ಬಿಲ್ವಪತ್ರೆ ಅಂದ್ರೆ ಶಿವ ಭಕ್ತರಿಗೆ ಎಲ್ಲಿಲ್ಲದ ಪ್ರೀತಿ. ಸಾಕ್ಷಾತ್ ಶಿವನಿಗೂ. ಬಿಲ್ವ ಪತ್ರೆಯಲ್ಲೇ ಶಿವನನ್ನ ಪೂಜಿಸ್ಬೇಕು ಅನ್ನೋದು ಅಸಂಖ್ಯಾತ ಭಕ್ತರ ಕನಸು. ಕನಸನ್ನ ಸಕಾರಗೊಳಿಸಲು ಸಸ್ಯ ರಾಶಿಯಲ್ಲೇ ಅಪರೂಪ ಹಾಗೂ ಆಧ್ಯಾತ್ಮಿಕವಾಗಿ ಪರಮ ಶ್ರೇಷ್ಠವಾಗಿರೋ ಬಿಲ್ವ ಪತ್ರೆಗಾಗಿ ಕಾಡುಮೇಡು ಅಲೆಯೋ ಭಕ್ತರೂ ಉಂಟು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಫೆ.09): ಬಿಲ್ವಪತ್ರೆ ಅಂದ್ರೆ ಶಿವ ಭಕ್ತರಿಗೆ ಎಲ್ಲಿಲ್ಲದ ಪ್ರೀತಿ. ಸಾಕ್ಷಾತ್ ಶಿವನಿಗೂ. ಬಿಲ್ವ ಪತ್ರೆಯಲ್ಲೇ ಶಿವನನ್ನ ಪೂಜಿಸ್ಬೇಕು ಅನ್ನೋದು ಅಸಂಖ್ಯಾತ ಭಕ್ತರ ಕನಸು. ಕನಸನ್ನ ಸಕಾರಗೊಳಿಸಲು ಸಸ್ಯ ರಾಶಿಯಲ್ಲೇ ಅಪರೂಪ ಹಾಗೂ ಆಧ್ಯಾತ್ಮಿಕವಾಗಿ ಪರಮ ಶ್ರೇಷ್ಠವಾಗಿರೋ ಬಿಲ್ವ ಪತ್ರೆಗಾಗಿ ಕಾಡುಮೇಡು ಅಲೆಯೋ ಭಕ್ತರೂ ಉಂಟು. ಆದ್ರೆ, ಈ ದೇವಾಲಯದ ಆವರಣದಲ್ಲಿ ನೂರಾರು ಬಿಲ್ವಪತ್ರೆ ಮರಗಳಿವೆ. ಇಲ್ಲಿರೋ 800ಕ್ಕೂ ಅಧಿಕ ಬಿಲ್ವಪತ್ರೆ ಮರಗಳನ್ನ ಯಾರೊಬ್ಬರು ನೆಟ್ಟಿಲ್ಲ, ಬೆಳೆಸಿಲ್ಲ. ಈ ಬಿಲ್ವಪತ್ರೆಯ ಪಾರ್ಕ್ ಶಿವನ ತವರೆಂಬುದು ಭಕ್ತರ ನಂಬಿಕೆ.
undefined
ಶಿವನಿಗೆ ಪ್ರಿಯವಾದ ಬಿಲ್ವಪತ್ರೆ: ಪಾರ್ಕ್ಗಳೆಂದ್ರೆ ಬಗೆ-ಬಗೆಯ ಗಿಡಮರಗಳು, ಬಣ್ಣ-ಬಣ್ಣದ ಹೂವುಗಳಿರುತ್ವೆ. ಆದ್ರೆ, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟದಲ್ಲೊಂದು ವಿಭಿನ್ನವಾದ ಪಾರ್ಕ್ ಇದೆ. ಈ ಪಾರ್ಕ್ನಲ್ಲಿ ಯಾವುದೇ ಹೂ-ಹಣ್ಣಿನ ಗಿಡಗಳ ಜೊತೆ ಇನ್ಯಾವುದೇ ಮರಗಿಡಗಳಿಲ್ಲ. ಇಲ್ಲಿರೋದು ಕೇವಲ ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯ ಮರವಷ್ಟೆ. ಇಲ್ಲಿ ನೂರೋ-ಇನ್ನೂರು ಮರಗಳಿದೆ ಅಂದ್ಕೊಬೇಡಿ. ಬರೋಬ್ಬರಿ 800 ರಿಂದ 1000 ಮರಗಳಿವೆ. ಒದೊಂದು ಮರಗಳಿಗೂ ಸರಿಸುಮಾರು ಎಂಟ್ನೂರು ವರ್ಷಗಳ ಇತಿಹಾಸವೇ ಇದೆ. ಊರೂರು, ಕಾಡುಮೇಡು ಅಲೆದ್ರು ಒಂದೇ ಒಂದು ಬಿಲ್ವಪತ್ರೆ ಮರ ಸಿಗೋದು ಕಷ್ಟ.
