ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಮೀಸಲಾತಿ ಅಗತ್ಯ : ಪಂಚಮಸಾಲಿ ಶ್ರೀ

By Suvarna News  |  First Published Jul 11, 2022, 4:30 PM IST

ಮುಂದಿನ ದಿನಮಾನದಲ್ಲಿ ಬಡ ಮತ್ತು ಕೃಷಿ ಆಧಾರಿತ ಪಂಚಮಸಾಲಿ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಮೀಸಲಾತಿ ಅನಿವಾರ್ಯವಾಗಿದ್ದು, ಪಕ್ಷ ಬೇಧ ಮರೆತು ಸಮಾಜದ ಎಲ್ಲ ಮುಖಂಡರು ಹೋರಾಟಕ್ಕೆ ಬೆಂಬಲ ನೀಡುವಂತೆ ಕುಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. 


ವರದಿ : ಪರಮೇಶ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 
ಧಾರವಾಡ : ಬರುವಂತ ದಿನಮಾನದಲ್ಲಿ ಬಡ ಮತ್ತು ಕೃಷಿ ಆಧಾರಿತ ಪಂಚಮಸಾಲಿ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಮೀಸಲಾತಿ ಅನಿವಾರ್ಯವಾಗಿದ್ದು, ಪಕ್ಷ ಬೇಧ ಮರೆತು ಸಮಾಜದ ಎಲ್ಲ ಮುಖಂಡರು ಹೋರಾಟಕ್ಕೆ ಬೆಂಬಲ ನೀಡುವಂತೆ ಕುಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. 

ತಾಲೂಕಿನ ನರೇಂದ್ರ ಗ್ರಾಮದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲು ನೀಡುವ ಕುರಿತ ಹೋರಾಟದ ಜಾಗೃತಿ ಸಭೆ ಹಾಗೂ ಪ್ರತಿಜ್ಞೆ ಪಂಚಾಯತ್‌ನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಖಂಡ ಲಿಂಗಾಯತ ಸಮುದಾಯದಲ್ಲಿ ಹಿಂದುಳಿದ ಉಪ ಜಾತಿಗಳಿಗೆ ಈಗಾಗಲೇ ಮೀಸಲಾತಿ ಲಭಿಸಿದೆ. ಆದರೆ ಕೃಷಿ ಯನ್ನು ಅಧಾರವಾಗಿಟ್ಟುಕೊಂಡು ಬಂದಿರುವ ಪಂಚಮಸಾಲಿ ಸಮುದಾಯಕ್ಕೆ ಮಾತ್ರ ಮೀಸಲಾತಿ ಲಭಿಸಿಲ್ಲ. ಈ ಸಮುದಾಯದ ಬಡ ಮಕ್ಕಳಿಗೆ ಶಿಕ್ಷಣ ನೀಡಲು ಪೋಷಕರು ಪರದಾಡುವಂತಾಗಿದೆ. ಇನ್ನು ಕೃಷಿ ಅವಲಂಬಿಸಿ ಬದುಕಲು ಸಾಧ್ಯವಿಲ್ಲ. ಹೀಗಾಗಿ ಪಂಚಮಸಾಲಿ ಸಮಾಜದ (Panchamasali society) ಯುವಕರು ಉದ್ಯೋಗ ಅರಸಿಕೊಂಡು ಅಲೆದಾಡುತ್ತಿದ್ದಾರೆ. ಅವರ ಭವಿಷ್ಯ ಮೀಸಲಾತಿ ಲಭಿಸದೆ ಹೋದರೆ ಕರಾಳವಾಗಲಿದೆ. ಹೀಗಾಗಿ ಸರ್ಕಾರ ಮೀನಾ ಮೇಷ ಎಣಿಸುವುದನ್ನು ಬಿಟ್ಟು ಕೂಡಲೇ ಮೀಸಲಾತಿ ಘೋಷಿಸಬೇಕು ಎಂದು ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದರು.

