4ಸಾವಿರ ದಿನ ಜೈಲಲ್ಲಿದ್ದವನಿಗೆ ಕೊನೆಗು ಬಿಡುಗಡೆ ಭಾಗ್ಯ: ಅಪರೂಪದ ಘಟನೆಗೆ ಸಾಕ್ಷಿಯಾದ ವಿಜಯಪುರ!

By Ravi Janekal  |  First Published Mar 19, 2023, 3:03 PM IST

ಅದೊಂದು ಅತ್ಯಾಚಾರ ಹಾಗೂ ಕೊಲೆ ಪ್ರಕರಣ. ಇದೇ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನ ನೀಡಿತ್ತು. 17 ವರ್ಷ ಜೈಲಲ್ಲೇ ಕಾಲ ಕಳೆದಿದ್ದ. ಆದ್ರೆ ಮೇಲ್ಮನವಿಗೆ ಅವಕಾಶವಿದ್ದರೂ ಹೆದರಿ ಅಫೀಲ್‌ ಹೋಗದೆ ಜೈಲುವಾಸ ಅನುಭವಿಸಿದ್ದ. 


 - ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌

ವಿಜಯಪುರ (ಮಾ 19) : ಅದೊಂದು ಅತ್ಯಾಚಾರ ಹಾಗೂ ಕೊಲೆ ಪ್ರಕರಣ. ಇದೇ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನ ನೀಡಿತ್ತು. 17 ವರ್ಷ ಜೈಲಲ್ಲೇ ಕಾಲ ಕಳೆದಿದ್ದ. ಆದ್ರೆ ಮೇಲ್ಮನವಿಗೆ ಅವಕಾಶವಿದ್ದರೂ ಹೆದರಿ ಅಫೀಲ್‌ ಹೋಗದೆ ಜೈಲುವಾಸ ಅನುಭವಿಸಿದ್ದ. 

Latest Videos

undefined

ದಶಕಗಳ ಕಾಲ ಜೈಲೂಟ ತಿಂದವ ಕೊನೆಗು ಬಿಡುಗಡೆಗೊಂಡಿದ್ದಾನೆ. ವಿಜಯಪುರ(Vijayapura) ಜಿಲ್ಲಾ ಕಾನೂನು ಪ್ರಾಧಿಕಾರ ನೀಡಿದ ಕಾನೂನು ನೆರವಿನಿಂದ ಜೈಲಿಂದ ಬಿಡುಗಡೆಗೊಂಡು ಹೊರ ಬಂದಿದ್ದಾನೆ. ನಾಲ್ಕು ಸಾವಿರ ದಿನಗಳ ನಂತರ ಮೇಲ್ಮನವಿ ಸಲ್ಲಿಸಿದ ಅಪರೂಪದಲ್ಲೆ ಅಪರೂಪದ ಪ್ರಕರಣ ಇದಾಗಿದೆ. 

Bengaluru news: ಅಕ್ರಮ ಗಣಿಗಾರಿಕೆ ಪ್ರಕರಣ: 5.21 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ(District Legal Services Authority)ದ ಹಿರಿಯ ಶ್ರೇಣಿ ನ್ಯಾಯಾಧೀಶರು ಹಾಗೂ ಸದಸ್ಯ ವೆಂಕಣ್ಣ ಹೊಸಮನಿ ನೀಡಿದ ನೆರವಿನಿಂದ ಅತ್ಯಾಚಾರ ಹಾಗೂ ಕೊಲೆ (Rape and murder case)ಪ್ರಕರಣದಿಂದ ಬಿಡುಗಡೆಯಾಗಿ ನ್ಯಾಯ ಪಡೆದುಕೊಂಡಿದ್ದಾನೆ..

ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಶಿಕ್ಷೆ:

ಅದು ಕಳೆದ 18-02-2010 ವಿಜಯಪುರ ಜಿಲ್ಲಾ  ಎರಡನೇ ಆಧಿಕ ಸತ್ರ ನ್ಯಾಯಾಲಯದಲ್ಲಿ ಓರ್ವ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಕೊಲೆ ಆರೋಪದ ಮೇಲಿನ ವಿಚಾರಣೆಯ ಅಂತೀಮ ತೀರ್ಪು ಪ್ರಕಟವಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಸಾಕ್ಷಾಧಾರಗಳನನ್ನು ಆಧರಿಸಿ ಆರೋಪಿ ಮಹಿಳೆ ಮೇಲೆ ಅತ್ಯಾಚಾರ ಯತ್ನ ನಡೆಸಿ ಆಕೆಯನ್ನು ಕೊಲೆ ಮಾಡಿದ್ದು ಸಾಬೀತಾಗಿದೆ ಎಂದು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡವನ್ನು ವಿಧಿಸಿದ್ದರು. ಹೀಗೆ ಶಿಕ್ಷೆಗೆ ಒಳಗಾಗಿದ್ದವನೇ ಮಹಾಂತೇಶ ಖೈನೂರು(Mahantesh Khainur) ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ ವಾಸಿ. ಇದೇ ಮಹಾಂತೇಶ ಕಳೆದ 2007 ರಲ್ಲಿ ತಮ್ಮದೇ ಗ್ರಾಮದ ಮಹಿಳೆ ಮೇಲೆ ಅತ್ಯಾಚಾರ ಯತ್ನ ಮಾಡಿ ಆಕೆಯನ್ನು ಕೊಲೆ ಮಾಡಿದ್ದನಂತೆ. ಸಿಂದಗಿ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿ ಬಳಿಕ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸತತ ಮೂರು ವರ್ಷಗಳ ವಿಚಾರಣೆ ಬಳಿಕ ಮಹಾಂತೇಶ ಖೈನೂರುಗೆ ಶಿಕ್ಷೆ ವಿಧಿಸಲಾಗಿತ್ತು.

ನೆರವಿಗೆ ಬಂತು ಕಾನೂನು ಸೇವಾ ಪ್ರಾಧಿಕಾರ..!

ಬಡತನ ಕಾನೂನು ಜ್ಞಾನ ಇಲ್ಲದ ಕಾರಣ ಮಾನಸಿಕವಾಗಿ ನೊಂದಿದ್ದ ಮಹಾಂತೇಶ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ ಮಾಡಿರಲಿಲ್ಲಾ. ಮೇಲ್ಮನವಿ ಸಲ್ಲಿಕೆ ಮಾಡಲು ಬಡತನ ಅಡ್ಡಿಯಾಗಿತ್ತು. ಮೇಲ್ಮನವಿ ಶುಲ್ಕ ಹಾಗೂ ನ್ಯಾಯವಾದಿಗಳ ಶುಲ್ಕ ಭರಿಸಲು ಹಣವಿರಲಿಲ್ಲಾ. ಕಾರಣ ಜೀವನ ಪೂರ್ತಿ ಜೈಲಿನಲ್ಲೇ ಕಳೆಯಲು ನಿರ್ಧಾರ ಮಾಡಿದ್ದ. ಜೈಲಿನಲ್ಲಿದ್ದ ಮಹಾಂತೇಶ ಹಾಗೂ ಇಂಥಹ ಇತರೆ ಅಪರಾಧಿಗಳ  ಪರಿಸ್ಥಿತಿ ಅರಿತು  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಶ್ರೇಣಿ ನ್ಯಾಯಾಧೀಶರು ಹಾಗೂ ಸದಸ್ಯ ವೆಂಕಣ್ಣ ಹೊಸಮನಿ(Justic venkanna hosamani) ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಾಯ ಪಡೆಯಬೇಕೆಂಬ ಸಲಹೆ ನೀಡಿದರು. ಮೊದ ಮೊದಲು ಒಪ್ಪದ ಮಹಾಂತೇಶ ಬಳಿಕ  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಕಲಬುರಗಿ ಹೈಕೋರ್ಟಿಗೆ ಮನವಿ ಸಲ್ಲಿಕೆ ಮಾಡಿದರು.

ಅಪರೂಪದಲ್ಲೆ ಅಪರೂಪದ ಪ್ರಕರಣ ಇದು!

