ಮಲ್ಪೆ ಬಂದರು: ನೀರಿನ ಮಧ್ಯೆ ವರ್ಷದಿಂದ ಸಿಲುಕಿಕೊಂಡಿದ್ದ ನಾಯಿಗಳ ರಕ್ಷಣೆ!

By Kannadaprabha News  |  First Published Jun 17, 2023, 5:59 AM IST

ವರ್ಷಕ್ಕೂ ಅಧಿಕ ಸಮಯದಿಂದ ಮಲ್ಪೆ ಬಂದರಿನ ದಕ್ಕೆಯಡಿ ಬಂಧಿಯಾಗಿದ್ದ 2 ನಾಯಿಗಳನ್ನು ಆಪತ್ಬಾಂಧವ ಈಶ್ವರ್‌ ಮಲ್ಪೆ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.


ಉಡುಪಿ (ಜೂ.17) ವರ್ಷಕ್ಕೂ ಅಧಿಕ ಸಮಯದಿಂದ ಮಲ್ಪೆ ಬಂದರಿನ ದಕ್ಕೆಯಡಿ ಬಂಧಿಯಾಗಿದ್ದ 2 ನಾಯಿಗಳನ್ನು ಆಪತ್ಬಾಂಧವ ಈಶ್ವರ್‌ ಮಲ್ಪೆ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

ಬಂದರಿನೊಳಗೆ ಬೋಟಗಳನ್ನು ಕಟ್ಟುವಲ್ಲಿ ದಕ್ಕೆಯ ಅಡಿಯಲ್ಲಿ ಈ ನಾಯಿಗಳು ವಾಸವಾಗಿದ್ದವು. ಅವು ಮರಿಗಳಿದ್ದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದು, ಸುಮಾರು 10 ಅಡಿಗೂ ಎತ್ತರವಿರುವ ದಕ್ಕೆಯ ಮೇಲಕ್ಕೆ ಬರಲಾಗದೆ ದಕ್ಕೆಯಡಿಯಲ್ಲಿರುವ ಸಿಮೆಂಟ್‌ ಕಟ್ಟೆಯನ್ನೇರಿ ಕುಳಿತಿದ್ದಿರಬೇಕು.

Tap to resize

Latest Videos

undefined

 

ಉಡುಪಿ: ಬಲವಾದ ಗಾಳಿ, ಮಲ್ಪೆ ಕಡಲಿಗೆ ಇಳಿಯದ ಮೀನುಗಾರಿಕೆ ಬೋಟುಗಳು!

ಇದನ್ನು ಗಮನಿಸಿದ ಮೀನುಗಾರರು ಸುಮಾರು ಒಂದೂವರೆ ವರ್ಷದಿಂದ ಅವುಗಳಿಗೆ ಮೇಲಿನಿಂದಲೇ ಮೀನು, ಆಹಾರವನ್ನು ಎಸೆಯುತ್ತಿದ್ದರು. ಅದನ್ನು ತಿಂದು ಅವು ಅಲ್ಲಿಯೇ ಅಸಹಾಯಕವಾಗಿ ವಾಸವಾಗಿದ್ದವು.

ವಿಷಯ ತಿಳಿದ ಈಶ್ವರ್‌ಅವುಗಳನ್ನು ಮೇಲಕ್ಕೆ ತರಲು ನಿರ್ಧರಿಸಿ, ಕಾರ್ಯಾಚರಣೆಗೆ ಇಳಿದರು. ದಕ್ಕೆಗೆ ಇಳಿದು ನಾಯಿಗಳಿಗೆ ತಿಂಡಿಯ ಆಸೆ ತೋರಿಸಿ ಬೋನಿನೊಳಗೆ ಹೊಗಿಸುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಹೆದರಿಕೆಯಿಂದ ಅವರನ್ನು ಕಚ್ಚುವುದಕ್ಕೂ ಪ್ರಯತ್ನಿಸಿದವು. ಆದರೂ ಛಲ ಬಿಡದೆ ಎರಡೂ ನಾಯಿಗಳನ್ನು ಮೇಲಕ್ಕೆ ಎತ್ತಿ ಅವುಗಳನ್ನು ಅತಂತ್ರ ಸ್ಥಿತಿಯಿಂದ ಬಿಡುಗಡೆಗೊಳಿಸಿದರು. ಅವರ ಈ ಮಾನವೀಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಪ್ರಿಯರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.

Weather forecsat: ಇನ್ನೂ ಒಂದು ವಾರ ಕರಾವಳಿಯಲ್ಲಿ ಮುಂಗಾರು ದುರ್ಬಲ!

ಈಶ್ವರ್‌ ಮಲ್ಪೆ ಅವರು ಕಳೆದೊಂದು ದಶಕದಿಂದ ಮಲ್ಪೆ ಬಂದರು, ಸಮುದ್ರದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದವರನ್ನು ರಕ್ಷಿಸುವ ಮಹತ್ತರ ಕೆಲಸ ಮಾಡುತ್ತಿದ್ದಾರೆ, ಅನೇಕ ಮಂದಿಯನ್ನು ಬದುಕಿಸಿದ್ದಾರೆ. ಬಂದರಿನಲ್ಲಿ ಸಮುದ್ರಕ್ಕೆ ಬಿದ್ದು ಮೃತಪಟ್ಟನೂರಾರು ಶವಗಳನ್ನು ಮೇಲಕ್ಕೆ ಎತ್ತಿದ್ದಾರೆ.

click me!