ಬಿಜೆಪಿಗೆ ಬೆಂಬಲ ನೀಡಲು ಹಿರಿಯ ಪ್ರಭಾವಿ ಕೈ ಮುಖಂಡನನ್ನು ಭೇಟಿ ಮಾಡಿದ್ದು ನಿಜ : ಡಿಸಿಎಂ

Kannadaprabha News   | Asianet News
Published : Nov 01, 2020, 12:05 PM IST
ಬಿಜೆಪಿಗೆ ಬೆಂಬಲ ನೀಡಲು ಹಿರಿಯ ಪ್ರಭಾವಿ ಕೈ ಮುಖಂಡನನ್ನು ಭೇಟಿ ಮಾಡಿದ್ದು ನಿಜ : ಡಿಸಿಎಂ

ಸಾರಾಂಶ

ಬೆಂಬಲ ನೀಡುವ ಸಲುವಾಗಿ ಹಿರಿಯ ಕಾಂಗ್ರೆಸ್ ಮುಖಂಡನನ್ನು ಭೇಟಿ ಮಾಡಿದ್ದು ನಿಜ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. 

ಶಿರಾ (ನ.01):  ಶಿರಾ​ದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇ​ಶ​ಗೌಡ ಗೆಲುವು ಸಾಧಿ​ಸ​ಲಿ​ದ್ದಾರೆ ಎಂಬ ವಿಶ್ವಾ​ಸ​ವನ್ನು ಡಿಸಿಎಂ ಅಶ್ವಥ್‌ ನಾರಾ​ಯಣ್‌ ವ್ಯಕ್ತ​ಪ​ಡಿ​ಸಿ​ದ್ದಾರೆ.

ಅವರು ಶಿರಾ​ದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿ ಎಲ್ಲಾ ಜಾತಿಗೂ ಪ್ರಾಮು​ಖ್ಯತೆ ಕೊಡುವ ಪಕ್ಷ ಏನಾ​ದರೂ ಇದ್ದರೆ ಅದು ಬಿಜೆಪಿ ಎಂದರು.

ಆಂಧ್ರ ಪ್ರದೇ​ಶ ಕಾಂಗ್ರೆಸ್‌ ನಾಯಕ ರಘುವೀರ ರೆಡ್ಡಿಯನ್ನು ಭೇಟಿ ಮಾಡಿದ್ದು ನಿಜ ಎಂದ ಅವರು ರಘು​ವೀ​ರ​ರೆ​ಡ್ಡಿ ಯಾದವ ಸಮುದಾಯದ ಮುಖಂಡರು. ಹಾಗಾಗಿ ಅವರ ಬೆಂಬಲ ಕೋರಿದ್ದಾಗಿ ತಿಳಿ​ಸಿ​ದರು.

ಶಿರಾ ಉಪ ಚುನಾವಣೆ : ಬಿಜೆಪಿಗೆ ಗೆಲುವು ಖಚಿತವೆನ್ನೋ ಭವಿಷ್ಯ .

ಕಾಡುಗೊಲ್ಲರ ಅಭಿವೃದ್ಧಿ ನಿಗಮ ಮಾಡಿದ್ದೇವೆ. ಹಾಗಾಗಿ ರಘುವೀರ ರೆಡ್ಡಿ ಬೆಂಬಲ ನಮಗೆ ಸಿಗಲಿದೆ ಎಂಬ ವಿಶ್ವಾಸ ಇದೆ ಎಂದರು. ಕಾಂಗ್ರೆಸ್‌ ಅಥವಾ ಜೆಡಿಎಸ್‌ ಯಾವುದೇ ಅಭಿ​ವೃದ್ಧಿ ಕಾರ್ಯ ಮಾಡಿಲ್ಲ. ಹೀಗಾಗಿ ಅವರ ಮತ ಕೇಳಲು ಮುಖ ಇಲ್ಲ ಎಂದರು.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