಿಗರ ಸಭೆ ಕರೆದು ಕಾರ್ಯಕರ್ತರ ಅಭಿಪ್ರಾಯದಂತೆ ಮುನ್ನಡೆಯುವುದಾಗಿ ರಾಮದಾಸ್‌ ಮಾಧ್ಯಮದವರಿಗೆ ತಿಳಿಸಿ ಮತ್ತೆ ಹಿಂದಿರುಗಿದರು. ವಿಷಯ ತಿಳಿದ ಶ್ರೀವತ್ಸ ಮತ್ತು ಪ್ರತಾಪ ಸಿಂಹ ಅವರು ಕಚೇರಿಯತ್ತ ಹಿಂದಿರುಗಿದರು.

ಕೆಆರ್‌ ನಗರದಲ್ಲಿ ಬಿಜೆಪಿ ಗೆಲುವಿನ ವಿಶ್ವಾಸ

 ಕೆ.ಆರ್‌. ನಗರ :  ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಲಿದ್ದು, ಬಿಜೆಪಿ ಅಭ್ಯರ್ಥಿ ಹೊಸಹಳ್ಳಿ ವೆಂಕಟೇಶ್‌ ಅವರು ಜಯಭೇರಿ ಬಾರಿಸುವುದು ಖಚಿತ ಎಂದು ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ಮಂಗಳಾ ಸೋಮಶೇಖರ್‌ ಹೇಳಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಯ ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದು ಅದು ಈ ಬಾರಿ ಸಾಕಾರವಾಗಲಿದೆ ಎಂದರು.

ಯಾರು ಎಷ್ಟುಟೀಕೆ ಮತ್ತು ಅಪ ಪ್ರಚಾರ ಮಾಡಿದರು ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮುಖಂಡರು ಮತ್ತು ಕಾರ್ಯಕರ್ತರು ಮತದಾರರ ಮನೆ ಬಾಗಿಲಿಗೆ ತೆರಳಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಮತ್ತು ಬಡವರ ಪರವಾಗಿರುವ ಕಾರ್ಯಕ್ರಮಗಳು ಹಾಗೂ ಸಾಧನೆಯನ್ನು ತಿಳಿಸಿ ಮತ ಯಾಚಿಸಬೇಕೆಂದು ಅವರು ಸಲಹೆ ನೀಡಿದರು.

ಪಟ್ಟಣದ ತೋಪಮ್ಮನ ದೇವಾಲಯದಿಂದ ಹೊರಟ ಮೆರವಣಿಗೆಯಲ್ಲಿ ಹಾಸನ ಮೈಸೂರು ರಸ್ತೆಯಲ್ಲಿರುವ ಗರುಡ ಗಂಭದ ವೃತ್ತ, ಪುರಸಭೆ ವೃತ್ತದ ಮೂಲಕ ತಾಲೂಕು ಕಚೇರಿಯವರೆ ಮೆರವಣಿಗೆಯಲ್ಲಿ ಸಾಗಿ ಬಂದ ವೆಂಕಟೇಶ್‌ ಚುನಾವಣಾಧಿಕಾರಿ ಸಪ್ರಿಯಾ ಬಾಣಗಾರ್‌ ಅವರಿಗೆ ನಾಮಪತ್ರ ಸಲ್ಲಿಸಿದರು.

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮೈಲ್ಯಾಕ್‌ ಮಾಜಿ ಅಧ್ಯಕ್ಷ ಮೈ.ವಿ. ರವಿಶಂಕರ್‌, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವೈ. ಮಂಜು, ಕೆ.ಆರ್‌. ನಗರ ಕ್ಷೇತ್ರದ ಚುನಾವಣಾ ಉಸ್ತುವಾರಿ ಹೇಮಾನಂದೀಶ್‌, ಜಿಪಂ ಮಾಜಿ ಸದಸ್ಯೆ ನಳಿನಾಕ್ಷಿ ವೆಂಕಟೇಶ್‌, ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ಎಚ್‌.ಡಿ. ಪ್ರಭಾಕರ್‌ ಜೈನ್‌, ಪುರಸಭೆ ಸದಸ್ಯ ಉಮಾಶಂಕರ್‌, ತಾಲೂಕು ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಘವನ್‌ಗೌಡ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಾರ್ಕಡೇಯಸ್ವಾಮಿ, ಎಚ್‌.ವಿ. ಅನಿಲ್‌, ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.

click me!