ಉದ್ದೇಶ ಪೂರ್ವಕವಾಗಿಯೇ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಬದಲಿಸಲಾಗಿದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ರೈಲಿಗೆ ಒಡೆಯರ್ ಹೆಸರನ್ನು ಉದ್ದೇಶ ಪೂರ್ವಕವಾಗಿಯೇ ಬದಲಿಸಲಾಗಿದೆ.
ಮೈಸೂರು (ಅ.13): ಉದ್ದೇಶ ಪೂರ್ವಕವಾಗಿಯೇ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಬದಲಿಸಲಾಗಿದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ರೈಲಿಗೆ ಒಡೆಯರ್ ಹೆಸರನ್ನು ಉದ್ದೇಶ ಪೂರ್ವಕವಾಗಿಯೇ ಬದಲಿಸಲಾಗಿದೆ. ಟಿಪ್ಪು ಕನ್ನಡ ವಿರೋಧಿ ಎನ್ನುವುದಕ್ಕೆ ಹಲವು ಉದಾಹರಣೆ ಇದೆ. ಎಲ್ಲೆ ಹೆಸರು ಕಿತ್ತುಹಾಕಿದರೂ ಟಿಪ್ಪು ನಮ್ಮ ಮನಸ್ಸಿನಲ್ಲಿ ಇದ್ದಾನೆ ಎಂಬುವವರನ್ನೂ ಜನ ಮರೆತಿದ್ದಾರೆ ಎಂದು ಹೇಳಿದರು.
ಮನಸ್ಸಿನಲ್ಲಿ ಇಲ್ಲದಿರುವವರನ್ನು ಜನರೇ ಕಿತ್ತು ಹಾಕಿದ್ದಾರೆ. ಮಹಾರಾಜರು ಮೈಸೂರಿನ ಅಭಿವೃದ್ಧಿಗೆ ಕೊಟ್ಟನೂರಾರು ಕೊಡುಗೆಗಳನ್ನು ನಾನು ಹೇಳುತ್ತೇನೆ. ಟಿಪ್ಪು ಬೆಂಬಲಿಸುವವರು, ಆತನ ಬಗ್ಗೆ ಮಾತನಾಡುವವರು ಟಿಪ್ಪು ಕೊಟ್ಟಮೂರು ಕೊಡುಗೆಗಳನ್ನು ಜನರ ಮುಂದಿಡಲಿ. ಟಿಪ್ಪುವಿಗೂ- ಮೈಸೂರಿಗೂ ಏನು ಸಂಬಂಧ. ಟಿಪ್ಪು ಏನು ಮೈಸೂರಿನವನಾ? ಅವನು ಶ್ರೀರಂಗಪಟ್ಟಣದವನು. ಮೈಸೂರಿನಲ್ಲಿ ನಡೆದಿರುವ ಅಭಿವೃದ್ಧಿಯಲ್ಲಿ ರಾಜರ ಅಪಾರವಾದ ಕೊಡುಗೆ ಇದೆ. ಒಂದು ರೈಲಿಗೆ ಇಟ್ಟಿರುವ ಹೆಸರನ್ನು ಬದಲಾಯಿಸಿರುವ ಉದಾಹರಣೆಗಳು ಇಲ್ಲ. ಆದರೆ, ಇದನ್ನು ಉದ್ದೇಶಪೂರ್ವಕವಾಗಿಯೇ ಪ್ರಯತ್ನ ನಡೆಸಿ ಬದಲಿಸಲಾಗಿದೆ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.
Mysuru: ಅರಣ್ಯ ಇಲಾಖೆ ವಶದಲ್ಲಿದ್ದ ಹಾಡಿಯ ವ್ಯಕ್ತಿ ಅನುಮಾನಾಸ್ಪದ ಸಾವು
ಮೈಸೂರು ಮಹಾರಾಜರ ಬಗ್ಗೆ ಏಕವಚನ, ಉಡಾಫೆಯಿಂದ ಮಾತನಾಡುವ ಸಿದ್ದರಾಮಯ್ಯ ಅವರಿಂದ ನಾವು ಪಾಠ ಕಲಿಯಬೇಕಿಲ್ಲ. ದೇವರಾಜ ಮಾರುಕಟ್ಟೆವಿಷಯದಲ್ಲೂ ಮಹಾರಾಜರು ಅವರ ಮನೆಯಿಂದ ದುಡ್ಡು ತಂದಿಲ್ಲ ಎಂದು ಹೀಯಾಳಿಸಿದ್ದರು. ಟಿಪ್ಪು ಹೆಸರನ್ನು ಜನರ ಮನಸ್ಸಿನಿಂದ ತೆಗೆಯಲು ಸಾಧ್ಯವಿಲ್ಲ ಎನ್ನುವವರ ಹೆಸರನ್ನೇ ಜನರು ಮರೆತಿದ್ದಾರೆ. ಅಂತಹವರನ್ನೂ ಕಿತ್ತು ಹಾಕಿದ್ದಾರೆ ಎಂದು ಅವರು ಟೀಕಿಸಿದರು.
