ಕರ್ನಾಟಕ ಬಜೆಟ್; ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದೇನು?  ಸಿದ್ದು  ಬೇಡಿಕೆಗೆ ಮನ್ನಣೆ

By Suvarna News  |  First Published Mar 8, 2021, 2:17 PM IST

ಬಜೆಟ್  ಮಂಡಿಸಿದ ಸಿಎಂ ಬಿಎಸ್ ಯಡಿಯೂರಪ್ಪ/ ಕೃಷಿ ಕ್ಷೇತ್ರಕ್ಕೆ ಭರಪೂರ ಕೊಡುಗೆ/ ಅಡಿಕೆ ಹಳದಿ ಎಲೆ ರೋಗ ಸಂಶೋಧನೆ ಮತ್ತು  ಪರ್ಯಾಯ ಬೆಳೆ ಪ್ರೋತ್ಸಾಹಿಸಲು  25 ಕೋಟಿ/ ತೋಟಗಾರಿಕಾ ಬೆಳೆ ರಫ್ತಿಗೆ ವಿಮಾನ ನಿಲ್ದಾಣದಲ್ಲಿ ಸೌಲಭ್ಯ


ಬೆಂಗಳೂರು(ಮಾ.  08)   ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೋಮವಾರ ಮಂಡಿಸಿರುವ 2021-22ನೇ ಸಾಲಿನ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಭರಪೂರ ಕೊಡುಗೆ ನೀಡಿದ್ದಾರೆ.

ಕೃಷಿ ಕ್ಷೇತ್ರಕ್ಕೆ  31,028 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ.  ಹಸಿರೆಲೆ ಗೊಬ್ಬರ, ಸಾವಯವ, ಸಿರಿಧಾನ್ಯ ಮಾರಾಟಕ್ಕೆ ಇ ಮಾರುಕಟ್ಟೆ ಪ್ರೈ. ಲಿಮಿಟೆಡ್, ಅಡಿಕೆ ಬೆಳೆಗೆ ಪರಿಹಾರ ಬೆಲೆಯಾಗಿ 25 ಕೋಟಿ ರೂಪಾಯಿ ಮೀಸಲಿಡುವುದಾಗಿ ಘೋಷಿಸಿದ್ದಾರೆ.

Tap to resize

Latest Videos

ಹೈಲೈಟ್ಸ್
* ಸಾವಯವ ಕೃಷಿ ಉತ್ತೇಜನಕ್ಕೆ  500  ಕೋಟಿ ರೂ.
*ಕೃಷಿ ವಿಶ್ವವಿದ್ಯಾನಿಲಯದಲ್ಲಿ ರೈತರ ಮಕ್ಕಳಿಗೆ ನೀಡುವ ಮೀಸಲು ಶೇ.  50 ಕ್ಕೆ ಏರಿಕೆ
* ವಿಜಯಪುರ ಜಿಲ್ಲೆ ಇಟ್ಟಂಗಿಹಾಳದಲ್ಲಿ ಆತ್ಮನಿರ್ಭರ ಭಾರತ್ ಯೋಜನೆಯಲ್ಲಿ ಆಹಾರ ಪಾರ್ಕ್
* ಸಣ್ಣ ಟ್ರ್ಯಾಕ್ಟರ್ ಗಳಿಗೆ ನೀಡುತ್ತಿದ್ದ ಸಹಾಯಧನ 25-45 PTO HP  ಟ್ರ್ಯಾಕ್ಟರ್ ಗಳಿಗೆ ವಿಸ್ತರಣೆ
*ಸಾವಯವ ಮತ್ತು ಸಿರಿಧಾನ್ಯ ಮಾರಾಟಕ್ಕೆ ಇ- ಮಾರುಕಟ್ಟೆ
*  ಕೃಷಿ ಭೂಮಿಯಲ್ಲಿ ಸಾವಯವ ಇಂಗಾಲ ಹೆಚ್ಚಿಸಲು ಹತ್ತು ಕೋಟಿ ರೂ.
* ಆಹಾರ ಸಂಸ್ಕರಣೆ ಮತ್ತು ಕೊಯ್ಲೋತ್ತರ ನಿರ್ವಹಣಾ ಘಟಕಗಳಿಗೆ ನೀಡುವ ಶೇ.  35 ಸಹಾಯಧನ ಶೇ.  50ಕ್ಕೆ ಏರಿಕೆ
* ಕೊಪ್ಪಳದದ ಸಿರಿವಾರದಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್
* ಹೊಸ ಬೆಳೆ ಪರಿಚಯಿಸಲು ಪ್ರಾತ್ಯಕ್ಷಿಕಾ ಕೇಂದ್ರಗಳು
* ಅಡಿಕೆ ಹಳದಿ ಎಲೆ ರೋಗ ಸಂಶೋಧನೆ ಮತ್ತು  ಪರ್ಯಾಯ ಬೆಳೆ ಪ್ರೋತ್ಸಾಹಿಸಲು  25 ಕೋಟಿ
* ಹೊಸ ಹೈಬ್ರಿಡ್ ಬೀಜ ನಿಗಮ ಸ್ಥಾಪನೆ

ಬಜೆಟ್ ನ ಪೂರ್ಣ ವಿವರಗಳು ಇಲ್ಲಿದೆ?