ಪ್ರಧಾನಿ ಮೋದಿ ಅವರಿಂದ ನಾನು ಮುಖ್ಯಮಂತ್ರಿ ಆಗಿದ್ದೇನೆ: ಬಿಎಸ್‌ವೈ ಹೆಸರು ಮರೆತ್ರಾ ಸಿಎಂ ಬೊಮ್ಮಾಯಿ
ಆದ್ರೆ, ಒಂದೇ ಜಾಗದಲ್ಲಿ ಸಾವಿರಾರು ಮರಗಳನ್ನ ಕಂಡ್ರೆ ಎಂತವರಿಗೂ ಆಶ್ಚರ್ಯವಾಗತ್ತೆ. ಹೌದು, ರಾಜ್ಯದ ಜನರಲ್ಲಿ ಅಂತಹಾ ಒಂದು ಅದ್ಭುತ ಕುತೂಹಲ ಹುಟ್ಟಾಕಿದೆ ಕಾಫಿನಾಡಿನ ಬಯಲುಸೀಮೆ ಪ್ರದೇಶ. ಅಲ್ಲದೆ ಶಿವರಾತ್ರಿ ಬಂತೆಂದ್ರೆ ಸಾಕು ನವವಧುವಿನಂತೆ ಎಲೆಯುದುರಿ ಹಚ್ಚಹಸಿರಿನಿಂದ ಕಂಗೊಳಿಸೋ ಪತ್ರೆಯ ದಳಗಳ ಜೊತೆಗೆ ವನದ ಪಕ್ಕದಲ್ಲೇ ಭಕ್ತರ ಇಷ್ಟಾರ್ಥ ಸಿದ್ಧಿಸೋ ಗುರು ಕಲ್ಮುರುಡೇಶ್ವರ ಸ್ವಾಮಿ ದೇವಸ್ಥಾನವೂ ಇದೆ. ಚಿಕ್ಕಮಗಳೂರಿನಿಂದ ಕಡೂರಿಗೆ ಸಾಗೋ ಮಾರ್ಗದಲ್ಲಿ ಸಿಗೋ ಕಲ್ಮರಡಿ ಮಠದಲ್ಲಿನ ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರೋ ಸಹಸ್ರಾರು ಬಿಲ್ವಪತ್ರೆಯ ಮರಗಳು ಒಂದೆಡೆ ಕಾಣಸಿಕ್ಕಿರೋದು ಅಚ್ಚರಿ ಮೂಡಿಸಿದೆ.
ಬಿಲ್ವಪತ್ರೆಯ ವನ ಹುಟ್ಟಿರೋದಕ್ಕೆ ಒಬ್ಬೊಬ್ಬರು ಒಂದೊಂದು ಕಥೆ ಹೇಳ್ತಾರೆ. ಸುಮಾರು 800 ವರ್ಷಗಳ ಹಿಂದೆ ಸನ್ಯಾಸಿಯೊಬ್ಬರು ಇಲ್ಲಿನ ಮಠದ ಬಳಿ ತಪಸ್ಸಿಗೆ ಕುಳಿತ್ತಿದ್ರಂತೆ. ಆಗ ಪ್ರಶಾಂತತೆಗಾಗಿ ತನ್ನ ಕೊರಳಲ್ಲಿದ್ದ ರುದ್ರಾಕ್ಷಿ ಸರವನ್ನ ಋಷಿ ಮುನಿಗಳು ಚಿಮ್ಮಿದರಂತೆ, ಇದರಿಂದ ಬಿದ್ದ ರುದ್ರಾಕ್ಷಿಗಳಿಂದಲೇ ಸಾವಿರಾರು ಬಿಲ್ವಪತ್ರೆಯ ಮರಗಳು ಬೆಳೆದು ನಿಂತು, ಬಿಲ್ವವನ ನಿರ್ಮಾಣವಾಯಿತೆಂಬುದು ಸ್ಥಳಿಯ ನಂಬಿಕೆ. ಇನ್ನೂ ಹಲವರು ವೀರಶೈವ ಧರ್ಮದ ಗುರುಗಳಾದ ಮರುಳಸಿದ್ದರು ಇಲ್ಲಿ ಐಕ್ಯರಾಗಿರುವುದರಿಂದ ಕಲ್ಮರಡಿ ಮಠದ ಸುತ್ತಲೂ ಬಿಲ್ವಮರಗಳು ಬೆಳೆದು ನಿಂತಿವೆ ಎಂದು ನಂಬಿಕೊಂಡಿದ್ದಾರೆ. ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರೋ ಇಲ್ಲಿನ ಬಿಲ್ವಮರಗಳನ್ನ ಯಾರೂ ಎಣಿಸಬಾರದಂತೆ. ಹಿರಿಯರ ಪ್ರಕಾರದ ಇಲ್ಲಿನ ಮರಗಳನ್ನ ಯಾರೂ ನೆಟ್ಟು ಬೆಳೆಸಿದ್ದಲ್ಲವಂತೆ. ಜೊತೆಗೆ ಇಲ್ಲಿರೊ ಮರಗಳಿಗೆ ಯಾರೂ ಗೊಬ್ಬರ, ನೀರನ್ನ ಹಾಕಿ ಪೋಷಣೆ ಮಾಡುತ್ತಿಲ್ಲ. ಆದರೂ ಕೂಡ ಇಲ್ಲಿ ಬಿಲ್ವ ಮರಗಳು ಬೃಹದಾಕಾರವಾಗಿ ಬೆಳೆದು ನಿಂತಿವೆ.
ಬಿಲ್ವಪತ್ರೆ ಧಾರ್ಮಿಕತೆಗಷ್ಟೆ ಅಲ್ಲದೇ ಆರೋಗ್ಯದ ದೃಷ್ಟಿಯಿಂದಲೂ ಮಹತ್ವದ ಪಾತ್ರ: ಇಲ್ಲಿನ ಬಿಲ್ವಪತ್ರೆಯ ಕಾಯಿಯಿಂದ ಉಪ್ಪಿನ ಕಾಯಿ ತಯಾರಿಸಿ ಸೇವಿಸಿದ್ರೆ, ಅದೇ ಕಾಯಿಯನ್ನ ಜಜ್ಜಿ ಅದರಿಂದ ಎಣ್ಣೆಯನ್ನ ತಲೆಗೆ ಹಚ್ಚಿದರೆ ತಲೆಹೊಟ್ಟು ನಿವಾರಣೆಯಾಗುತ್ತಂತೆ. ಇನ್ನು ನಿತ್ಯವೂ ಬಿಲ್ವಪತ್ರೆಯ ಎಲೆಯನ್ನ ತಿನ್ನುತ್ತಾ ಬಂದರೆ ಸಕ್ಕರೆ ಖಾಯಿಲೆ ಸೇರಿದಂತೆ ಹಲವು ಕಾಯಿಲೆಗಳು ಮಾಯವಾಗ್ತಾವೆ ಅಂತಾರೆ ಭಕ್ತರು. ಕಲ್ಮರಡಿ ಮಠದಲ್ಲಿ ದೈವಿ ಶಕ್ತಿಯಿಂದ ಬಿಲ್ವಮರಗಳು ಹುಟ್ಟಿಕೊಂಡಿವೆ ಎಂಬುದು ಭಕ್ತರ ನಂಬಿಕೆ. ಆದ್ರೆ, ಮಣ್ಣಿನಲ್ಲಿ ಹೆಚ್ಚು ಗಂಧಕದ ಅಂಶವಿರುವಲ್ಲಿ ಈ ಅಪರೂಪದ ಮರಗಳು ಹುಟ್ಟಿ ಬೆಳೆಯುತ್ತವೆ ಅನ್ನೋದು ವೈಜ್ಞಾನಿಕ ಕಾರಣ. ಆದ್ರೆ, ಈ ಮರಗಳನ್ನ ಜನಸಾಮಾನ್ಯರು ನೆಟ್ಟಿ ಬೆಳೆಸೋದು ಅಸಾಧ್ಯ. ಈ ಮರದಡಿಯಲ್ಲಿ ವಿಹರಿಸಿದರೆ ಆರೋಗ್ಯ ವೃದ್ಧಿಯಾಗುತ್ತಂತೆ. ಅದಕ್ಕಾಗಿಯೇ ಸುತ್ತಮುತ್ತಲಿನ ಜನ, ಭಕ್ತರು ತಮ್ಮ ವಿಶ್ರಾಂತಿ ಸಮಯದಲ್ಲೆಲ್ಲಾ ಇಲ್ಲಿಗೆ ಬಂದು ವಿಹರಿಸ್ತಾರೆ. ಕಲ್ಮುರುಡೇಶ್ವರ ಸ್ವಾಮಿ ಭಕ್ತರ ಇಷ್ಟಾರ್ಥಗಳನ್ನೆಲ್ಲಾ ಈಡೇರಿಸ್ತಾನಂತೆ. ಅದಕ್ಕಾಗಿಯೇ ದೂರದೂರಿಂದಲೂ ಭಕ್ತರ ದಂಡೇ ಹರಿದುಬರುತ್ತೆ. ಶಿವಪೂಜೆಗೆ ಬಿಲ್ವಪತ್ರೆ ಶ್ರೇಷ್ಠವಾಗಿರೋದ್ರಿಂದ ಶಿವರಾತ್ರಿಯಂದು ಭಕ್ತರು ಬಿಲ್ವಪತ್ರೆಯ ಮರವೇರಿ ಪತ್ರೆಯನ್ನ ಕೊಯ್ದು ದೇವರಿಗೆ ಸಮರ್ಪಿಸಿ ಪಾಪ ಕಳೆದುಕೊಳ್ತಾರೆ.
ಶಿವರಾತ್ರಿ ಹಬ್ಬದಂದು ಭಕ್ತದಂಡು: ಶಿವರಾತ್ರಿಯ ಹಬ್ಬದಂದು ಜಾಗರಣೆ ಮಾಡೋ ಭಕ್ತರು ಶಿವನಿಗೆ ಬಿಲ್ವಪತ್ರೆಯನ್ನ ಸಮರ್ಪಿಸಲು ಹಾತೊರೆಯುತ್ತಾರೆ. ಎಲ್ಲೆಲ್ಲಿಂದಲೋ ಬಿಲ್ವಪತ್ರೆಯನ್ನ ತಂದು ಶಿವನಿಗೆ ಅರ್ಪಿಸ್ತಾರೆ. ಹೀಗೆ ಮಾಡುವುದರಿಂದ ಮಾಡಿದ ಪಾಪಗಳೆಲ್ಲವೂ ಪರಿಹಾರವಾಗುತ್ತೆ ಅನ್ನೋದು ಭಕ್ತರ ನಂಬಿಕೆ. ಇನ್ನು ಮೂರು ಎಲೆಗಳನ್ನ ಹೊಂದಿರೋ ಅಪರೂಪದ, ಅತೀ ಶ್ರೇಷ್ಠವೆನಿಸಿರೋ ಬಿಲ್ವಪತ್ರೆ ಕಲ್ಮರಡಿ ಮಠದಲ್ಲಷ್ಟೆ ಕಾಣಸಿಗುತ್ತೆ. ಇದಕ್ಕಾಗಿಯೇ ಶಿವರಾತ್ರಿಯಂದು ಬಿಲ್ವಪತ್ರೆಯನ್ನ ಕೊಯ್ಯಲು ಭಕ್ತರ ದಂಡೇ ಕಲ್ಮರಡಿ ಮಠಕ್ಕೆ ಹರಿದುಬರುತ್ತೆ.
