Kolara ಟೊಮೆಟೋ ದರ ಭರ್ಜರಿ ಏರಿಕೆ : ರೈತರಿಗೆ ಬಂಪರ್

By Kannadaprabha News  |  First Published Oct 9, 2021, 1:23 PM IST
  • ಟೊಮೆಟೋ ಬೆಲೆ ಏರಿಕೆಯಾಗಿದ್ದು ರೈತರಿಗೆ ಶುಕ್ರದೆಸೆ ತಂದಿದೆ
  • ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ಬಾಕ್ಸ್‌ ಒಂದಕ್ಕೆ ಒಂದು ಸಾವಿರಕ್ಕೂ ಹೆಚ್ಚು ಬೆಲೆಗೆ ಮಾರಾಟ

 ಕೋಲಾರ (ಅ.09):  ಟೊಮೆಟೋ (Tomato) ಬೆಲೆ ಏರಿಕೆಯಾಗಿದ್ದು (Price) ರೈತರಿಗೆ ಶುಕ್ರದೆಸೆ ತಂದಿದೆ. ಕೋಲಾರದ (Kolar) ಎಪಿಎಂಸಿ (APMC) ಮಾರುಕಟ್ಟೆಯಲ್ಲಿ 15 ಕೆಜಿ ಬಾಕ್ಸ್‌ ಒಂದಕ್ಕೆ ಒಂದು ಸಾವಿರಕ್ಕೂ ಹೆಚ್ಚು ಬೆಲೆಗೆ ಮಾರಾಟವಾಗಿದೆ. ತರಕಾರಿ ಚಿಲ್ಲರೆ ಮಾರಾಟ ಅಂಗಡಿಗಳಲ್ಲಿ ಒಂದು ಕೆ.ಜಿ.ಟೊಮೆಟೋ ಬೆಲೆ 60 ರಿಂದ 80 ರುಪಾಯಿಗಳಿಗೆ ಏರಿಕೆಯಾಗಿದೆ. ಕಳೆದ ವಾರ ಬಾಕ್‌ ದರ 600 ರು.ಗಳಷ್ಟಿತ್ತು.

ಕಳೆದ ಕೆಲವು ತಿಂಗಳುಗಳಿಂದ ಬೆಲೆ ಇಲ್ಲದೆ ತತ್ತರಿಸಿ ಹೋಗಿದ್ದ ಟೊಮೆಟೋ ಬೆಳೆಗಾರರಿಗೆ ಈಗ ಸಂತಸವನ್ನುಂಟು ಮಾಡಿದೆ. ಬೆಲೆ ಇನ್ನಷ್ಟುಏರಿಕೆಯಾಗುವ ಸಾಧ್ಯತೆ ಇದೆ ಎಂದು ಟೊಮೆಟೋ ವ್ಯಾಪಾರಿಗಳು ಹೇಳುತ್ತಾರೆ.

Tap to resize

Latest Videos

undefined

ಟೊಮ್ಯಾಟೊ ಮಣ್ಣುಪಾಲು: ಸರ್ಕಾರದ ಪರಿಹಾರ ಅರೆಕಾಸಿನ ಮಜ್ಜೆಗೆ ಎಂದ ಅನ್ನದಾತ

ಟೊಮೆಟೋ ಉತ್ಪಾದನೆ ಕುಸಿತ

ಕಳೆದ ಜೂನ್‌ ತಿಂಗಳಿಂದ ಇದುವರೆಗೂ ಟೊಮೆಟೋಗೆ ಬೆಲೆ ಇಲ್ಲದೆ ಇದ್ದುದರಿಂದ ಟೊಮೆಟೋ ಬೆಳೆಯಿಂದ ನಷ್ಟಅನುಭವಿಸಿದ್ದ ರೈತರು (Farmers) ಟೊಮೆಟೋ ಬೆಳೆಯಲು ಮುಂದಾಗದೆ ಇರುವುದರಿಂದ ಜಿಲ್ಲೆಯಲ್ಲಿ ಉತ್ಪಾದನೆ ಕಡಿಮೆಯಾಗಿ ಬೆಲೆ ಏರಿಕೆಯಾಗಿದೆ. ಸದ್ಯ ಮಾರುಕಟ್ಟೆಗೆ (Market) 11 ಸಾವಿರ ಟನ್‌ ಟೊಮೆಟೋ ಪ್ರತಿದಿನ ಬರುತ್ತಿದೆ, ಸ್ಥಳೀಯವಾಗಿ ಟೊಮೆಟೋ ಉತ್ಪಾದನೆ ಇಲ್ಲದೆ ಇರುವುದರಿಂದ ಚಿತ್ರದುರ್ಗ (Chitradurga) ಜಿಲ್ಲೆ ಹಾಗು ಆಂಧ್ರಪ್ರದೇಶದಿಂದ (Andhra Pradesh) ಟೊಮೆಟೋ ಬರುತ್ತಿದೆ.

