ಸವದತ್ತಿ: ಯಲ್ಲಮ್ಮನ ಹುಂಡಿಯಲ್ಲಿ 1.81 ಕೋಟಿ, ವಿದೇಶಿ ಕರೆನ್ಸಿ ಕಾಣಿಕೆ

By Kannadaprabha News  |  First Published Mar 19, 2023, 1:29 PM IST

2023ರ ಜನವರಿ ಹಾಗೂ ಫೆಬ್ರುವರಿಯಲ್ಲಿ ನಡೆದ ಬನದ ಹುಣ್ಣಿಮೆ ಮತ್ತು ಭಾರತ ಹುಣ್ಣಿಮೆ ಜಾತ್ರೆಗೆ ಬಂದಿದ್ದ ಭಕ್ತರು, ಯಲ್ಲಮ್ಮ ದೇವಿ ದೇವಸ್ಥಾನ ಹುಂಡಿಯಲ್ಲಿ ಹಾಕಿದ್ದ 1.66 ಲಕ್ಷ ನಗದು, 12.83 ಲಕ್ಷ ಮೌಲ್ಯದ 235 ಗ್ರಾಂ ಚಿನ್ನಾಭರಣ ಹಾಗೂ 2.46 ಲಕ್ಷ ಮೌಲ್ಯದ 3.7 ಕೆಜಿ ಬೆಳ್ಳಿ ಆಭರಣ ಸಂಗ್ರಹ. 


ಸವದತ್ತಿ(ಮಾ.19):  ಯಲ್ಲಮ್ಮನ ಗುಡ್ಡದಲ್ಲಿ ಮಾ.13 ರಿಂದ 17 ರವರೆಗೆ ಎಣಿಕೆ ಮಾಡಲಾದ ಹುಂಡಿಯಲ್ಲಿ .1.81 ಕೋಟಿಗಿಂತ ಅಧಿಕ ಮೌಲ್ಯದ ಕಾಣಿಕೆ ಸಂಗ್ರಹವಾಗಿದ್ದು, ಕಾಣಿಕೆ ರೂಪದಲ್ಲಿ ವಿದೇಶಿ ಕರೆನ್ಸಿ ಕೂಡ ಭಕ್ತರು ಹಾಕಿರುವುದು ವಿಶೇಷವಾಗಿದೆ.

2023ರ ಜನವರಿ ಹಾಗೂ ಫೆಬ್ರುವರಿಯಲ್ಲಿ ನಡೆದ ಬನದ ಹುಣ್ಣಿಮೆ ಮತ್ತು ಭಾರತ ಹುಣ್ಣಿಮೆ ಜಾತ್ರೆಗೆ ಬಂದಿದ್ದ ಭಕ್ತರು, ಯಲ್ಲಮ್ಮ ದೇವಿ ದೇವಸ್ಥಾನ ಹುಂಡಿಯಲ್ಲಿ ಹಾಕಿದ್ದ 1.66 ಲಕ್ಷ ನಗದು, 12.83 ಲಕ್ಷ ಮೌಲ್ಯದ 235 ಗ್ರಾಂ ಚಿನ್ನಾಭರಣ ಹಾಗೂ 2.46 ಲಕ್ಷ ಮೌಲ್ಯದ 3.7 ಕೆಜಿ ಬೆಳ್ಳಿ ಆಭರಣ ಸಂಗ್ರಹವಾಗಿವೆ.

Latest Videos

undefined

Chamarajangara: ತನಗಾಗದವರು ರಕ್ತಕಾರಿ ಸಾಯಲಿ : ದೇವರ ಹುಂಡಿಯಲ್ಲಿ ವಿಕೃತಿಯ ಹರಕೆ ಪತ್ರ

ಧಾರ್ಮಿಕ ದತ್ತಿ ಇಲಾಖೆ, ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ, ಸವದತ್ತಿ ತಹಸೀಲ್ದಾರ್‌ ಕಚೇರಿ ಹಾಗೂ ಪೊಲೀಸ್‌ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ಕೆನರಾ ಬ್ಯಾಂಕ್‌ ಹಾಗೂ ಯಲ್ಲಮ್ಮ ದೇವಿ ದೇವಸ್ಥಾನ ಸಿಬ್ಬಂದಿ ಐದು ದಿನಗಳ ಎಣಿಕೆ ಮಾಡಿದರು. ಬನದ ಹುಣ್ಣಿಮೆ ಹಾಗೂ ಭಾರತ ಹುಣ್ಣಿಮೆ ಜಾತ್ರೆಗಳು ರಾಜ್ಯದಲ್ಲೇ ನಡೆಯುವ ದೊಡ್ಡ ಜಾತ್ರೆಗಳು. ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ ಬಂದಿದ್ದ ಭಕ್ತರು ತಮ್ಮ ಆರ್ಥಿಕ ಶಕ್ತ್ಯಾನುಸಾರವಾಗಿ ದೇವಿಗೆ ಕಾಣಿಕೆ ಅರ್ಪಿಸಿ ಭಕ್ತಿ ಮೆರೆದಿದ್ದಾರೆ.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ಬಸವರಾಜ ಜೀರಗ್ಯಾಳ, ಸಮಿತಿ ಸದಸ್ಯರಾದ ವೈ.ವೈ.ಕಾಳಪ್ಪನವರ, ಕೊಳ್ಳಪ್ಪಗೌಡ ಗಂದಿಗವಾಡ, ಲಕ್ಷ್ಮೇ ಹೂಲಿ, ಪುಂಡಲೀಕ ಮೇಟಿ, ಶಶಿಕಲಾ ಚಂದರಗಿ, ಶೈಲಾ ಪತ್ತಾರ, ದೇವಸ್ಥಾನ ಅಧೀಕ್ಷಕ ಅರವಿಂದ್ರ ಮಾಳಗೆ, ಸಂತೋಷ ಶಿರಸಂಗಿ, ಎಸ್‌.ಎಲ್‌.ಯಲಿಗಾರ, ಎಂ.ವಿ.ಮುಳ್ಳೂರ, ಡಿ.ಆರ್‌.ಚವ್ಹಾಣ, ಪಿ.ಎಫ್‌.ಗೋವನಕೋಪ್ಪ, ಎಂ.ಸಿ.ಮಣ್ಣಿಕೇರಿ, ಪಂಡಿತ ಯಡೂರಯ್ಯ ಮತ್ತು ದೇವಸ್ಥಾನ ಸಿಬ್ಬಂದಿ ಇದ್ದರು.

ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಬಳಕೆ ಮಾಡಲಾಗುವುದು. ಭಕ್ತರಿಗೆ ಶುದ್ಧ ಕುಡಿಯುವ ನೀರು, ವಸತಿ ಮತ್ತಿತರ ಮೂಲಸೌಕರ್ಯ ಒದಗಿಸಲಾಗುವುದು ಅಂತ ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಪಿ.ಬಿ.ಮಹೇಶ ತಿಳಿಸಿದ್ದಾರೆ. 

click me!