ಮುಂದಿನ 10 ದಿನದಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಅಗ್ನಿ ಪರೀಕ್ಷೆ

Suvarna News   | Asianet News
Published : Nov 01, 2020, 12:34 PM ISTUpdated : Nov 01, 2020, 12:48 PM IST
ಮುಂದಿನ 10 ದಿನದಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಅಗ್ನಿ ಪರೀಕ್ಷೆ

ಸಾರಾಂಶ

ಮುಂದಿನ 10 ದಿನಗಳಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಅಗ್ನಿ ಪರೀಕ್ಷೆ ಎದುರಾಗಲಿದೆ. ಏನದು..? 

ಮೈಸೂರು (ನ.01):  ಮುಂದಿನ ಹತ್ತುದಿನಗಳಲ್ಲಿ ಮೈಸೂರಿಗೆ ಎದುರಾಗಲಿದೆ ಅಗ್ನಿಪರೀಕ್ಷೆ. ಕಳೆದ ಎರಡು ದಿನಗಳ ಹಿಂದಷ್ಟೇ ದಸರಾ ಕಾರ್ಯಕ್ರಮ ಮುಕ್ತಾಯವಾಗಿದ್ದು, ದಸರಾದಿಂದ ಯಾವ ಮಟ್ಟಿಗೆ ಕೊರೋನಾ ಹಬ್ಬಿದೆ ಎನ್ನುವುದು ತಿಳಿಯಲಿದೆ. 

 ದಸರಾ ಸಂದರ್ಭದ ಕೊರೊನ ಪರಿಣಾಮ ಇನ್ನು 10ದಿನಗಳಲ್ಲಿ ಗೊತ್ತಾಗಲಿದೆ. ಕೇರಳದಲ್ಲೂ ಓಣಂ ಹಬ್ಬ ಆಚರಿಸಿದಾಗಲೂ ಇದೇ ರೀತಿ ಆಗಿತ್ತು. ಈ ನಿಟ್ಟಿನಲ್ಲಿ  ಈಗಾಗಲೇ ನಗರದ ಪ್ರವಾಸಿ ತಾಣಗಳಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ.

'ಆಂಧ್ರದ ಮಹಿಳಾ ಅಧಿಕಾರಿಗೆ ಮಣೆ : ಹಿಂದಿನ ಮರ್ಮವೇನು..?' ..

ನಗರದ ಯಾವುದಾದರೂ ಒಂದು ಸ್ಥಳದಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಲಿ ಎಂಬುದೇ ನಮ್ಮ ಉದ್ದೇಶ. 10 ಜನರಲ್ಲಿ 6ಜನರಿಗೆ ಯಾವುದೇ ರೋಗ ಲಕ್ಷಣಗಳು ಇರುವುದಿಲ್ಲ.
ಅವರು ಸೂಪರ್ ಸ್ಪೆಡರ್ ಆಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

'ವಿಜ್ಞಾನಕ್ಕೆ ಸವಾಲಾದ ಅಲಮೇಲಮ್ಮನ ಶಾಪ' ...

ಮೈಸೂರಿನಲ್ಲಿ ಪಾಸಿಟಿವ್ ಹಾಗೂ ಸಾವಿನ ಪ್ರಕರಣಗಳು ಇತ್ತೀಚಿಗೆ ಕಡಿಮೆಯಾಗುತ್ತಿದೆ. ಆದರೂ ನಾವು ಮೈಮರೆಯುವ ಹಾಗಿಲ್ಲ. ದಸರಾದ ಪರಿಣಾಮ ಮುಂದಿನ ದಿನಗಳಲ್ಲಿ ನಮಗೆ ಯಾವ ಪ್ರಮಾಣದಲ್ಲಿ ಸೋಂಕು ಹರಡಿದೆ ಎನ್ನುವುದು ತಿಳಿಯಲಿದೆ. ಕೊರೊನ ವ್ಯಾಕ್ಸಿನ್ ಬರುವ ವರೆಗೂ ನಿಯಮಗಳನ್ನು ಪಾಲಿಸುತ್ತಿರಿ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರು ಮನವಿ ಮಾಡಿದ್ದಾರೆ.

PREV
click me!

Recommended Stories

ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ: ಬಸವರಾಜ ರಾಯರೆಡ್ಡಿ