ಸಾಮಾನ್ಯವಾಗಿ ಒಂದು ತೀರ್ಪು ಬಂದ ಬಳಿಕ 90 ದಿನಗಳ ಒಳಗೆ ಮೇಲ್ಮನವಿ ಸಲ್ಲಿಸಬೇಕು. ಆದರೆ ಮಹಾಂತೇಶ 4000 ಕ್ಕೂ ಹೆಚ್ಚು ದಿನಗಳಾದ ಬಳಿಕ ಮೇಲ್ಮನವಿ ಸಲ್ಲಿಕೆ ಮಾಡಿದ್ದ. ವಿಶೇಷ ಪ್ರಕರಣವೆಂದು ಪರಿಗಣಿಸಿ ಕಲಬುರಗಿ ಹೈಕೋರ್ಟ್ (Kalaburagi highcourt)ಮಹಾಂತೇಶ ಖೈನೂರು ಪ್ರಕರಣವನ್ನು ಸ್ವೀಕರಿಸಿ ಸತತ 8 ತಿಂಗಳ ಕಾಲ ವಿಚಾರಣೆ ನಡೆಸಿತ್ತು. ಮಹಾಂತೇಶನ ಮಹಿಳೆ ಮೇಲೆ ಅತ್ಯಾಚಾರ ಯತ್ನ ಹಾಗೂ ಕೊಲೆ ಮಾಡಿದ್ದರ ಕುರಿತ ಸಾಕ್ಷಾಧಾರಗಳ ಕೊರತೆ ಕಾರಣದಿಂದ ಕಲಬುರಗಿ ಹೈಕೋರ್ಟ್ 10-02-2023 ರಂದು ಮಹಾಂತೇಶ ನಿರ್ದೋಷಿ ಕೂಡಲೇ ಆತನನ್ನು ಕಾರಾಗೃಹದಿಂದ ಬಿಡುಗಡೆ ಮಾಡಬೇಕೆಂದು ಆದೇಶ ನೀಡಿದೆ. ಜೀವಾಧಿ ಶಿಕ್ಷೆಗೆ ಗುರಿಯಾಗಿದ್ದು 15 ವರ್ಷ ಜೈಲಲ್ಲಿದ್ದವ ಆರೋಪ ಮುಕ್ತನಾಗಿ ಹೊರ ಬರೋದಕ್ಕೆ  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರಣವಾಗಿದೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಸೇವೆ:

ಎಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ವಿವಿಧ ಪ್ರಕರಣಗಳಲ್ಲಿ ಆರೋಪಿಗಳಿಗೆ, ಅಪರಾಧಿಗಳಿಗೆ ಕಾನೂನು ಸಹಾಯ ಮಾಡಲಾಗುತ್ತದೆ. ಕಾನೂನು ಪ್ರಕಾರ ಸಹಾಯ ಮಾಡುವ ಅವಕಾಶವಿದೆ. ಬಡವರಿಗೆ ನಿರ್ಗತಿಕರಿಗೆ, ಹಣವಿಲ್ಲದವರಿಗೆ ನ್ಯಾಯಾಲಯ ಹಾಗೂ ನ್ಯಾಯವಾದಿಗಳಿಗೆ ಶುಲ್ಕ ಭರಿಸಲು ಆಗದವರಿಗೆ ಉಚಿತವಾಗಿ ಕಾನೂನು ಸೇವೆ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಹಾಯ ಮಾಡುತ್ತದೆ. ಸಂಪೂರ್ಣ ಉಚಿತವಾಗಿ ಕಾನೂನು ಸೇವೆ ಸಲ್ಲಿಸಲಾಗುತ್ತದೆ.

ಉಚಿತವಾಗಿ ನ್ಯಾಯ ಪಡೆದುಕೊಂಡ ಖೈನೂರು..!

