ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಅವರ ರಜಪೂತ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ರಜಪೂತ ಸಭಾ ವತಿಯಿಂದ ರವಿ ಭಾವಚಿತ್ರಕ್ಕೆ ಮಸಿ ಬಳಿದು ಪ್ರತಿಭಟನೆ ನಡೆಸಿದರು.
ಶಿವಮೊಗ್ಗ (ಆ.18) : ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಅವರ ರಜಪೂತ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ರಜಪೂತ ಸಭಾ ವತಿಯಿಂದ ರವಿ ಭಾವಚಿತ್ರಕ್ಕೆ ಮಸಿ ಬಳಿದು ಪ್ರತಿಭಟನೆ ನಡೆಸಿದರು.
ಊರಲ್ಲಿ ಹೊಡೆದಾಡಿಸುವ ರಾಜಕಾರಣ ಮಾಡಿಲ್ಲ; ಸಿ.ಟಿ.ರವಿ
ಸಿ.ಟಿ. ರವಿ ಇತ್ತೀಚೆಗೆ ಟಿ.ವಿ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ದೇಶದ ಇತಿಹಾಸವನ್ನು ಕೆಣಕಿ ರಜಪೂತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಬ್ರಿಟಿಷರ ವಿರುದ್ಧ ಸ್ವತಂತ್ರ ಹೋರಾಟ ಮಾಡುವಾಗ ರಜಪೂತರು ಇದು ತಮ್ಮ ಕೆಲಸ ಅಲ್ಲ ಎಂದು ಸುಮ್ಮನೆ ಕುಳಿತಿದ್ದರು ಮತ್ತು ಶಿವಾಜಿ ಮೊಘಲರ ವಿರುದ್ಧ ಏಕಾಂಗಿಯಾಗಿ ಹೋರಾಟ ಮಾಡುವಾಗ ಇದೇ ರಜಪೂತರು ಮೊಘಲರ ಜೊತೆ ಇದ್ದರು ಎಂದು ಹೇಳಿ ರಜಪೂತ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಸಿ.ಟಿ. ರವಿ ಚರಿತ್ರೆ ಹಾಗೂ ಇತಿಹಾಸವನ್ನು ಸರಿಯಾಗಿ ಅಧ್ಯಯನ ಮಾಡದೇ, ಅಗತ್ಯವಾದ ಮಾಹಿತಿ ಸರಿಯಾಗಿ ತಿಳಿದುಕೊಳ್ಳದೇ ಕೇವಲ ಪ್ರಚಾರಕ್ಕಾಗಿ ಬಾಯಿಗೆ ಬಂದಂತೆ ಮಾತಾಡಿ ಸಮಾಜದ ಗೌರವವಕ್ಕೆ ಧಕ್ಕೆ ತಂದಿರುತ್ತಾರೆ ಎಂದು ಆರೋಪಿಸಿದರು.
ಇತಿಹಾಸ ಪುಟಗಳನ್ನು ತಿರುವಿ ಹಾಕಿದರೆ ಇತಿಹಾಸಗಾರರೇ ವರ್ಣಿಸಿದಂತೆ ಈ ದೇಶದ ಚರಿತ್ರೆಯಲ್ಲಿ ಮೊಘಲರ ವಿರುದ್ಧ ಪರಾಕ್ರಮದಿಂದ ರಜಪೂತ ರಾಜರುಗಳು ಸೆಣಸಾಡಿದ್ದರೆಂದು, ಮೊಘಲರಿಗೆ ಸಿಂಹ ಸ್ವಪ್ನರಾಗಿ ಕಾಡಿದ್ದರೆಂದು, ಅನೇಕ ಯುದ್ಧಗಳಲ್ಲಿ ಮೊಘಲರನ್ನು ಸೋಲಿಸಿದರೆಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಮೊಘಲರಾದ ಔರಂಗಜೇಬ್, ಅಕ್ಬರ್ ಕಾಲದಲ್ಲಿ ರಜಪೂತರ ಹೋರಾಟ ಮತ್ತು ಪರಾಕ್ರಮವನ್ನು ಚರಿತ್ರೆಯು ಹೊಗಳುತ್ತದೆ. ಈಗಲೂ ಕೂಡ ದೇಶ ಪ್ರೇಮ, ಹೋರಾಟ, ಪರಾಕ್ರಮ, ಧರ್ಮ, ನಿಷ್ಠೆ ವಿಷಯ ಬಂದಾಗ ರಜಪೂತ ಜನಾಂಗದವರು ಎಲ್ಲರಿಗೂ ಮಿಗಿಲಾಗಿ ನಿಲ್ಲುತ್ತಾರೆ. ಸೈನ್ಯದಲ್ಲಿ ಈಗಲೂ ಅಪಾರ ಸಂಖ್ಯೆಯಲ್ಲಿ ರಜಪೂತರು ಇದ್ದು, ಅವರ ಕರ್ತವ್ಯ, ನಿಷ್ಠೆ, ಧೈರ್ಯ ಮತ್ತು ಪರಾಕ್ರಮಗಳಿಗೆ ಸಾಕ್ಷಿಯಾಗಿರುತ್ತದೆ. ಇಂತಹ ಸಮಾಜದ ವಿರುದ್ಧ ಸಿ.ಟಿ.ರವಿಯವರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎಂದು ಟೀಕಿಸಿದರು.
ಆರ್‌ಎಸ್‌ಎಸ್ ದೇಶ ಭಕ್ತ ಸಂಘಟನೆ, ಸಿದ್ದರಾಮಯ್ಯ ವಿರುದ್ದ ಸಿ.ಟಿ ರವಿ ಕಿಡಿ
ಪ್ರತಿಭಟನೆಯಲ್ಲಿ ಜಿಲ್ಲಾ ರಜಪೂತ್ ಸಭಾದ ಅಧ್ಯಕ್ಷ ಆರ್.ದೀಪಕ್‌ಸಿಂಗ್, ಎಸ್.ಎಂ.ವಿಶ್ವನಾಥ್‌ಸಿಂಗ್, ಎಸ್.ಡಿ. ಅನಂತರಾಂಸಿಂಗ್, ರವೀಂದ್ರಸಿಂಗ್, ರಾಜೇಂದ್ರಸಿಂಗ್, ಆರ್.ಹೆಚ್.ಸತ್ಯನಾರಾಯಣಸಿಂಗ್ ಮತ್ತಿತರರು ಇದ್ದರು.