ಮೈಸೂರು ದಸರಾ ಅದ್ವಾನವಾಯಿತು ಎಂಬ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಟೀಕೆಗೆ ನೇರವಾಗಿ ಟಾಂಗ್ ಕೊಟ್ಟಸಂಸದ ಪ್ರತಾಪಸಿಂಹ, ಮನೆಯಲ್ಲಿ ಒಂದು ಮದುವೆ ಮಾಡಿದರೆ ನೂರಾರು ಮಂದಿಗೆ ಹಲವಾರು ವ್ಯತ್ಯಾಸವಾಗುತ್ತದೆ. ಒಂದಷ್ಟುತಪ್ಪುಗಳಾಗುತ್ತದೆ. ಇನ್ನು ಲಕ್ಷಾಂತರ ಜನ ಬಂದು ಹೋದ ಕಾರ್ಯಕ್ರಮದಲ್ಲಿ ವ್ಯತ್ಯಾಸವಾಗುವುದು ಸಹಜ. ಮೊಸರಲ್ಲಿ ಕಲ್ಲು ಹುಡುಕುವವರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದು ಅವರು ತಿಳಿಸಿದರು.
ಪರ್ಶಿಯನ್ ಭಾಷೆ ಹೇರಿಕೆ: ಟಿಪ್ಪು ಒಬ್ಬ ಕನ್ನಡ ವಿರೋಧಿ. ಟಿಪ್ಪು ಕನ್ನಡದ ಬದಲಿಗೆ ಪರ್ಶಿಯನ್ ಭಾಷೆಯನ್ನು ಹೇರಿದ್ದ. ದಿವಾನ ಎನ್ನುವ ಪದ ಕೂಡ ಪರ್ಶಿಯನ್ ಭಾಷೆಯದ್ದು. ಕಂದಾಯ ಇಲಾಖೆಯಲ್ಲಿರುವ ಪ್ರತಿಯೊಂದು ಪದಗಳು ಪರ್ಶಿಯನ್ ಭಾಷೆಗೆ ಸೇರಿದೆ. ಸಿದ್ದರಾಮಯ್ಯ ಓದಿದ ವಿಶ್ವವಿದ್ಯಾನಿಲಯ ಕೂಡ ಮೈಸೂರು ಮಹಾರಾಜರು ಕಟ್ಟಿಸಿದ್ದು. ಆದರೆ ಸಿದ್ದರಾಮಯ್ಯ ಮಹಾರಾಜರ ಬಗ್ಗೆ ಉಡಾಫೆಯಿಂದ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
Mysuru : ಪೊಲೀಸ್ ಠಾಣಾಗಳ ವ್ಯಾಪ್ತಿ ಪ್ರದೇಶಗಳ ಮರುಹಂಚಿಕೆ
ಮುಂದಿನ ದಿನಗಳಲ್ಲಿ ಪರ್ಶಿಯನ್ ಭಾಷೆಯಲ್ಲಿರುವ ಹೆಸರು ಬದಲಿಸುವ ಕುರಿತು ಚಿಂತಿಸಲಾಗುವುದು. ನಜರಬಾದ್, ಖಿಲ್ಲೆ ಮೊಹಲ್ಲಾ ಹೀಗೆ ಹತ್ತಾರು ಹೆಸರುಗಳು ಪರ್ಶಿಯನ್ ಪದಗಳಲ್ಲಿದೆ. ಟಿಪ್ಪು ಹೆಸರು ಬದಲಿಸಿದ್ದರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಮೈಸೂರಿಗೆ 10 ರೈಲುಗಳನ್ನು ತಂದಿದ್ದೇನೆ. ಈ ದೇಶದ ಯಾವುದೇ ಸಂಸದ ಹತ್ತು ವರ್ಷಗಳಲ್ಲಿ ಮಾಡದ ಸಾಧನೆಯನ್ನು ನಾನು ಮಾಡಿದ್ದೇನೆ. ಜನರು ಗಮನಿಸುತ್ತಿದ್ದಾರೆ ಎಂದು ಅವರು ಹೇಳಿದರು. ಮೇಯರ್ ಶಿವಕುಮಾರ್ ಇದ್ದರು.