ಶಿವಮೊಗ್ಗದಲ್ಲಿ ಅತ್ಯಂತ ಅಪರೂಪದ ಬೆಣ್ಣೆ ಹಾವು ನಗರದ ಬಡಾವಣೆಯೊಂದರಲ್ಲಿ ಪ್ರತ್ಯಕ್ಷವಾಗಿದ್ದು, ಉರಗ ತಜ್ಞ ಸ್ನೇಕ್ ಕಿರಣ್ ಇದನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.
ಶಿವಮೊಗ್ಗ (ಆ.25): ಅಪರೂಪದ ಬೆಣ್ಣೆ ಹಾವು ಶಿವಮೊಗ್ಗ ನಗರದ ಬಡಾವಣೆಯೊಂದರಲ್ಲಿ ಪ್ರತ್ಯಕ್ಷವಾಗಿದ್ದು, ಉರಗ ತಜ್ಞ ಸ್ನೇಕ್ ಕಿರಣ್ ಇದನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ. ಗಾತ್ರದಲ್ಲಿ ಒಂದು ಬೆರಳಿನಷ್ಟಿರುವ ಇದು ಗರಿಷ್ಠ ಎರಡು ಅಡಿಯವರೆಗೆ ಬೆಳೆಯುತ್ತದೆ.
ಸಾಮಾನ್ಯವಾಗಿ ಇಟ್ಟಿಗೆ ಗೂಡು, ಪೊದೆ, ಜಲ್ಲಿ ಕಲ್ಲುಗಳ ನಡುವೆ ವಾಸಿಸುತ್ತದೆ. ವಿಷ ಪೂರಿತವಲ್ಲದ ಹಾವು ಇದಾಗಿದ್ದು, ಸಣ್ಣಪುಟ್ಟಹುಳು ಹುಪ್ಪಟೆ, ಕಪ್ಪೆ, ಓತಿಕ್ಯಾತ ಇತ್ಯಾದಿಗಳನ್ನು ತಿಂದು ಬದುಕುತ್ತದೆ. ಇಂತಹ ಮೂರು ಬೆಣ್ಣೆ ಹಾವು ಇಲ್ಲಿ ಪ್ರತ್ಯಕ್ಷವಾಗಿವೆ.
ಕುವೆಂಪು ಬಡಾವಣೆಯ ಚೇತನ್ ಎಂಬುವರ ಮನೆಯಲ್ಲಿ ಈ ಅಪರೂಪದ ಬೆಣ್ಣೆ ಹಾವುಗಳು ಕಾಣಿಸಿಕೊಂಡಿದ್ದು, ತಕ್ಷಣವೇ ಉರಗ ತಜ್ಞ ಸ್ನೇಕ್ ಕಿರಣ್‌ಗೆ ಕರೆ ಮಾಡಲಾಯಿತು. ಸ್ಥಳಕ್ಕೆ ಬಂದ ಕಿರಣ್ ಇದನ್ನು ಹಿಡಿದು ಕಾಡಿಗೆ ಬಿಟ್ಟು ಬಂದರು.
ನಿಮ್ಮ ಮನೆ ಮಂಚದ ಕೆಳಗೆ 8 ಅಡಿ ಕಾಳಿಂಗ ಬಚ್ಚಿಟ್ಟುಕೊಂಡರೆ! ವಿಡಿಯೋ..
ಮಲೆನಾಡು ಪ್ರದೇಶವಾದ ಶಿವಮೊಗ್ಗ ಜಿಲ್ಲೆಯೂ ಸಹ್ಯಾದರ್ಇ ಪರ್ವ ಶ್ರೇಣಿಯಾಗಿದ್ದ ಪಶ್ಚಿಮ ಘಟ್ಟದಲ್ಲಿ ಅತ್ಯಂತ ಅಪರೂಪದ ಜೀವಸಂಕುಲ ಇಲ್ಲಿದೆ.
ವಿವಿಧ ರೀತಿಯ ಹಾವುಗಳೂ ಇಲ್ಲಿದ್ದು, ಇದೀಗ ಅಪರೂಪದ ಬೆಣ್ಣೆ ಹಾವೊಂದು ಶಿವಮೊಗ್ಗ ನಗರದಲ್ಲಿಯೇ ಪ್ರತ್ಯಕ್ಷವಾಗಿದೆ.