16ರಂದು ಬೆಂಗಳೂರಲ್ಲಿ ರೈತ​ಸಂಘ ಜನಾಗ್ರಹ Rally : ಹೆಚ್‌.ಆರ್‌.ಬಸವರಾಜಪ್ಪ

Published : Feb 10, 2023, 05:11 AM IST
16ರಂದು ಬೆಂಗಳೂರಲ್ಲಿ ರೈತ​ಸಂಘ ಜನಾಗ್ರಹ Rally : ಹೆಚ್‌.ಆರ್‌.ಬಸವರಾಜಪ್ಪ

ಸಾರಾಂಶ

ಜನವಿರೋಧಿ ಕಾಯಿದೆಗಳನ್ನು ವಿರೋಧಿಸಿ ಹಲವು ಹಕ್ಕೊತ್ತಾಯಗಳ ಆಗ್ರಹಕ್ಕಾಗಿ ಫೆ.16ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್‌ ಜನಾಗ್ರಹ ರಾರ‍ಯಲಿ ಮತ್ತು ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್‌.ಆರ್‌.ಬಸವರಾಜಪ್ಪ ಹೇಳಿದರು.

ಶಿವಮೊಗ್ಗ (ಫೆ.10) : ಜನವಿರೋಧಿ ಕಾಯಿದೆಗಳನ್ನು ವಿರೋಧಿಸಿ ಹಲವು ಹಕ್ಕೊತ್ತಾಯಗಳ ಆಗ್ರಹಕ್ಕಾಗಿ ಫೆ.16ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್‌ ಜನಾಗ್ರಹ ರಾಲಿ ಮತ್ತು ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್‌.ಆರ್‌.ಬಸವರಾಜಪ್ಪ ಹೇಳಿದರು.

ಇಲ್ಲಿನ ಪ್ರೆಸ್‌ಟ್ರಸ್ಟ್‌ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜನ ಚಳವಳಿಗಳ ಸಂಯುಕ್ತ ಚಲೋ ಎಂಬ ಹೆಸರಿನಲ್ಲಿ ಸುಮಾರು 22ಕ್ಕೂ ವಿವಿಧ ಸಂಘಟನೆಗಳು ಒಟ್ಟಾಗಿ ಒಕ್ಕೂಟದ ರೀತಿಯಲ್ಲಿ ಈ ಪ್ರತಿಭಟನಾ ಸಮಾವೇಶ ಮತ್ತು ರಾರ‍ಯಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಂದಾಯ ಸಚಿವ ಅಶೋಕ್‌ರ ಗ್ರಾಮ ವಾಸ್ತವ್ಯಕ್ಕೆ ರೈತ ಸಂಘ ಲೇವಡಿ

ಕಳೆದ ನಾಲ್ಕು ವರ್ಷಗಳು ಕರ್ನಾಟಕದ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಜನರ ನೋವಿಗೆ ಸ್ಪಂದಿಸಲಿಲ್ಲ. ಹೋರಾಟಗಳನ್ನು ಪರಿಗಣಿಸಲಿಲ್ಲ. ಜೊತೆಗೆ ಜನವಿರೋಧಿ ಕಾಯಿದೆಗಳು, ರೈತವಿರೋಧಿ ಕಾಯಿದೆಗಳು ಸಾಲು ಸಾಲಾಗಿ ಜಾರಿಯಾದವು. ಯಾವ ಯೋಜನೆಗಳೂ ಬಡವರನ್ನು ತಲುಪಲಿಲ್ಲ. ಮೀಸಲಾತಿ ಕೂಡ ದಿಕ್ಕು ತಪ್ಪಿದೆ. ವಿದ್ಯಾರ್ಥಿ ವೇತನ ಕೂಡ ಕಡಿತಗೊಂಡಿದೆ. ಮಹಿಳೆಯರ ಮತ್ತು ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾದವು. ಜೊತೆಗೆ ಶೇ.40ರಷ್ಟುಕಮಿಷನ್‌ ಎಂಬ ಕುಖ್ಯಾತಿಗೂ ಸರ್ಕಾರ ಪಾತ್ರವಾಯಿತು. ವೋಟ್‌ಬ್ಯಾಂಕ್‌ ಹೆಚ್ಚಿಸಕೊಳ್ಳಲು ಕೋಮುದ್ವೇಷಗಳೇ ಉಂಟಾದವು. ಒಂದು ರೀತಿಯಲ್ಲಿ ರಾಜಕಾರಣವೇ ನೀಚತನಕ್ಕೆ ಇಳಿಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗೆ ಸೌಜನ್ಯವೇ ಇಲ್ಲ:

