ಅಕಿ ನಂಗ್ ರೊಕ್ಕಾ ಕೊಡ್ತಾಳೇನ್?: ಲಕ್ಷ್ಮೀ ವಿರುದ್ಧ ರಮೇಶ್ ಜಾರಕಿಹೋಳಿ ಕಿಡಿ!

By Web DeskFirst Published Sep 6, 2018, 2:11 PM IST
Highlights

ಬೆಳಗಾವಿಯಲ್ಲಿ ಸಚಿವ ರಮೇಶ್ ಜಾರಕಿಹೋಳಿ ಸುದ್ದಿಘೋಷ್ಠಿ! ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆರೋಪಗಳ ಸರಮಾಲೆ! ಲಕ್ಷ್ಮೀ ಈ ಮಟ್ಟಕ್ಕೆ ಇಳಿತಾರೆ ಅಂದುಕೊಂಡಿರಲಿಲ್ಲ! ನಮಗೆ 90 ಕೋಟಿ ಕೊಡಕ್ಕೆ ಆಕೆಗೆ ಸಾಧ್ಯವಾ?! ಕಷ್ಟಕಾಲದಲ್ಲಿ ಆಕೆಗೆ ಹೆಲ್ಪ್ ಮಾಡಿದ್ಯಾರು ಅಂತಾ ಹೇಳಲಿ

ಬೆಳಗಾವಿ(.ಸೆ.6): 'ಅಲ್ರೀ, ಲಕ್ಷ್ಮೀ ಹೆಬ್ಬಾಳ್ಕರ್ ನನಗೆ 90 ಕೋಟಿ ರೂ. ಕೊಡಲು ಸಾಧ್ಯವಾ?. ಅವರ ಕಷ್ಟಕಾಲದಲ್ಲಿ ನಾನೇ ಅವರಿಗೆ ಸಾಕುಷ್ಟು ಬಾರಿ ಹಣದ ಸಹಾಯ ಮಾಡಿದ್ದೇನೆ..' ಇದು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಜಾರಕಿಹೋಳಿ ಸಹೋದರರಿಗೆ 90 ಕೋಟಿ ರೂ. ಸಹಾಯ ಮಾಡಿದ್ದಾರೆ ಎಂಬ ಆರೋಪಕ್ಕೆ ಸಚಿವ ರಮೇಶ್ ಜಾರಕಿಹೋಳಿ ಕೊಟ್ಟ ಉತ್ತರ.

ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಆಡುತ್ತಿರುವ ಮಾತುಗಳು ತಮ್ಮ ಮನಸ್ಸನ್ನು ನೋಯಿಸಿದ್ದು, ಲಕ್ಷ್ಮೀ ಜಾರಕಿಹೋಳಿ ಕುಟುಂಬಕ್ಕೆ ಸಹಾಯ ಮಾಡುವಷ್ಟು ದೊಡ್ಡವಳಾಗಿ ಬೆಳೆದಿದ್ದು ಯಾವಾಗ ಎಂದು ರಮೇಶ್ ಪ್ರಶ್ನಿಸಿದ್ದಾರೆ. ತೀರ ವೈಯಕ್ತಿಕ ವಿಚಾರಗಳನ್ನು ಬಹಿರಂಗವಾಗಿ ಮಾತನಾಡಬಾರದು ಎಂದುಕೊಂಡಿದ್ದೆ, ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ನಡೆದುಕೊಳ್ಳುತ್ತಿರುವ ರೀತಿಯಿಂದ ಹೇಳಲೇ ಬೇಕಾಗಿದೆ ಎಂದು ರಮೇಶ್ ಆಕ್ರೋಶದಿಂದ ನುಡಿದರು

ಹೆಬ್ಬಾಳ್ಕರ್ ಅವರನ್ನು ಜಿಲ್ಲಾಧ್ಯಕ್ಷೆ ಮಾಡಿದ್ದು ಸತೀಶ್ ಜಾರಕಿಹೋಳಿ, ಬೆಂಗಳೂರಿನಲ್ಲಿ ಅವರ 'ಗಾಡಫಾದರ್'ಹೆಬ್ಬಾಳ್ಕರ್ ಅವರನ್ನು ನಡು ನೀರಲ್ಲಿ ಕೈಬಿಟ್ಟಾಗ ಸಹಾಯ ಮಾಡಿದ್ದೂ ನಾವೇ. ಲಕ್ಷ್ಮೀ ತಂದೆಗೆ ಆರೋಗ್ಯ ಸರಿ ಇಲ್ಲದಿದ್ದಾಗ ನಮ್ಮ ಮನೆಗೆ ಬಂದು ಅತ್ತಿದ್ದನ್ನು ಲಕ್ಷ್ಮೀ ಮರೆತಿದ್ದಾರೆ. ನಾವು ಆಗೆಷ್ಟು ಸಹಾಯ ಮಾಡಿದ್ದೇವೆ ಎಂಬುದನ್ನು ಹೇಳಲೇ ಎಂದು ರಮೇಶ್ ಪ್ರಶ್ನಿಸಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ, ಮಗನ ವಿದ್ಯಾಭ್ಯಾಸಕ್ಕಾಗಿ ಎಷ್ಟು ಸಹಾಯ ಮಾಡಿದ್ದೇವೆ ಎಂದು ಆಕೆಗೆ ಕೇಳಿ ನೋಡಿ ಎಂದು ರಮೇಶ್ ಸಿಟ್ಟಿನಿಂದಲೇ ನುಡಿದರು. ಅವರ ಗಂಡನ ಮನೆ ಜಪ್ತಿ ಮಾಡುವ ಸಂದರ್ಭದಲ್ಲಿ ನಾನೇ ಖುದ್ದಾಗಿ 8 ಲಕ್ಷ ರೂ ಕೊಟ್ಟು ಮನೆ ಉಳಿಸಿಕೊಟ್ಟಿದ್ದೆ. ಇದನ್ನೆಲ್ಲಾ ಮರೆತಿರುವ ಲಕ್ಷ್ಮೀ ಹೆಬ್ಬಾಳ್ಕರ್ ಇದೀಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ರಮೇಶ್ ಹರಿಹಾಯ್ದರು.

 

ರಾಜ್ಯ ರಾಜಕಾರಣದಲ್ಲಿ ಸಂಚಲನ ಹುಟ್ಟಿಸಿರುವ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಗೆಲ್ಲೋರಾರು?

ಪಿಎಲ್‌ಡಿ ಕ್ಯಾತೆ, ಲಕ್ಷ್ಮೀ ಹೆಬ್ಬಾಳ್ಕರ್ ಪರ ತೀರ್ಪು: ಏನಂದ್ರು ಸತೀಶ್!

ಕೊನೆಗೂ ಗೆದ್ದ ಲಕ್ಷ್ಮೀ ಹೆಬ್ಬಾಳ್ಕರ್: ಶೀಘ್ರದಲ್ಲೇ ಪಿಎಲ್ ಡಿ ಬ್ಯಾಂಕ್ ಚುನಾವಣೆ!

click me!