
ರಾಮನಗರ (ಡಿ.02): ತಾಲೂಕಿನ ಕೈಲಾಂಚ ಹೋಬಳಿಯ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡಲಹಳ್ಳಿದೊಡ್ಡಿ ಗ್ರಾಮದಲ್ಲಿ ಮಂಗಳವಾರ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ರಾಮನಗರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರವಿ ಮತ್ತು ಅವರ ಬೆಂಬಲಿಗರು ಉಪಮುಖ್ಯಮಂತ್ರಿ ಡಾ.ಅಶ್ವಥನಾರಾಯಣ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಮೂಡಲಹಳ್ಳಿದೊಡ್ಡಿ ಗ್ರಾಮದ ರವಿ ಅವರ ಸ್ವಗೃಹಕ್ಕೆ ಆಗಮಿಸಿದ ಅಶ್ವತ್ಥ ನಾರಾಯಣ ಅವರು, ರವಿ ಮತ್ತು ಅವರ ಬೆಂಬಲಿಗರಿಗೆ ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಿದರು.
ರವಿ ಅವರ ಜೊತೆ ಪರಮೇಶ್, ವೆಂಕಟಪ್ಪ, ನಿಖಿಲ್ ದೊರೆಗೌಡ, ಪುನೀತ್ ಗೌಡ, ಅಕ್ಷಯ್ ಶೆಟ್ಟಿ, ಸಿದ್ದಪ್ಪಾಜಿ, ದಿನೇಶ್, ಕುಮಾರ್ ಮುಂತಾದವರು ಪಕ್ಷ ಸೇರ್ಪಡೆಯಾದರು.
ಹೆಣ್ಣನ್ನ ಕಾಮದ ವಸ್ತುವಾಗಿ ನೋಡೋದು ಸರಿಯಲ್ಲ : ಸಿದ್ದರಾಮಯ್ಯ ವಿರುದ್ಧ ಫುಲ್ ಗರಂ ...
ಈ ಸಂದರ್ಭದಲ್ಲಿ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ಮುನಿಸ್ವಾಮಿ, ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಮಹೇಶ್ ತೆಂಗಿನಕಾಯಿ, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಮುಖಂಡರಾದ ಎಸ್.ಆರ್. ನಾಗರಾಜು, ಶಿವಮಾದು, ಲೀಲಾವತಿ, ಡಿ. ನರೇಂದ್ರ, ಬಿ. ನಾಗೇಶ್, ರುದ್ರದೇವರು, ಜಿ.ವಿ. ಪದ್ಮನಾಭ್, ಎನ್.ಎಸ್. ಲಿಂಗೇಗೌಡ, ರಾಜು, ಜಗದೀಶ್, ರಾಜೇಶ್ ಹಾಜರಿದ್ದರು.