'ರೈತ ಯುವಕನ ವರಿಸಿದ ಹುಡುಗಿಗೆ ನೆರವು '

By Kannadaprabha NewsFirst Published Aug 25, 2020, 1:13 PM IST
Highlights

ರೈತರಿಗೆ ಇತ್ತೀಚೆಗೆ ವಿವಾಹವಾಗಲು ಹೆಣ್ಣುಗಳೇ ಸಿಗದ ಕಾರಣ ರೈತರನ್ನು ವಿವಾಹವಾಗುವ ಹೆಣ್ಣು ಮಕ್ಕಳಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂದು ಮನವಿ ಮಾಡಲಾಗಿದೆ.

ತುಮಕೂರು (ಆ.25):  ಕೃಷಿಯಲ್ಲಿ ತೊಡಗಿರುವ ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ಸರ್ಕಾರ ಆರ್ಥಿಕ ನೆರವು ಘೋಷಿಸಬೇಕು ಎಂದು ಭಾರತೀಯ ಕೃಷಿಕ ಸಮಾಜ ತುಮಕೂರು ಜಿಲ್ಲಾ ಘಟಕ ಆಗ್ರಹಿಸಿದೆ.

ಬಹುತೇಕ ಯುವತಿಯರು ಸರ್ಕಾರದ ಕೆಲಸ ಹಾಗೂ ಅರೆಸರ್ಕಾರಿ ಕೆಲಸದಲ್ಲಿರುವ ಯುವಕರನ್ನು ಮದುವೆಯಾಗಲು ಮುಂದಾಗುತ್ತಾರೆ. ರೈತ ಯುವಕರನ್ನು ಹುಡುಗಿಯರು ಮದುವೆ ಆಗುತ್ತಿಲ್ಲ. ಕೃಷಿಯಲ್ಲಿ ನಮ್ಮ ಬದುಕನ್ನು ಕಂಡುಕೊಂಡಿರುವ ನಾವು ಕೂಡ ಕೃಷಿಯಲ್ಲಿ ಹಣವನ್ನು ಸಂಪಾದಿಸುತ್ತಿದ್ದೇವೆ. ಅಂತಹದರಲ್ಲಿ ನಮ್ಮ ಜಿಲ್ಲೆಯ ಗ್ರಾಮಗಳಲ್ಲಿ ಅವಿವಾಹಿತ ರೈತರ ಸಂಖ್ಯೆ ಹೆಚ್ಚುತ್ತಿದೆ ಎಂದು ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಕೋಡಿಹಳ್ಳಿ ಜಗದೀಶ್‌ ಹೇಳಿದ್ದಾರೆ.

ನಮಗೂ ಒಂದು 'ಭಾಗ್ಯ' ಕೊಡಿ; ಅವಿವಾಹಿತ ಯುವರೈತರಿಂದ ಸರ್ಕಾರಕ್ಕೆ ಮನವಿ!

35 ರಿಂದ 38 ವರ್ಷ ದಾಟಿದ ರೈತರಿದ್ದಾರೆ. ರೈತನಿಗೆ ರೈತ ಕುಟುಂಬದಲ್ಲೇ ಹೆಣ್ಣು ಸಿಕ್ತಿಲ್ಲ. ಯುವ ರೈತರನ್ನು ಮದುವೆ ಆಗಲ್ಲ ಅಂತಾರೆ. ಸರ್ಕಾರ ಅಂತರ್ಜಾತಿ ವಿವಾಹ ಸೇರಿದಂತೆ ಇನ್ನಿತರ ಯೋಜನೆಗಳಿಗೆ ಪೋ›ತ್ಸಾಹ ಧನ ನೀಡುತ್ತದೆ. ಕೆಲ ಯೋಜನೆಗಳ ಬದಲಿಗೆ ಯುವ ರೈತರನ್ನು ಮದುವೆಯಾದರೆ ಯುವತಿಯರಿಗೆ ಪೋತ್ಸಾಹ ಧನ ನೀಡುತ್ತೇವೆಂದು ಸರ್ಕಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

click me!