ಈ ರೀತಿ ಮಹಾಂತೇಶ ಖೈನೂರು ಪ್ರಕರಣದಲ್ಲೂ ಉಚಿತವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ  ಹಾಗೂ ಹಿರಿಯ ಶ್ರೇಣಿ ನ್ಯಾಯಾಧೀಶರಾದ ವೆಂಕಣ್ಣ ಹೊಸಮನಿ ಅವರ ಪ್ರಯತ್ನದಿಂದ ಸಾಧ್ಯವಾಗಿದೆ. ಜೈಲಿನಲ್ಲೇ ಜೀವನ ಕಳೆಯಬೇಕಿದ್ದ ಮಹಾಂತೇಶ ಹೊರ ಜಗತ್ತಿಗೆ ಬರಲು ವೆಂಕಣ್ಣ ಹೊಸಮನಿ ಹಾಗೂ ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ ಐ ಜಿ ಮ್ಯಾಗೇರಿ ಕಾರಣಿಕರ್ತರಾಗಿದ್ದಾರೆ. ಸದ್ಯ ಆರೋಪ ಮುಕ್ತನಾಗಿ ಮಹಾಂತೇಶ ಖೈನೂರ ತನ್ನ ತಂದೆ ತಾಯಿ ಪತ್ನಿ ಮಕ್ಕಳು ಹಾಗೂ ಸಹೋದರರನ್ನು ಸೇರಲು ಸಾಧ್ಯವಾಗಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಈ ಸೇವೆ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲಾ. ಕಾರಣ ಯಾವುದೇ ಕಾನೂನಾತ್ಮಕ ಸಮಸ್ಯೆಗಳಿದ್ದರೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸೇವೆ ಪಡೆದುಕೊಳ್ಳಬೇಕಿದೆ.

ವಕೀಲರ ಮೇಲೆ ಹಲ್ಲೆ ಮಾಡಿದರೆ 3 ವರ್ಷ ಜೈಲು: ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಮಸೂದೆ ಮಂಡನೆ

ನಾನು ಅಪರಾಧಿಯಲ್ಲ, ಅಪರಾಧ ಮಾಡಿಲ್ಲ :

ಇನ್ನು ಆರೋಪ ಮುಕ್ತನಾಗಿ ಬಂದಿರೋ ಮಹಾಂತೇಶ ನಾನು ಮಹಿಳೆ ಮೇಲೆ ಅತ್ಯಾಚಾರ ಯತ್ನ ಮಾಡಿ ಕೊಲೆ ಮಾಡಿಲ್ಲಾ. ನಮ್ಮೂರಿನಲ್ಲಿ ಟ್ಯ್ರಾಕ್ಟರ್ ತೆಗೆದುಕೊಂಡು ಜಮೀನಿಗೆ ಹೊರಟಿದ್ದೆ ಮಹಿಳೆಯೂ ಜಮೀನಿಗೆ ಹೋಗತ್ತಿದ್ದಳು. ಆಗ ಆಕೆ ನನ್ನ ಟ್ಟ್ಯಾಕ್ಟರ್ ನಲ್ಲಿ ಜಮೀನಿಗೆ ಹೋಗಲು ಹತ್ತಿದ್ದಳು. ಈ ವೇಳೆ ಅನತಿ ದೂರ ಹೋದಾಗ ಟ್ರ್ಯಾಕ್ಟರ್ ನಲ್ಲಿದ್ದ ಮಹಿಳೆ ಆಯತಪ್ಪಿ ಕೆಳಗೆ ಬಿದ್ದಳು. ಸ್ಥಳದಲ್ಲೇ ಮೃತಪಟ್ಟಳು. ಆಗ ನಾನು ಗಾಬರಿಯಿಂದ ಆಕೆಯ ಶವವನ್ನು ರಸ್ತೆ ಬದಿಗೆ ಸರಿಸಿ ಅಲ್ಲಿಂದ ಟ್ರ್ಯಾಕ್ಟರ್ ಸಮೇತ ಹೋಗಿ ಬಿಟ್ಟೆ. ಘಟನೆ ಬಗ್ಗೆ ಮಹಿಳೆ ಮನೆಯವರಿಗೆ ತಿಳಿಸದೇಢ ಇರೋ ಕಾರಣ ನಾನು ಅಪರಾಧಿಯಾಬೇಕಾಯಿತು. 15 ವರ್ಷಗಳ ಬಳಿಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ನನಗೆ ನ್ಯಾಯ ಸಿಕ್ಕಿದೆ. ನನ್ನ ಕುಟುಂಬದೊಂದಿಗೆ ಕಾಲ ಕಳೆಯುತ್ತೇನೆಂದು ಖುಷಿಪಟ್ಟಿದ್ದಾನೆ.

click me!