ವಿಚಾರಗಳು ದೇಶದ ಸಂಪತ್ತನ್ನು ವೃದ್ಧಿಸುವಂತಿರಲಿ: ವೀಸಿ

By Kannadaprabha News  |  First Published Mar 30, 2023, 6:54 AM IST

ನಮ್ಮ ವಿಚಾರಗಳು ದೇಶದ ಸಂಪತ್ತನ್ನು ವೃದ್ಧಿಸುವಂತಿರಬೇಕು ಎಂದು ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ವೆಂಕಟೇಶ್ವರಲು ಪ್ರತಿಪಾದಿಸಿದರು.


  ತುಮಕೂರು : ನಮ್ಮ ವಿಚಾರಗಳು ದೇಶದ ಸಂಪತ್ತನ್ನು ವೃದ್ಧಿಸುವಂತಿರಬೇಕು ಎಂದು ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ವೆಂಕಟೇಶ್ವರಲು ಪ್ರತಿಪಾದಿಸಿದರು.

ತುಮಕೂರು ವಿಶ್ವ ವಿದ್ಯಾನಿಲಯ ಕುಮಾರವ್ಯಾಸ ಅಧ್ಯಯನ ಪೀಠ, ಗಮಕ ಕಲಾ ಪರಿಷತ್ತು, ತುಮಕೂರು ಜಿಲ್ಲಾ ಸಮಿತಿ, ಗಮಕ ಭಾರತೀ ಚಾರಿಟಬಲ್‌ ಟ್ರಸ್ಟ್‌ ಇವರ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಕುಮಾರವ್ಯಾಸ ಭಾರತ ಸಾಂಸ್ಕೃತಿಕ ಅನುಸಂಧಾನ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Latest Videos

undefined

ಗಳು ವಿಮರ್ಶೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ನಮ್ಮ ಆಲೋಚನೆಗಳು ನಮ್ಮ ವ್ಯಕ್ತಿತ್ವ ರೂಪಿಸುತ್ತವೆ. ಸಾಹಿತ್ಯ, ಕಾವ್ಯ ಎಂದಿಗೂ ಪ್ರಸ್ತುತ. ಎಲ್ಲಾ ಪಂಥಗಳನ್ನು ಮೀರಿದ ಕವಿ ಕುಮಾರವ್ಯಾಸ. ವರ್ಣನೆ, ವೈಭವಕುಮಾರವ್ಯಾಸನ ಕಾವ್ಯಗಳಲ್ಲಿ ಮೇಳೈಸಿದವು. ಅಧ್ಯಯನಕ್ಕೆ ಪೂರಕವಾದ ಸಮಗ್ರ ಮಾಹಿತಿಯನ್ನು ಅಧ್ಯಯನ ಪೀಠಗಳಿಂದ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಕುಲಪತಿಗಳು ಕರೆ ನೀಡಿದರು.

ತುಮಕೂರು ವಿವಿ ಸಿಂಡಿಕೇಟ್‌ ಹಾಗೂ ಕುಮಾರವ್ಯಾಸ ಅಧ್ಯಯನ ಪೀಠದ ಸದಸ್ಯ ಡಾ.ಕೆ.ರಾಜೀವಲೋಚನ ಮಾತನಾಡಿ, ಕುಮಾರವ್ಯಾಸ ಜನರ ಮಧ್ಯೆಇರುವ ಜನಪ್ರಿಯ ಕವಿ. ಅವನ ಕಾವ್ಯ ಶಕ್ತಿ ಅಂತಹುದು. ಅವನ ಕಾವ್ಯಗಳು ನಾಡಿನ ಎಲ್ಲೆಡೆಯು ಪ್ರತಿಧ್ವನಿತವಾಗಿದೆ ಎಂದು ಹೇಳಿದರು.