Tap to resize

Latest Videos

ಪಂಚಮಸಾಲಿ ಮೀಸಲಾತಿಗಾಗಿ ವಿಧಾನಸೌಧದ ಒಳಗೂ ಶಕ್ತಿ ಪ್ರದರ್ಶನ: ಕೂಡಲ ಶ್ರೀ

ಒಂದು ಮನೆಯ ಐದು ಜನ ಅಣ್ಣ ತಮ್ಮಂದಿರಲ್ಲಿ ನಾಲ್ಕು ಜನರು ಮೀಸಲಾತಿ, ಸರ್ಕಾರಿ ಸೌಲಭ್ಯ ಪಡೆದು ಉತ್ತಮ ಸ್ಥಿತಿಯಲ್ಲಿ ಇದ್ದು, ಇನ್ನೊರ್ವ ಸಹೋದರನಿಗೆ ಯಾವುದೇ ಮೀಸಲಾತಿ ಸಿಗದೇ ಕಷ್ಟದಲ್ಲಿ ಇದ್ದಾಗ ಇತರರು ಆತನಿಗೆ ಸಹಾಯ ಮಾಡಬೇಕು. ಇದು ನ್ಯಾಯ ಮತ್ತು ಧರ್ಮ. ಹೀಗಾಗಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಎಲ್ಲಾ ಸಮುದಾಯಗಳು ಬೆನ್ನಿಗೆ ನಿಂತಿವೆ. ನಮ್ಮ ಹೋರಾಟದ ಫಲವಾಗಿ ಇಂದು ಸರ್ಕಾರದ ಮಟ್ಟದಲ್ಲಿ ಕೂಡ ಮೀಸಲಾತಿ ನೀಡುವುದು ಸೂಕ್ತ ಎನ್ನುವ ಹಂತಕ್ಕೆ ಎಲ್ಲರೂ ಬಂದಿದ್ದಾರೆ. ಆದಷ್ಟು ಬೇಗ ಮೀಸಲಾತಿ ಘೋಷಣೆ ಮಾಡಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು. 

ಜು.30 ಕ್ಕೆ ಪ್ರತಿಭಟನೆ : ಧಾರವಾಡ ಜಿಲ್ಲೆಯ ಲಿಂಗಾಯತ ಸಮುದಾಯದಲ್ಲಿ (Lingayath comunity)ಹೆಚ್ಚು ಜನ ಪಂಚಮಸಾಲಿ ಸಮುದಾಯದ ಜನರಿದ್ದು ಅವರೆಲ್ಲರೂ ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಹೀಗಾಗಿ ಜು.30 ರವರೆಗೂ ಧಾರವಾಡ (Dharwad) ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಭೆ ಮತ್ತು ಪ್ರತಿಜ್ಞೆ ಪಂಚಾಯತ್‌ಗಳನ್ನು ಮಾಡಿ ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ. ಕೊನೆಗೆ ಜು.30 ಕ್ಕೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪಂಚಮಸಾಲಿ 2ಎ ಮೀಸಲಾತಿಗಾಗಿ (2A reservation)ಒತ್ತಾಯ ಮಾಡಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. ಆ.22ರವರೆಗೂ ರಾಜ್ಯ ಸರ್ಕಾರಕ್ಕೆ ಮೀಸಲಾತಿ ನೀಡಲು ಗಡುವು ನೀಡಿದ್ದು, ಅಷ್ಟರಲ್ಲಿ ಸರ್ಕಾರ ಮೀಸಲಾತಿ ಘೋಷಣೆ ಮಾಡುವ ಭರವಸೆ ಇದೆ. ಒಂದು ವೇಳೆ ಮೀಸಲು ನೀಡದೆ ಹೋದರೆ ಮುಂದಿನ ಹೋರಾಟ ಇನ್ನಷ್ಟು ತೀವ್ರವಾಗಿ ನಡೆಯಲಿದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿದರು. 

ಮನವೊಲಿಸುವಲ್ಲಿ ಸಿಎಂ ಸಕ್ಸಸ್, ಪಂಚಮಸಾಲಿಗಳ 2 A ಮೀಸಲಾತಿ ಹೋರಾಟಕ್ಕೆ ಬ್ರೇಕ್

ಧಾರವಾಡ ಜಿಲ್ಲಾ ಪಂಚಮಸಾಲಿ ಸಂಘದ ಅಧ್ಯಕ್ಷ ನಿಂಗಣ್ಣ ಕರಿಕಟ್ಟಿ (Ninganna karikatti), ಮಾತನಾಡಿ, ಇಡೀ ರಾಜ್ಯಕ್ಕೆ ಪಂಚಮಸಾಲಿ ಸಮುದಾಯದ ಕೊಡುಗೆಯನ್ನು ಸರ್ಕಾರ ಒಮ್ಮೆ ಪರಿಶೀಲನೆ ಮಾಡಬೇಕು. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇಂದಿನವರೆಗೂ ಕೃಷಿ ಸೇರಿದಂತೆ ಹಲವು ಕ್ಷೇತ್ರದಲ್ಲಿ ಈ ಸಮಾಜ ಉತ್ತಮ ಕೊಡುಗೆ ನೀಡಿದೆ. ಇಂತಹ ಸಮಾಜದ ಬಡ ಮಕ್ಕಳ ಶಿಕ್ಷಣಕ್ಕೆ ಮತ್ತು ಉದ್ಯೋಗಕ್ಕೆ ಮೀಸಲು ನೀಡಲು ಹಿಂದೇಟು ಹಾಕುವುದು ಸರಿಯಲ್ಲ ಎಂದರು. ಧಾರವಾಡ ತಾಲೂಕು  ಪಂಚಮಸಾಲಿ ಸಂಘದ ಅಧ್ಯಕ್ಷ ಪ್ರದೀಪಗೌಡ (pradeep), ಸಮಾಜದ ಮುಖಂಡರಾದ ಮಂಜುನಾಥ ತೀರ್ಲಾಪೂರ (Manjunath tirlapura), ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು. 
 

click me!