
ವಿವಾಹವನ್ನು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ವಿವಾಹ ನೋಂದಣಿಯಿಲ್ಲದಿದ್ದರೆ ಕೆಲವೊಂದು ಸರ್ಕಾರಿ ಸೌಲಭ್ಯಗಳು ಕೂಡ ಸಿಗುವುದಿಲ್ಲ. ಆದರೆ ವಿವಾಹದ ಬಳಿಕ ಇದರ ನೋಂದಣಿಗಾಗಿ ಕಚೇರಿಗಳನ್ನು ಅಲೆಯಬೇಕಾಗಿರುವ ಕಾರಣ, ಇಂದು ಮಾಡಿದ್ರಾಯ್ತು, ನಾಳೆ ಮಾಡಿದ್ರಾಯ್ತು ಎಂದು ಎಷ್ಟೋ ಮಂದಿ ಅದನ್ನು ಮುಂದಕ್ಕೆ ಹಾಕುತ್ತಲೇ ಬರುತ್ತಾರೆ. ಆದರೆ ರಾಜ್ಯ ಸರ್ಕಾರ ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಇದರ ನೋಂದಣಿಗೆ ಅವಕಾಶವನ್ನು ಕಲ್ಪಿಸಿದೆ. ಕಾವೇರಿ ವೆಬ್‌ಸೈಟ್ ಮೂಲಕ, ಹಲವು ದಾಖಲೆಗಳನ್ನು ನೋಂದಣಿ ಮಾಡಿಕೊಳ್ಳಲು ಅವಕಾಶವಿದ್ದು, ಅದರಂತೆಯೇ ಮದುವೆ ನೋಂದಣಿಯನ್ನೂ ಮಾಡಿಕೊಳ್ಳಬಹುದಾಗಿದೆ.
- ಮೊದಲಿಗೆ https://igr.karnataka.gov.in/page/Department+Statistics/Marriage+Registration/kn ವೆಬ್ಸೈಟ್ಗೆ ಭೇಟಿ ಕೊಡಿ.
- ಎಡಭಾಗದ ಮೇಲು ತುದಿಯಲ್ಲಿ ಲಾಗಿನ್ ಎನ್ನುವ ಆಪ್ಷನ್ ಇದೆ. ಅಲ್ಲಿ ನೀವು ಸೂಕ್ತ ಮಾಹಿತಿ ನೀಡಿ ಲಾಗಿನ್ ಆಗಿ. ಮೊದಲೇ ಖಾತೆ ಇಲ್ಲದಿದ್ದರೆ ಸೃಷ್ಟಿಸಿಕೊಳ್ಳಿ.
- ಮದುವೆ ನೋಂದಣಿ (Marriage registration) ಆಯ್ಕೆಮಾಡಿ.
- ವಧು ವರಮತ್ತು ಮದುವೆ ನಡೆದ ಸ್ಥಳದ ವಿವರಗಳನ್ನು ನಮೂದಿಸಿ.
- ಮದುವೆ ಆಮಂತ್ರಣ ಆಧಾರ್ ಕಾರ್ಡ್, ವಯಸ್ಸಿನ ದಾಖಲೆ) (SSLC ಅಂಕಪಟ್ಟಿ/ಬರ್ತ್ ಸರ್ಟಿಫಿಕೇಟ್)ಮತ್ತು ಫೋಟೋಗಳನ್ನು ಅಪ್‌ಲೋಡ್ ಮಾಡಿ. ಇಷ್ಟಾದರೆ ನಿಮ್ಮ ದೊಡ್ಡ ಹಂತ ಮುಗಿದಂತೆ.
- ಆ ಬಳಿಕ ನೋಂದಣಿಗೆ ಸೂಕ್ತವಾದ ದಿನಾಂಕವನ್ನು ಆಯ್ಕೆ ಮಾಡಿ.
ಕಚೇರಿಗೆ ಭೇಟಿ: ನಿಗದಿತ ದಿನಾಂಕದಂದು ದಾಖಲೆಗಳೊಂದಿಗೆ ಇಬ್ಬರು ಸಾಕ್ಷಿಗಳೊಂದಿಗೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ನೋಂದಣಿ ಪೂರ್ಣಗೊಳಿಸಿ.
ಭರ್ತಿ ಮಾಡಿದ ಅರ್ಜಿ ನಮೂನೆ.
ವಧು-ವರರ ಆಧಾರ್ ಕಾರ್ಡ್.
ವಯಸ್ಸಿನ ದೃಢೀಕರಣ ದಾಖಲೆ.
ಮದುವೆ ಆಮಂತ್ರಣ ಪತ್ರಿಕೆ.
ದಂಪತಿಗಳ ಮದುವೆ ಫೋಟೋಗಳು.
ಇಬ್ಬರು ಸಾಕ್ಷಿಗಳು.
ಕಚೇರಿಗೆ ಅಲೆದಾಡುವುದು ತಪ್ಪುತ್ತದೆ.
ವೇಗವಾಗಿ ಮದುವೆ ಪ್ರಮಾಣಪತ್ರ (Marriage Certificate) ಲಭ್ಯವಾಗುತ್ತದೆ.
ವಿದೇಶ ಪ್ರವಾಸವೀಸಾಮತ್ತು ಬ್ಯಾಂಕ್ ಖಾತೆಗಳ ಕಾರ್ಯಕ್ಕೆ ಈ ಪ್ರಮಾಣಪತ್ರ ಅತಿ ಮುಖ್ಯ.