ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ರಾಜಕಾರಣಿಗಳು ತಾಂತ್ರಿಕವಾಗಿ ಮುಗ್ಧರಿದ್ದಾರೆ| ಒರಟು ಸ್ವಭಾವ, ಬಿಚ್ಚು ಮನಸ್ಸಿನವರು ಹೀಗಾಗಿ ಷಡ್ಯಂತ್ರಕ್ಕೊಳಗಾಗಿದ್ದಾರೆ| ಬೆಳಗಾವಿಯ ಸುವರ್ಣಸೌಧ ಅಧಿವೇಶನದಲ್ಲಿ ಶಾಸಕರು ಪಾಲ್ಗೊಳ್ಳುತ್ತಾರೆ| ಶನಿವಾರ, ರವಿವಾರ ಗೋವಾ ಪ್ರವಾಸಕ್ಕೆ ಹೋಗುವ ಶಾಸಕರು| ಗೋವಾಗೆ ಹಿಂದೆ ಹೋಗಿದ್ದ ಮುಂದೆ ಹೋಗುವ ರಾಜಕಾರಣಿಗಳು ಎಚ್ಚರದಿಂದಿರಲು ರಾಜಶೇಖರ ಮುಲಾಲಿ ಸಲಹೆ|
ಬೆಳಗಾವಿ(ಮಾ.08): ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಇಡೀ ಪ್ರಕರಣ ಷಡ್ಯಂತ್ರದಿಂದ ಕೂಡಿದೆ. ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದಲ್ಲಿ ಬಲಿ ಪಶುರಾಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಹೇಳಿದ್ದಾರೆ.
ಇಂದು(ಸೋಮವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ರಾಜಕಾರಣಿಗಳು ತಾಂತ್ರಿಕವಾಗಿ ಮುಗ್ಧರಿದ್ದಾರೆ. ಒರಟು ಸ್ವಭಾವ, ಬಿಚ್ಚು ಮನಸ್ಸಿನವರು ಹೀಗಾಗಿ ಷಡ್ಯಂತ್ರಕ್ಕೊಳಗಾಗಿದ್ದಾರೆ. ಬೆಳಗಾವಿಯ ಸುವರ್ಣಸೌಧ ಅಧಿವೇಶನದಲ್ಲಿ ಶಾಸಕರು ಪಾಲ್ಗೊಳ್ಳುತ್ತಾರೆ. ಶನಿವಾರ ರವಿವಾರ ಗೋವಾ ಪ್ರವಾಸಕ್ಕೆ ಹೋಗುತ್ತಾರೆ. ಗೋವಾಗೆ ಹಿಂದೆ ಹೋಗಿದ್ದ ಮುಂದೆ ಹೋಗುವ ರಾಜಕಾರಣಿಗಳು ಎಚ್ಚರದಿಂದರಲು ರಾಜಶೇಖರ ಮುಲಾಲಿ ಸಲಹೆ ನೀಡಿದ್ದಾರೆ.
ರಾಸಲೀಲೆ ಸಿಡಿ ಕೇಸ್: ರಮೇಶ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಮುಖಂಡ
ಉತ್ತರ ಕರ್ನಾಟಕ ಭಾಗದ ರಾಜಕಾರಣಿಗಳು ಸಿಎಂ ಆಗಬಾರದು, ಉತ್ತರ ಕರ್ನಾಟಕ ಭಾಗದ ರಾಜಕಾರಣಿಗಳು ಪ್ರಭಾವಿಗಳಾಗಬಾರದು, ಯಾವುದೇ ಪಕ್ಷದವರಾದರೂ ಪ್ರಭಾವಿಗಳಾಗಬಾರದು, ಉತ್ತರ ಕರ್ನಾಟಕ ಅಭಿವೃದ್ಧಿ ಆಗಬಾರದು ಎಂಬ ಉದ್ದೇಶದಿಂದನ ಹೀಗೆ ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ರಮೇಶ್ ಜಾರಕಿಹೊಳಿ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿದ್ದಾರೆ. ಬಿಜೆಪಿ ಸರ್ಕಾರ ರಚನೆಯಲ್ಲಿ ರಮೇಶ್ ಜಾರಕಿಹೊಳಿ ಅವರ ಪಾತ್ರ ದೊಡ್ಡದಾಗಿದೆ ಎಂದು ತಿಳಿಸಿದ್ದಾರೆ.
ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಂದ ನೋಟಿಸ್ ಜಾರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಜಶೇಖರ್ ಮುಲಾಲಿ ಅವರು, ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆ ಇತ್ತು, ಆದರೆ ಬೆಳಗಾವಿಯಲ್ಲಿದ್ದೇನೆ, ನಾನೆಲ್ಲೂ ನನ್ನ ಬಳಿ ಸಿಡಿ ಇದೆ ಎಂದು ಹೇಳಿಯೇ ಇಲ್ಲ. ಕೆ.ಹೆಚ್. ಇಂದಿರಾ ಅನ್ನೋರು ಕಬ್ಬನ್ ಪಾರ್ಕ್ ಠಾಣೆಯಲ್ಲಿ ಸುಳ್ಳು ದೂರು ನೀಡಿದ್ದಾರೆ. ದೂರು ನೀಡಿದವರ ಹಿಂದೆ ಮಾಜಿ ಸಿಎಂ ಇರಬಹುದು? ಕುಂಬಳಕಾಯಿ ಕಳ್ಳ ಅಂದ್ರೆ ಅವರೇಕೆ ತಮ್ಮ ಹೆಗಿಲು ಮುಟ್ಟಿಕೊಳ್ಳುತ್ತಾರೆ?, ನನಗೂ ಅದಕ್ಕೂ ಸಂಬಂಧ ಇಲ್ಲ ಎಂದು ರಾಜಶೇಖರ ಮುಲಾಲಿ ಸ್ಪಷ್ಟಪಡಿಸದ್ದಾರೆ.