ಆಹಾರ ಪದಾರ್ಥಗಳಲ್ಲಿ ಹೆಚ್ಚು ಹೆಚ್ಚು ಸಿರಿಧಾನ್ಯಗಳನ್ನು ಬಳಸಿದರೆ ಉತ್ತಮ ಆರೋಗ್ಯದಿಂದಿರಲು ಸಾಧ್ಯ. ಇಂದಿನ ಆಹಾರಗಳು ಗುಣಮಟ್ಟದಿಂದ ಇಲ್ಲ. ಆದ್ದರಿಂದ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ನಮ್ಮ ಪೂರ್ವಜರು ಬಳಸುತ್ತಿರುವ ಸಿರಿಧಾನ್ಯಗಳನ್ನು ದಿನ ನಿತ್ಯದ ಆಹಾರದಲ್ಲಿ ಬಳಸಿದರೆ ಆರೋಗ್ಯಕರವಾಗಿರಬಹುದು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಶಿರಾ : ಆಹಾರ ಪದಾರ್ಥಗಳಲ್ಲಿ ಹೆಚ್ಚು ಹೆಚ್ಚು ಸಿರಿಧಾನ್ಯಗಳನ್ನು ಬಳಸಿದರೆ ಉತ್ತಮ ಆರೋಗ್ಯದಿಂದಿರಲು ಸಾಧ್ಯ. ಇಂದಿನ ಆಹಾರಗಳು ಗುಣಮಟ್ಟದಿಂದ ಇಲ್ಲ. ಆದ್ದರಿಂದ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ನಮ್ಮ ಪೂರ್ವಜರು ಬಳಸುತ್ತಿರುವ ಸಿರಿಧಾನ್ಯಗಳನ್ನು ದಿನ ನಿತ್ಯದ ಆಹಾರದಲ್ಲಿ ಬಳಸಿದರೆ ಆರೋಗ್ಯಕರವಾಗಿರಬಹುದು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ತಾಲೂಕಿನ ಯರಗುಂಟೆ ಗ್ರಾಮದಲ್ಲಿ ಜೀನಿ ಹೆಲ್ತಮಿಲೆಟ್ ಅವರ ಮತ್ತೊಂದು ಉತ್ಪನ್ನವಾದ ಸಿರಿಧಾನ್ಯಗಳ ಹಾಲಿನ ಸಿರಿ ಉತ್ಪನ್ನ ಬಿಡುಗಡೆ ಮಾಡಿ ಮಾತನಾಡಿದ ಅವರು, ಶಿರಾ ತಾಲೂಕಿನಲ್ಲಿ ಯರಗುಂಟೆ ಎಂಬ ಕುಗ್ರಾಮದಿಂದ ದಿಲೀಪ್ ಕುಮಾರ್ ಅವರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದಂತಹ ಜೀನಿ ಸಿರಿಧಾನ್ಯಗಳ ಉತ್ಪನ್ನವನ್ನು ಪ್ರಸಿದ್ದಿ ಮಾಡಿದ್ದಾರೆ. ಅವರ ಸಾಧನೆ ಇತರರಿಗೆ ಸ್ಪೂರ್ತಿಯಾಗಿದೆ. ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕೆಂಬ ಛಲ, ಶ್ರದ್ಧೆ, ಪ್ರಾಮಾಣಿಕತೆ ಇದ್ದರೆ ಸಾಧನೆ ಸಾಧ್ಯ ಎಂಬುದನ್ನು ತೋರಿಸಿದ್ದಾರೆ ಎಂದ ಅವರು ಕಳೆದ ಬಾರಿ ಕಾಂಗ್ರೆಸ್ ಸರಕಾರ ಸಿರಿಧಾನ್ಯಗಳನ್ನು ರೈತರು ಹೆಚ್ಚು ಬೆಳೆಯಬೇಕೆಂದು ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹ ಧನ ನೀಡಿತ್ತು ಎಂದರು.
ಬೆಂಗಳೂರು ಕೃಷಿ ವಿವಿ ನಾಗರಾಜು ಮಾತನಾಡಿ, ದಿಲೀಪ್ ಕುಮಾರ್ ಅವರು ಒಂದು ಚಿಕ್ಕ ಮನೆಯಲ್ಲಿ ಪ್ರಾರಂಭಿಸಿದ ಸಿರಿಧಾನ್ಯಗಳ ಉತ್ಪನ್ನ ಇಂದು ಆಗಾದಮಟ್ಟದಲ್ಲಿ ಅಭಿವೃದ್ಧಿ ಹೊಂದಿದೆ. ರೈತರು ತಮ್ಮ ಜಮೀನಿನಲ್ಲಿ ಉತ್ತಮ ಬೆಳೆಯನ್ನು ಬೆಳೆಯಿರಿ. ನಿಮಗೆ ಏನಾದರೂ ಮಾರ್ಗದರ್ಶನ ಬೇಕಾದರೆ ನಿಮ್ಮ ಹತ್ತಿರದ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ ಎಂದರು.
ಜೀನಿ ಸಂಸ್ಥೆಯ ಮುಖ್ಯಸ್ಥ ದಿಲೀಪ್ ಕುಮಾರ್ ಮಾತನಾಡಿ, ಜೀನಿ ಉತ್ಪನ್ನವನ್ನು 2017ರಲ್ಲಿ ಪ್ರಾರಂಭಿಸಿದೆವು. ಇಲ್ಲಿಗೆ ಐದು ವರ್ಷಗಳು ಕಳೆದಿವೆ. ನಮ್ಮ ಉತ್ಪನ್ನಗಳು ಎಲ್ಲಾ ಕಡೆಯಲ್ಲೂ ಉತ್ತಮ ಬೇಡಿಕೆ ಇದ್ದು, ಬೇಡಿಕೆಗೆ ತಕ್ಕಂತೆ ನಾವು ಜನರಿಗೆ ನೀಡಲು ಆಗುತ್ತಿಲ್ಲ ಅಷ್ಟುಬೇಡಿಕೆ ಇದೆ. ಇಂದು ಜೀನಿ ಮಿಲೇಟ್ ಮಿಲ್‌್ಕ ಪೌಡರ್ ಉತ್ಪನ್ನ ಬಿಡುಗಡೆ ಮಾಡಿದ್ದೇವೆ. ನಮ್ಮ ಜೀನಿ ಮನೆ ಮಾತಾಗಲು ನಮ್ಮ ವಿತರಕರೂ ಸಹ ಕಾರಣರಾಗಿದ್ದಾರೆ. ನಮ್ಮೆಲ್ಲಾ ಸಾಧನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.
ಕಾರ್ಯಕ್ರಮದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಡಿ.ಎಂ.ಗೌಡ, ಮುಖಂಡರಾದ ಬಾಲೇನಹಳ್ಳಿ ಪ್ರಕಾಶ್, ಪಿ.ಬಿ.ನರಸಿಂಹಯ್ಯ, ಹೆಚ್.ಎಲ್.ರಂಗನಾಥ್, ತಿಪ್ಪೇಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.