ಕೋಲಾರದ (Kolar) ಮಾರುಕಟ್ಟೆಯಿಂದ ಟೊಮೆಟೋ ಮಹಾರಾಷ್ಟ್ರ (Maharashtra),ಕೇರಳ (Kerala), ಆಂಧ್ರ ತಮಿಳುನಾಡು (Tamilnadu), ಒರಿಸ್ಸಾ,ಮಧ್ಯಪ್ರದೇಶ (Madhyapradesh),ಪಂಜಾಬ್‌, ಪಶ್ಚಿಮಬಂಗಾಳ (West Bengal) ಮುಂತಾದ ರಾಜ್ಯಗಳಿಗೆ ಸರಬರಾಜಾಗುತ್ತದೆ. ಮಹಾರಾಷ್ಟ್ರ ಮತ್ತು ಒರಿಸ್ಸಾ ಹಾಗು ಆಂಧ್ರಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಅಲ್ಲಿನ ಟೊಮೆಟೋ ಬೆಳೆಗಳು ಹಾಳಾಗಿ ಇಲ್ಲಿನ ಟೊಮೆಟೋಗೆ ಬೆಲೆ ಬಂದಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ಉತ್ತಮ ಬೆಳೆ ಇದ್ದಾಗ ದರ ಕುಸಿತ

ಜಿಲ್ಲೆಯಲ್ಲಿ ಬೆಳೆಯುವ ಟೊಮೆಟೋಗೆ ಮೇ ತಿಂಗಳಿನಿಂದ ಸೆಪ್ಟಂಬರ್‌ ತಿಂಗಳವರೆಗೆ ಉತ್ತಮ ಮಾರುಕಟ್ಟೆಇರುತ್ತದೆ ಆದರೆ ಈ ಬಾರಿ ಕೆಸಿ ವ್ಯಾಲಿಯಿಂದ (KC Vally) ನೀರು ಬಳಸಿಕೊಂಡು ಹೆಚ್ಚಿನ ಟೊಮೆಟೋ ಬೆಳೆದಿದ್ದರಿಂದ ಮತ್ತು ಹೊರ ರಾಜ್ಯಗಳಲ್ಲೂ ಯತೇಚ್ಛವಾಗಿ ಟೊಮೆಟೋ ಬೆಳೆದಿದ್ದರಿಂದ ಮಾರುಕಟ್ಟೆಯಲ್ಲಿ ಟೊಮೆಟೋಗೆ ಬೆಲೆ ಸಿಗಲಿಲ್ಲ.

ಫ್ರಿಜ್ ಇಲ್ಲದೆಯೂ ತರಕಾರಿ ಫ್ರೆಷ್ ಆಗಿರಲು ಇಲ್ಲಿವೆ ಸಿಂಪಲ್ ಟಿಪ್ಸ್

18 ಸಾವಿರ ಟನ್‌ ಬೆಳೆಯುತ್ತಿದ್ದ ಜಿಲ್ಲೆಯಲ್ಲಿ ಕೆಸಿ ವ್ಯಾಲಿ ನೀರಿನಿಂದ 34 ಸಾವಿರ ಟನ್‌ ಬೆಳೆದಿದ್ದರು, ಟೊಮೆಟೋ ಲಾಭದಾಯಕ ಬೆಳೆ ಎಂದು ತಿಳಿದು ಟೊಮೆಟೋ ಬೆಳೆಗಾರರಲ್ಲದವರೂ, ರಿಯಲ್‌ ಎಸ್ಟೇಟ್‌ (Real Estate) ಉದ್ಯಮಿಗಳು, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರು, ವ್ಯಾಪಾರಿಗಳೂ ಜಮೀನುಗಳನ್ನು ಲೀಸ್‌ಗೆ ಪಡೆದು ಬಂಡಾವಾಳ ಹಾಕಿ ಟೊಮೆಟೋ ಬೆಳೆದಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಟೊಮೆಟೋ ಬೆಳೆದುದರಿಂದ ಮೂಲ ಬೆಳೆಗಾರರು ತೀವ್ರ ನಷ್ಟಕ್ಕೆ ಒಳಗಾಗಿದ್ದರು. ಕಳೆದ ಜೂನ್‌ ತಿಂಗಳಿಂದ ಇಲ್ಲಿಯವರೆಗೂ ಅಂದರೆ ಕಳೆದ ನಾಲ್ಕು ತಿಂಗಳು ಟೊಮೆಟೋಗೆ ಬೆಲೆ ಇರಲಿಲ್ಲ.