ದ್ವಿತೀಯ ಪಿಯು ಪರೀಕ್ಷೆ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನದಲ್ಲಿ ಬದಲಾವಣೆ: ‘1 ಅಂಕ’ ಹೆಚ್ಚು ಬಂದರೂ ಪರಿಗಣನೆ
ಶಿವರಾತ್ರಿಗೂ ಒಂದೆರಡು ದಿನಗಳ ಮುನ್ನವೇ ಇಲ್ಲಿನ ವನದಲ್ಲಿ ಬಿಲ್ವಪತ್ರೆಯನ್ನ ಕೊಯ್ಯುವವರ ಸಂಖ್ಯೆ ಹೆಚ್ಚಿರುತ್ತೆ. ಹೀಗೆ ಕೊಯ್ದ ಬಿಲ್ವಪತ್ರೆಗಳನ್ನ ಮನೆಗಳಿಗೆ ಕೊಂಡೊಯ್ದು ಶೇಖರಣೆ ಮಾಡಿಟ್ಟು. ಶಿವರಾತ್ರಿಯ ದಿನದಂದು ಶಿವನಿಗೆ ಸಮರ್ಪಿಸುತ್ತಾರೆ. ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿರೋ ಕಲ್ಮರಡಿ ಮಠಕ್ಕೆ ಕೇವಲ ಚಿಕ್ಕಮಗಳೂರಿನ ಭಕ್ತರಷ್ಟೆ ಇಲ್ಲ. ರಾಜ್ಯದ ಮೂಲೆ-ಮೂಲೆಗಳಿಂದಲೂ ಭಕ್ತರ ಮಾಹಾಪುರವೇ ಹರಿದು ಬರುತ್ತೆ. ಸಖರಾಯಪಟ್ಟಣ ಸುತ್ತಮುತ್ತಲಿನ ಗ್ರಾಮಸ್ಥರು ಯಾವುದೇ ಕೆಲಸ ಮಾಡಬೇಕಾದರೂ ಕಲ್ಮುರುಡೇಶ್ವರ ಪ್ರಸಾದ ಪಡೆದು, ಅನುಮತಿ ಕೇಳಿಯೇ ಮುಂದಿನ ಹೆಜ್ಜೆ ಇಡೋದು. ಇನ್ನು ಕ್ಷೇತ್ರದಲ್ಲಿ ಮರುಳಸಿದ್ದೇಶ್ವರನೂ ಐಕ್ಯವಾಗಿರೋದ್ರಿಂದ ಕ್ಷೇತ್ರದಲ್ಲಿ ತ್ರಿಕಾಲ ಪೂಜೆ, ಕಾರ್ತಿಕಾ ಮಾಸದಲ್ಲಿ ಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ನಡೆಯುತ್ತೆ. ಇಲ್ಲಿನ ಕಲ್ಮುರುಡೇಶ್ವರನಿಗೆ ಭಕ್ತರು ಬಿಲ್ವಪತ್ರೆಯನ್ನ ಸಮರ್ಪಿಸಿದ್ರೆ, ನಿತ್ಯವೂ ಇವನಿಗೆ ಬಿಲ್ವಪತ್ರೆಯಿಂದಲೇ ಅಭಿಷೇಕ.
ಅಲ್ಲದೇ ಬಿಲ್ವಪತ್ರೆಯನ್ನೇ ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡ್ತಿರೋದು ಇಲ್ಲಿನ ಮತ್ತೊಂದು ವಿಶೇಷ. ಬಿಲ್ವವನದಲ್ಲಿರೋ ಪತ್ರೆಯನ್ನ ಕೊಯ್ದು ಇತರರಿಗೆ ದಾನ ಮಾಡಿದ್ರೆ ಒಳಿತಾಗುತ್ತೆಂಬುದು ಭಕ್ತರ ನಂಬಿಕೆ. ಅದಕ್ಕಾಗಿಯೇ ಚಿಕ್ಕಮಗಳೂರು, ಕಡೂರು ಸೇರಿದಂತೆ ಸುತ್ತಮುತ್ತಲಿನ ಜನ ವಾರಕ್ಕೊಮ್ಮೆ ಬಂದು ಪತ್ರೆ ಕೊಯ್ದು ದೇವಾಲಯ ಹಾಗೂ ನೆರೆಹೊರೆಯವರಿಗೆ ದಾನ ಮಾಡ್ತಾರೆ. ಶಿವರಾತ್ರಿಯ ದಿನದಂದು ಇಲ್ಲಿಗೆ ಬರೋ ಭಕ್ತರು ಬಿಲ್ವವನದಲ್ಲಿಯೇ ರಾತ್ರಿಯೆಲ್ಲಾ ಜಾಗರಣೆ ಮಾಡ್ತಾರೆ. ನೈಸರ್ಗಿಕವಾಗಿ ಬೆಳೆದಿರೋ ಬಿಲ್ವಪತ್ರೆ ವನ ವರ್ಷ ಕಳೆದಂತೆ ಸಮೃದ್ಧಿಯಾಗ್ತಿದೆ. ಬೇರೆಡೆ ಪಾಲನೆ-ಪೋಷಣೆ ಮಾಡಿದ್ರು ಬೆಳೆಯದ ಬಿಲ್ವಪತ್ರೆ ಮರಗಳು ಈ ನೆಲದಲ್ಲಿ ಸಾವಿರಾರು ಬೆಳೆದು ನಿಂತಿರೋದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ.