ಮೀಸಲಾತಿ: ಮಾದಿಗ ಜನಾಂಗದಿಂದ ಸಂಭ್ರಮಾಚರಣೆ

By Kannadaprabha News  |  First Published Mar 30, 2023, 7:09 AM IST

ಹಲವು ದಶಕಗಳಿಂದ ನೆನಗುದಿಗೆ ಬಿದ್ದಿದ್ದ ಮಾದಿಗ ಜನಾಂಗದ ಒಳ ಮೀಸಲಾತಿಯನ್ನು ಬೊಮ್ಮಾಯಿ ಸರ್ಕಾರ ಜಾರಿಗೆ ತಂದಿರುವುದಕ್ಕೆ ನಂಜನಗೂಡಿನಲ್ಲಿ ಮಾಜಿ ಸಚಿವ ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ. ಶಿವಣ್ಣ ಅವರ ನೇತೃತ್ವದಲ್ಲಿ ಮಾದಿಗ ಜನಾಂಗದವರು ಸಿಹಿ ಹಂಚಿ ಸಂಭ್ರಮಾಚರಿಸಿದರು


  ನಂಜನಗೂಡು : ಹಲವು ದಶಕಗಳಿಂದ ನೆನಗುದಿಗೆ ಬಿದ್ದಿದ್ದ ಮಾದಿಗ ಜನಾಂಗದ ಒಳ ಮೀಸಲಾತಿಯನ್ನು ಬೊಮ್ಮಾಯಿ ಸರ್ಕಾರ ಜಾರಿಗೆ ತಂದಿರುವುದಕ್ಕೆ ನಂಜನಗೂಡಿನಲ್ಲಿ ಮಾಜಿ ಸಚಿವ ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ. ಶಿವಣ್ಣ ಅವರ ನೇತೃತ್ವದಲ್ಲಿ ಮಾದಿಗ ಜನಾಂಗದವರು ಸಿಹಿ ಹಂಚಿ ಸಂಭ್ರಮಾಚರಿಸಿದರು.

ಮಾಜಿ ಸಚಿವ ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಶಿವಣ್ಣ ಅವರು ಪಟ್ಟಣದ ಡಾ.ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ರಾಜ್ಯದಲ್ಲಿ 101 ಜಾತಿಗಳಿದ್ದು, ಎಡಗೈ ಸಮಾಜಕ್ಕೆ ಹೆಚ್ಚಿನ ಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ತಮ್ಮ ದಿಟ್ಟನಿಲುವು ಪ್ರದರ್ಶಿಸುವ ಮೂಲಕ ಜಾರಿಗೆ ತಂದಿದ್ದಾರೆ. ಅವರನ್ನು ಮಾದಿಗ ಸಮಾಜ ಅಭಿನಂದಿಸುತ್ತದೆ ಎಂದರು.

Latest Videos

undefined

ಕಳೆದ 30 ವರ್ಷಗಳಿಂದ ಸಮಾಜ ಜೊಳ ಮೀಸಲಾತಿಗಾಗಿ ಹೋರಾಟ ಮಾಡುತ್ತಿತ್ತು. 2004 ರಲ್ಲಿ ಸರ್ಕಾರ ಸದಾಶಿವ ಆಯೋಗಗಳ ರಚನೆ ಮಾಡಿತು. ಆದರೆ ವರದಿಯನ್ನು ಜಾರಿಗೊಳಿಸಿರಲಿಲ್ಲ, ಬಿಜೆಪಿ ವರಿಷ್ಟರು ಎಲ್ಲರೂ ಸೇರಿ ಸದಾಶಿವ ಆಯೋಗದ ಬದಲು ಒಳ ಮೀಸಲಾತಿಯನ್ನು ಈ ಜನಾಂಗಕ್ಕೆ ನೀಡಬೇಕೆಂದು ತೀರ್ಮಾನಿಸಿ ಒಳಮೀಸಲಾತಿ ಜಾರಿಗೆ ತಂದಿರುವುದಕ್ಕೆ ಸಂತೋಸ ತಂದಿದೆ ಎಂದು ಅವರು ತಿಳಿಸಿದರು.

Blood letter: ಸದಾಶಿವ ವರದಿ ಜಾರಿಗೆ ಆಗ್ರಹಿಸಿ ಸಿಎಂಗೆ ರಕ್ತದಲ್ಲಿ ಪತ್ರ ಬರೆದ ಬಸವರಾಜ ಪೂಜಾರಿ!

ಇಡೀ ರಾಜ್ಯದಲ್ಲಿ ಮಾದಿಗ ಜನಾಂಗಕ್ಕೆ ಒಳಮೀಸಲಾತಿಯಿಂದ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಆರ್ಥಿಕವಾಗಿ ಉದ್ಯೋಗದಲ್ಲಿ ಅನುಕೂಲ ದೊರಕುವ ರೀತಿ ತಡವಾಗಿಯಾದರು ನಮ್ಮ ಸಮುದಾಯಕ್ಕೆ ನ್ಯಾಯ ಸಿಕ್ಕಿದೆ ಆದ್ದರಿಂದ ಪಕ್ಷಾತೀತವಾಗಿ ನಾವು ಅಭಿನಂದಿಸುತ್ತೇವೆ ಎಂದರು.