ಬೆಂಗಳೂರಿನಲ್ಲಿ ವರ್ಷವಿಡೀ ಚಳವಳಿ ನಡೆದರೂ ಸೌಜನ್ಯಕ್ಕೂ ಮುಖ್ಯಮಂತ್ರಿಗಳು ಚಳವಳಿಗಾರರನ್ನು ಮಾತನಾಡಿಸಲಿಲ್ಲ. ಅವರ ನಡೆದ ನೋಡಿದರೆ ರೈತರೇ ಸಮಸ್ಯೆಗಳೇ ಅವರಿಗೆ ಗೊತ್ತಿಲ್ಲ, ಅವರಿಗೆ ಅದು ಬೇಕಾಗೇ ಇಲ್ಲ ಎಂಬುದನ್ನು ತೋರ್ಪಡಿಸಿದ್ದಾರೆ ಎಂದು ಹರಿಹಾಯ್ದರು. ಚಳವಳಿಗಾರರು ಬೆಂಗಳೂರಿನ ಫ್ರೀಡಂ ಪಾರ್ಕ್ ಸೇರಿದಂತೆ ಹಲವು ಕಡೆ ಚಳವಳಿ ನಡೆಸುತ್ತಲೇ ಇರುತ್ತಾರೆ. ಬೆಳಗಾವಿಯಲ್ಲಿಯೂ ಚಳವಳಿ ಮಾಡಿದರು. ಆದರೆ, ಚಳವಳಿಕಾರರನ್ನು ಕರೆದು ಸೌಜನ್ಯಕ್ಕಾಗಿÜರೂ ಮುಖ್ಯಮಂತ್ರಿ ಅವರು ಮಾತನಾಡಲಿಲ್ಲ. ಇದೀಗ ಬಜೆಟ್‌ ಮಂಡನೆಯಲ್ಲಿದ್ದಾರೆ. ಆಗಲೂ ಕೂಡ ಹೋರಾಟಗಾರರನ್ನು, ಸಂಘಟನಕಾರರನ್ನು ಕರೆದು ಚರ್ಚಿಸಬಹುದಿತ್ತು. ಇದೇ ಮೊದಲ ಬಾರಿಗೆ ಈಗಿನ ಮುಖ್ಯಮಂತ್ರಿಗಳು ಅವರನ್ನೂ ಕರೆಯಲಿಲ್ಲ ಎಂದು ಖಾರವಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರೈಮುಖಂಡರಾದ ಕೆ.ರಾಘವೇಂದ್ರ, ಎಸ್‌. ಶಿವಮೂರ್ತಿ, ಟಿ.ಎಂ. ಚಂದ್ರಪ್ಪ, ಜಿ.ಎನ್‌. ಪಂಚಾಕ್ಷರಿ, ಸಿ. ಚಂದ್ರಪ್ಪ ಇದ್ದರು.

