ವಿಜಯನಗರ ಜಿಲ್ಲೆ ಆಡಳಿತಾತ್ಮಕ ಅನುಕೂಲಕ್ಕಾಗಿ ಆಗಿದೆ. ಹೊಸ ಜಿಲ್ಲೆಯಿಂದ ಪಶ್ಚಿಮ ತಾಲೂಕುಗಳಿಗೆ ಹೆಚ್ಚು ಅನುಕೂಲವಾಗಲಿದೆ. ಇದನ್ನು ಶಾಸಕರು ಅರ್ಥ ಮಾಡಿಕೊಳ್ಳಬೇಕು ಎಂದ ಶ್ರೀರಾಮುಲು
ಬಳ್ಳಾರಿ(ಡಿ. 02): ಕಂಪ್ಲಿ ಬಂದ್ ವೇಳೆ ‘ಮುಖ್ಯಮಂತ್ರಿ ಹಿಟ್ಲರ್‌ನಂತೆ ತೀರ್ಮಾನ ತೆಗೆದುಕೊಂಡಿದ್ದಾರೆ’ ಎಂದು ದೂರಿದ ಶಾಸಕ ಜೆ.ಎನ್. ಗಣೇಶ್ ಹೇಳಿಕೆಯನ್ನು ಖಂಡಿಸಿರುವ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಶಾಸಕರು ಜವಾಬ್ದಾರಿಯುತವಾಗಿ ಹೇಳಿಕೆ ನೀಡಬೇಕು. ಜಿಲ್ಲೆ ವಿಭಜನೆಯ ಬಗ್ಗೆ ಆಕ್ಷೇಪಣೆ ಇದ್ದರೆ ಸಲ್ಲಿಸಬೇಕೇ ವಿನಃ ತಮಗೆ ತಿಳಿದಂತೆ ಮಾತನಾಡಬಾರದು ಎಂದಿದ್ದಾರೆ.
ಕಂಪ್ಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಶ್ರೀರಾಮುಲು, ಕಂಪ್ಲಿ ಬಂದ್ ವೇಳೆ ಬಿಜೆಪಿ ಕಾರ್ಯಕರ್ತರಿಗೆ ಆವಾಜ್ ಹಾಕಿದ್ದು ಅವರಿಗೆ ಶೋಭೆ ತರುವುದಿಲ್ಲ. ಹೊಸ ಜಿಲ್ಲೆಯೊಳಗೆ ಸೇರ್ಪಡೆಗಾಗಿ ನಡೆದ ಹೋರಾಟ ಜಗಳವಾಗಿ ಮಾರ್ಪಾಡಾದ ಬಗ್ಗೆ ವಿಷಾದವಿದೆ. ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ವರ್ತನೆ ಮಾಡಬೇಕು. ಸಂಯಮ ಕಾಪಾಡಿಕೊಳ್ಳಬೇಕು. ಕಾನೂನಿನಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲೆ ವಿಭಜನೆಗೆ ವಿರೋಧ: 'ಮುಂದೆ ಆಗುವ ಪರಿಣಾಮದ ಬಗ್ಗೆ ಸಿಎಂಗೆ ತಿಳಿಸಿದ್ದೇನೆ'
ವಿಜಯನಗರ ಜಿಲ್ಲೆ ಆಡಳಿತಾತ್ಮಕ ಅನುಕೂಲಕ್ಕಾಗಿ ಆಗಿದೆ. ಎಲ್ಲ ಶಾಸಕರ ವಿಶ್ವಾಸಕ್ಕೆ ತೆಗೆದುಕೊಂಡೇ ಮುಖ್ಯಮಂತ್ರಿ ಈ ನಿರ್ಧಾರ ಕೈಗೊಂಡಿದ್ದಾರೆಯೇ ಹೊರತು ಏಕಪಕ್ಷೀಯ ನಿರ್ಣಯ ಕೈಗೊಂಡಿಲ್ಲ. ಹೊಸ ಜಿಲ್ಲೆಯಿಂದ ಪಶ್ಚಿಮ ತಾಲೂಕುಗಳಿಗೆ ಹೆಚ್ಚು ಅನುಕೂಲವಾಗಲಿದೆ. ಇದನ್ನು ಶಾಸಕರು ಅರ್ಥ ಮಾಡಿಕೊಳ್ಳಬೇಕು ಎಂದರು.