ಸಂಭ್ರಮಾಚರಣೆಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಧುರಾಜ್‌, ನಗರಸಭಾ ಸದಸ್ಯರಾದ ವಿಜಯಲಕ್ಷ್ಮಿಕುಮಾರ್‌, ಮಂಗಳಮ್ಮ ಪ್ರಕಾಶ್‌, ದೇವು, ಮಹದೇವಪ್ರಸಾದ್‌, ಮುಖಂಡರಾದ ಮಹದೇವು, ಮಾಜಿ ಪುರಸಭಾ ಉಪಾಧ್ಯಕ್ಷ ದೇವರಾಜು, ರಾಜೇಶ್‌, ಶ್ರೀನಿವಾಸ್‌, ಪ್ರಸನ್ನಚಕ್ರವರ್ತಿ, ಕೃಷ್ಣಪ್ಪ, ನಂಜಪ್ಪ, ಆನಂದ್‌, ಪ್ರತಿಧ್ವನಿ ತ್ರಿಣೇಶ್‌, ರೇವಣ್ಣ, ಚಂದ್ರು, ಸಿದ್ದರಾಜು ಇದ್ದರು.

ಮಾದಿಗ ಸಮುದಾಯದ ಜೊತೆ ಪರಂ ಬಾಂಧವ್ಯ

 ಕೊರಟಗೆರೆ :  ಮಾದಿಗ ಸಮುದಾಯದ ಗಂಗಮಾಳಮ್ಮನವರ ಎದೆಹಾಲು ಕುಡಿದು ಬೆಳೆದ ಡಾ.ಜಿ.ಪರಮೇಶ್ವರ್‌ರವರ ತಾತನಿಂದ ಹಿಡಿದು ಅವರ ಕುಟುಂಬವು ಸದಾ ಮಾದಿಗ ಸಮುದಾಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಕಳೆದ ಸಮಾರಂಭವೊಂದರಲ್ಲಿ ಜನಸಾಮಾನ್ಯರ ಆಡುಭಾಷೆಯನ್ನು ಪರಮೇಶ್ವರ್‌ರವರು ಆಡಿರುವುದನ್ನು ವಿರೋಧಿಗಳು ಉದ್ದೇಶ ಪೂರ್ವಕವಾಗಿ ತಪ್ಪು ಅರ್ಥ ಬರುವಂತೆ ಮಾತನಾಡುತ್ತಿದ್ದಾರೆ ಎಂದು ನಗರಪಾಲಿಕೆ ಮಾಜಿ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ವಾಲೇಚಂದ್ರಯ್ಯ ತಿಳಿಸಿದರು.

ಪಟ್ಟಣದ ಕಾಂಗ್ರೆಸ್‌ ಪಕ್ಷದ ರಾಜೀವ್‌ ಭವನದಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾದಿಗ ಸಮುದಾಯದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

'ಒಳಮಿಸಲಾತಿಯನ್ನು ಸಿದ್ದರಾಮಯ್ಯ ವಿರೋಧಿಸಿಲ್ಲ'

ಶಾಸಕರು ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿ ಮಾದಿಗ ಸಮುದಾಯವನ್ನು ಸಮಾನ ರೀತಿಯಲ್ಲಿ ಕಾಣುತ್ತಿದ್ದು, ಎಂದೂ ತಾತ್ಸಾರ ಮನೋಭಾವದಿಂದ ನೋಡಿಲ್ಲ. ಕಾಲೋನಿಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಉನ್ನತ ಸ್ಥಾನ ಪಡೆಯುವ ದೃಷ್ಟಿಯಿಂದ ಸಮಾಜದ ಎಲ್ಲಾ ವ್ಯಕ್ತಿಗಳು ಮತ್ತೆ ಡಾ.ಜಿ.ಪರಮೇಶ್ವರ್‌ರವರನ್ನು ಆಯ್ಕೆ ಮಾಡಲು ಮುಂದೆ ಬಂದಿದ್ದು, ಕೆಲ ವಿರೋಧಿ ವ್ಯಕ್ತಿಗಳ ಮಾತಿಗೆ ಕಿವಿ ಕೊಡದೆ ಡಾ.ಜಿ.ಪರಮೇಶ್ವರ್‌ರನ್ನು ಬೆಂಬಲಿಸುತ್ತಿರುವುದಾಗಿ ತಿಳಿಸಿದರು.

ಮುಖಂಡ ಚಿಕ್ಕರಂಗಯ್ಯ ಮಾತನಾಡಿ, ಡಾ.ಜಿ.ಪರಮೇಶ್ವರ್‌ ಕಳೆದ 35 ವರ್ಷಗಳಿಂದ ಮಧುಗಿರಿ, ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿನಿಂದಲೂ ಮಾದಿಗ ಸಮುದಾಯವನ್ನು ಉತ್ತಮ ಬಾಂಧವ್ಯದೊಂದಿಗೆ ಅಣ್ಣ ತಮ್ಮಂದಿರಂತೆ ಕಾಣುತ್ತಾ ಬಂದಿದ್ದು ಎಂದೂ ಕೀಳಾಗಿ ಕಾಣುವುದು ಅಥವಾ ಮಾತನಾಡುವುದು ಮಾಡಿಲ್ಲ. ಕೇವಲ ರಾಜಕೀಯ ಲಾಭ ಪಡೆಯಲು ಹಾಗೂ ಸಮುದಾಯವನ್ನು ಒಡೆಯುವ ದೃಷ್ಟಿಯಿಂದ ಕೆಲವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಸುಳ್ಳು ಆರೋಪಕ್ಕೆ ಮಾನ್ಯತೆ ನೀಡದೆ ಹಿಂದಿನಂತೆ ಡಾ.ಜಿ.ಪರಮೇಶ್ವರ್‌ರನ್ನೇ ಬೆಂಬಲಿಸಿ ಈ ಬಾರಿ ಚುನಾವಣೆಯಲ್ಲಿ ಆಯ್ಕೆ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.

click me!