ತೇಜಸ್ವಿ ಸೂರ್ಯ ಎಂಬ ಮೂರ್ಖ

ಸಂಸದ ತೇಜಸ್ವಿ ಸೂರ್ಯ ಎಂಬ ಮೂರ್ಖ ರೈತರ ಸಾಲ ಮನ್ನಾ ಮಾಡುವುದು ಬೇಡ ಎಂದು ಹೇಳಿದ್ದಾನೆ. ಆತನಿಗೆ ರೈತರ ಬಗ್ಗೆ ಏನಾದರೂ ಗೊತ್ತಿದೆಯೇ? ಒಂದು ಪಕ್ಷ ರೈತ ತನ್ನ ಕಾಯಕ ಮರೆತರೆ ದೇಶದ ಜನರ ಗತಿ ಏನು? ಈ ದೇಶ ಉಸಿರಾಡುತ್ತಿದೆ ಎಂದಾದರೆ ಅದು ರೈತ ಮತ್ತು ಸೈನಿಕರಿಂದ. ಇದನ್ನು ತೇಜಸ್ವಿಯಂತಹ ಮೂರ್ಖ ಅರ್ಥ ಮಾಡಿಕೊಳ್ಳಬೇಕಿತ್ತು. ರಾಜ್ಯ ರೈತ ಸಂಘ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಆತ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವನು ಎಲ್ಲಿಗೆ ಹೋದರೂ ರೈತರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪಹಣಿ ಬೆಲೆ ಹೆಚ್ಚಳ ವಿರೋಧಿಸಿ ರೈತರಿಂದ ಪ್ರತಿಭಟನೆ

ಭದ್ರೆಯಿಂದ ತುಂಗಭದ್ರೆಗೆ ನೀರು ಹರಿಸಲು ಸಾಧ್ಯವಿಲ್ಲ

ತುಂಗಭದ್ರಾ ಜಲಾಶಯದ ಅಚ್ಚುಕಟ್ಟುದಾರರು ಭದ್ರಾ ಜಲಾಶಯದಿಂದ 7 ಟಿಎಂಸಿ ನೀರು ಕೇಳಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಭದ್ರಾ ಜಲಾಶಯದಲ್ಲಿ ನೀರು ಇಲ್ಲ. ಈ ಭಾಗದ ರೈತರು ಸುಮಾರು 2.50 ಲಕ್ಷ ಎಕರೆಯಲ್ಲಿ ಬೆಳೆಗಳನ್ನು ಬೆಳೆದಿದ್ದಾರೆ. ಅಲ್ಲಿಗೆ ನೀರು ಹರಿಸಿದರೆ ಈ ಎಲ್ಲ ಬೆಳೆಗಳು ಒಣಗಿ ಕೋಟ್ಯಂತರ ರು. ನಷ್ಟವಾಗುತ್ತದೆ. ಈಗ ಉಪಯೋಗಕ್ಕೆ ಇರುವ 37 ಟಿಎಂಸಿ ನೀರಿನಲ್ಲಿ 115 ದಿನಗಳ ಕಾಲ ನೀರು ಹರಿಸಬಹುದಷ್ಟೆ. ಆದ್ದರಿಂದ ಯಾವುದೇ ಕಾರಣಕ್ಕೂ ಒತ್ತಾಯಕ್ಕೆ ಮಣಿದು ರಾಜ್ಯ ಸರ್ಕಾರ ಭದ್ರಾ ಜಲಾಶಯದಿಂದ ತುಂಗಭದ್ರಾ ಜಲಾಶಯಕ್ಕೆ ನೀರು ಹರಿಸಬಾರದು ಎಂದು ಎಚ್‌.ಆರ್‌.ಬಸವರಾಜಪ್ಪ ಒತ್ತಾಯಿಸಿದರು.

PREV
Read more Articles on
click me!

Recommended Stories

ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ: ಯಾವ್ಯಾವ ಮಾರ್ಗಕ್ಕೆ?
ದಿಲ್ಲಿ, ಮುಂಬಯಿ ರೀತಿ ರಾಜಧಾನಿಗೆ ಎರಡು ಪೊಲೀಸ್‌ ಕಮೀಷನರೇಟ್‌