* ತೋಟಗಾರಿಕಾ ಬೆಳೆ ರಫ್ತಿಗೆ ವಿಮಾನ ನಿಲ್ದಾಣದಲ್ಲಿ ಸೌಲಭ್ಯ
* ಕರ್ನಾಟಕ ದ್ರಾಕ್ಷಾರಸ ಮಂಡಳಿಯನ್ನು ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿಯಾಗಿ ಪುನರ್ ರಚಿಸಲು ತೀರ್ಮಾನ
* ಬೆಂಗಳೂರಿನ ಓಕಳಿಪುರಂನಲ್ಲಿ ರೇಷ್ಮೆ ಇಲಾಳೆಯ ಎಲ್ಲ ಕಚೇರಿಗಳು  ಒಂದೇ ಸೂರಿನಡಿ
* ರಾಮನಗರದಲ್ಲಿ ಹೈ-ಟೆಕ್ ರೇಷ್ಮೆ ಗೂಡು ಮಾರುಕಟ್ಟೆಗೆ 75 ಕೋಟಿ
* ಪ್ರತಿ  ಜಿಲ್ಲೆಗೊಂದು ಗೋಶಾಲೆ
* ಹೆಸರಘಟ್ಟ್ದಲ್ಲಿ ದೇಶಿಯ ಪಶುಸಂಪತ್ತು ಕಾಪಾಡಲು ಥೀಮ್ಸ್ ಪಾರ್ಕ್
* ಸಮಗ್ರ ಗೋಸಂಕುಲ ಯೋಜನೆಯಡಿ ರಾಜ್ಯದ ರೈತರಿಗೆ ಹೊರರಾಜ್ಯದ ದೇಶಿ ತಳಿ ಪರಿಚಯ
* ಆಕಸ್ಮಿಕ ಮರಣ ಹೊಂದುವ ಕುರಿ ಮೇಕೆ ಪರಿಹಾರಕ್ಕೆ ಅನುಗ್ರಹ
* ಶಿವಮೊಗ್ಗ ಪಶುವೈದ್ಯಕೀಯ ಕಾಲೇಜಿನಲ್ಲಿ ಸಂಶೋಧನಾ ಕೇಂದ್ರ
* ಯಾಂತ್ರಿಕೃತ ದೊಣಿಗಳಿಗೆ ಕರರಹಿತ ಡಿಸೇಲ್
* ಬಳ್ಳಾರಿಯ ಆಲದಹಳ್ಳಿ ಅತ್ಯಾಧುನಿಕ ಮೆಣಸಿನಕಾಯಿ ಮಾರುಕಟ್ಟೆ
*ಚಾಮರಾಜನಗರದಲ್ಲಿ ಅರಿಶಿನ ಮಾರುಕಟ್ಟೆ
* ಬ್ಯಾಡಗಿಯಲ್ಲಿ ಗುಣ ವಿಶ್ಲೇಷಣಾ ಘಟಕ
* ಕೃಷ್ಣಾ ಮೇಲ್ದಂಡೆ, ಎತ್ತಿನಹೊಳೆ, ಮಹಾದಾಯಿ, ಮೇಕೆದಾಟು,  ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನಕ್ಕೆ ಆದ್ಯತೆ. ಕೊಪ್ಪಳದ ನವಲಿ ಬಳಿ ಸಮತೋಲನಾ ಜಲಾಶಯ
* ಬೇಡ್ತಿ-ವರದಾ ನದಿ ಜೋಡಣೆ ಯೋಜನಾ ವರದಿ ಸಿದ್ಧ ಮಾಡಲು ಸೂಚನೆ
* ಬೆಂಗಳುರು ನಗರ ಮತ್ತು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ
* ಉತ್ತರ ಕನ್ನಡ ಜಿಲ್ಲೆ ಕರಾವಳಿ ಪ್ರದೇಶದ ನದಿ ಪ್ರವಾಹ ತಡೆಯಲು  300 ಕೋಟಿ

 

click me!