ತುಮಕೂರು ವಿವಿ ಕುಮಾರವ್ಯಾಸ ಅಧ್ಯಯನ ಪೀಠದ ಸಂಯೋಜಕ ಡಾ. ಪಿ. ಎಂ.ಗಂಗಾಧರಯ್ಯ ಮಾತನಾಡಿ, ಅಧ್ಯಯನ ಕೇಂದ್ರಗಳ ಆಶಯ ಸದಾ ಜ್ಞಾನ ವಿಸ್ತಾರವಾಗಿರಬೇಕು. ಸಂಸ್ಕೃತಿ, ಪುರಾಣ,ಇತಿಹಾಸ ಪುಟಗಳನ್ನು ತಿರುವಿ, ಕಲಿಕೆಗೆ ಅಳವಡಿಸಿಕೊಳ್ಳುವಂತಿರಬೇಕು. ನಮ್ಮ ಅಧ್ಯಯನ ಪೀಠ ಬೇರೊಂದು ಕಾರ್ಯಕ್ರಮಕ್ಕೆ ಮುನ್ನುಡಿಯಾಗಬೇಕು ಎಂದರು.

ಡಾ. ಜ್ಯೋತಿ ಶಂಕರ್‌ ಕುಮಾರವ್ಯಾಸ ಭಾರತದಲ್ಲಿ ಕ್ಷಾತ್ರ ದ್ರೌಪದಿ, ಜಯ ಪ್ರಾಣೇಶ್‌ ಕುಮಾರವ್ಯಾಸ ಭಾರತದಲ್ಲಿ ನೈತಿಕ ಮೌಲ್ಯಗಳು, ಶಾಂತಾಗೋಪಾಲ್‌ ಕುಮಾರವ್ಯಾಸನ ಸಂಗ್ರಹ-ವಿಸ್ತಾರ ಕೌಶಲ ವಿಚಾರಗಳ ಕುರಿತು ಮಾತನಾಡಿದರು.

ಕುಮಾರವ್ಯಾಸ ಭಾರತದಲ್ಲಿ ಶ್ರೀಕೃಷ್ಣ ರಾಯಭಾರ ಕುರಿತು ಗಂಗಮ್ಮ ಕೇಶವಮೂರ್ತಿ ಗಮಕ ವಾಚಿಸಿದರು. ವಿದ್ಯಾರ್ಥಿ ಮತ್ತು ಸಂಶೋಧನಾರ್ಥಿಗಳು ಪ್ರಬಂಧ ಮಂಡಿಸಿದರು. ಕಾರ್ಯಕ್ರಮದಲ್ಲಿ ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವ ಪೊ›.ಕೆ.ಪ್ರಸನ್ನಕುಮಾರ್‌, ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಡಾ.ಅಣ್ಣಮ್ಮ, ಸ್ನಾತಕೋತ್ತರ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.ನಾಗಭೂಷಣ್‌ ಬಗ್ಗನಡು ಭಾಗವಹಿಸಿದ್ದರು. ತುಮಕೂರು ವಿವಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಗೀತಾ ವಸಂತ ನಿರೂಪಿಸಿದರು.

ಕುಮಾರವ್ಯಾಸನ ಕಾವ್ಯದಲ್ಲಿ ವೈಭವ, ಸೌಂದರ್ಯ, ಸ್ಫೂರ್ತಿ, ಭಾಷೆ, ಅಲಂಕಾರದ ಶೈಲಿ ಅದ್ಭುತ. ವ್ಯಾಕರಣವನ್ನು ಮೀರಿ ಭಾಷೆ ಕಟ್ಟಿ, ಕಾವ್ಯ ಹೊರ ಹೊಮ್ಮಿಸಿದವ. ಕುಮಾರವ್ಯಾಸನ ಕಾವ್ಯದಲ್ಲಿ ಪಾತ್ರ ಸೃಷ್ಟಿ, ಪಾತ್ರಗಳ ಸಂಚಾರ, ಪಾತ್ರಗಳ ಚಿತ್ರಣ, ಗತಿ, ಲಯ, ಹೋಲಿಕೆ ಎಲ್ಲವೂ ಗತವೈಭವದ ಸೊಗಸನ್ನು ವರ್ಣಿಸುತ್ತದೆ. ಎಲ್ಲಕ್ಕೂ ಮೀರಿ ಗ್ರಾಮೀಣ ಉಪಮೇಯಗಳಲ್ಲಿ ಕಾವ್ಯದ ಸೊಬಗನ್ನು ಸೊಗಸಾಗಿ ವರ್ಣಿಸಿದವ ಕುಮಾರವ್ಯಾಸ.

ಡಾ.ಎ.ವಿ.ಪ್ರಸನ್ನ ಹಿರಿಯ ವಿದ್ವಾಂಸ

click me!