ಬೆಲೆ ಇಲ್ಲದೆ ತೋಟದಲ್ಲೇ ಕೊಳೆತು ಹೋದವು, ಮಾರುಕಟ್ಟೆಗೆ ಬಂದ ಟೊಮೆಟೋವನ್ನು ಅಲ್ಲಿಯೂ ಬೆಲೆ ಸಿಗದೆ ರಸ್ತೆಗಳಿಗೆ ಚೆಲ್ಲಾಡಿದರು. ಟೊಮೆಟೋಗೆ ಕೇವಲ 40ರಿಂದ 150 ರೂ ಮಾತ್ರ ಬೆಲೆ ಇತ್ತು. ಹೀಗಾಗಿ ಬಹಳ ರೈತರು ತೀವ್ರ ನಷ್ಟಕ್ಕೆ ಒಳಗಾಗಿದ್ದರು.

ಕೋರೋನಾದಿಂದ ಬೆಲೆ ಕುಸಿತ: ಲಾಕ್‌ಡೌನ್‌ (Lockdown) ಸಡಿಲಿಕೆ ನಂತರ ಲಾರಿ ಮತ್ತು ಇತರೆ ವಾಹನಗಳ ಓಡಾಟ ಮತ್ತು ಅಂತರ್‌ರಾಜ್ಯ ವಾಹನಗಳ ಓಡಾಟಕ್ಕೆ ಅನುಕೂಲವಾಗಿದ್ದರಿಂದ ಟೊಮೆಟೊ ಹೊರ ರಾಜ್ಯಗಳಿಗೂ ಸರಬರಾಜು ಆಗುತ್ತಿದ್ದರಿಂದ ಸ್ವಲ್ಪ ಚೇತರಿಕೆ ಕಂಡಿತ್ತು. ಇದೀಗ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆಯಾದರೂ ಹೆಚ್ಚಿನ ಮಂದಿ ರೈತರು ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ.

ಕೋಲಾರ (Kolar) ಎಪಿಎಂಸಿಯಲ್ಲಿ ಟೊಮೆಟೋ ಬಾಕ್ಸ್‌ ಒಂದು ಸಾವಿರಕ್ಕೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ನಾಲ್ಕು ತಿಂಗಳಿಂದ ಬೆಲೆ ಇಲ್ಲದೆ ಇದ್ದುದರಿಂದ ಹೆಚ್ಚಿನ ರೈತರು ಟೊಮೆಟೋ ಬೆಳೆಯಲು ಮುಂದಾಗಲಿಲ್ಲ ಹೀಗಾಗಿ ಉತ್ಪಾದನೆ ಕಡಿಮೆಯಾಗಿ ಬೆಲೆ ಹೆಚ್ಚಾಗಿದೆ. ಇದೇ ಬೆಲೆ ಇನ್ನೂ 2 ತಿಂಗಳ ಕಾಲ ಇರಬಹುದೆಂದು ನಿರೀಕ್ಷಿಸಲಾಗಿದೆ. ಜಿಲ್ಲೆಯಲ್ಲಿ ನೀರಿನ ಅಭಾವ ಇದೆ. ಇಂತಹ ಪರಿಸ್ಥಿತಿಯಲ್ಲೂ ನಮ್ಮ ರೈತರು ಕಷ್ಟಪಟ್ಟು ಬೆಳೆ ಮಾಡುತ್ತಾರೆ. ಕೆಲವು ಭಾಗಗಳಲ್ಲಿ ಕೆಸಿ ವ್ಯಾಲಿ ನೀರಿನಿಂದ ರೈತರಿಗೆ ಅನುಕೂಲಕರವಾಗಿದ್ದು ಟೊಮೆಟೋ ಬೆಳೆಯಲು ಸಾಧ್ಯವಾಗಿದೆ.

- ರವಿಕುಮಾರ್‌, ಕಾರ್ಯದರ್ಶಿ, ಎಪಿಎಂಸಿ, ಕೋಲಾರ

click me!