ಉಡುಪಿಯಲ್ಲಿ ರಾಜ್ಯಮಟ್ಟದ ಯಕ್ಷಗಾನ‌ ಸಮ್ಮೇಳನ: ರೋಹಿತ್ ಚಕ್ರತೀರ್ಥರಿಗೆ ಆಹ್ವಾನ ನೀಡಿರುವುದಕ್ಕೆ ವಿರೋಧ

By Suvarna News  |  First Published Feb 9, 2023, 11:01 PM IST

ಜಿಲ್ಲೆಯಲ್ಲಿ ಆಯೋಜನೆ ಗೊಂಡಿರುವ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನದ ದಿಕ್ಕೂಚಿ ಭಾಷಣಕಾರರಾಗಿ ಲೇಖಕ ರೋಹಿತ್ ಚಕ್ರತೀರ್ಥ ಅವರನ್ನು ಆಹ್ವಾನಿಸಿರುವುದಕ್ಕೆ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಹಿರಿಯ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಉಡುಪಿ (ಫೆ.09): ಜಿಲ್ಲೆಯಲ್ಲಿ ಆಯೋಜನೆ ಗೊಂಡಿರುವ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನದ ದಿಕ್ಕೂಚಿ ಭಾಷಣಕಾರರಾಗಿ ಲೇಖಕ ರೋಹಿತ್ ಚಕ್ರತೀರ್ಥ ಅವರನ್ನು ಆಹ್ವಾನಿಸಿರುವುದಕ್ಕೆ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಹಿರಿಯ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕರಾವಳಿಯ ಕಾರ್ಯಕ್ರಮಕ್ಕೆ ಬೆಂಗಳೂರಿನ ವ್ಯಕ್ತಿಯನ್ನು ಕರೆಸುವ ಅಗತ್ಯ ನಮಗೆ ಕಾಣುವುದಿಲ್ಲ. ಯಕ್ಷಗಾನದಲ್ಲಿ ಸಾಧನೆ ಮಾಡಿರುವವರು ಬಹಳಷ್ಟು ಮಂದಿ ಕರಾವಳಿಯಲ್ಲಿ ಇದ್ದಾರೆ. 

ಅಂತಹವರನ್ನು ಕರೆಸಿ ಈ ಕಾರ್ಯಕ್ರಮದಲ್ಲಿ ಬಾಗವಹಿಸಲು ಅವಕಾಶ ನೀಡುವುದು ಉತ್ತಮ. ಆದರೆ ಅಂತಹವರನ್ನು ಕೈ ಬಿಟ್ಟು ಯಕ್ಷಗಾನದ ಗಂಧ ಗಾಳಿ ಇಲ್ಲದ ವ್ಯಕ್ತಿಯಿಂದ ರಾಜ್ಯಮಟ್ಟ ಯಕ್ಷಗಾನ ಸಮ್ಮೇಳನದ ದಿಕ್ಕೂಚಿಸಿ ಭಾಷಣ ಮಾಡಿಸುವುದು ಯಕ್ಷಗಾನಕ್ಕೆ ಮಾಡುವ ದೊಡ್ಡ ಅವಮಾನ ಎಂದರು. ಹಾಗೂ ಈ ಬಗ್ಗೆ ಯಕ್ಷಗಾನ ಸಂಘಟಕರು ಆಲೋಚಿಸಿ ಉಡುಪಿ,ಮಂಗಳೂರಿನಲ್ಲಿರುವ ಯಕ್ಷಗಾನ ಅನುಭವ ಇರುವ ಧೀಮಂತ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿಕೊಂಡರು. ಈ ವೇಳೆ ಮಾತನಾಡಿದ ಕಟಪಾಡಿ ಯುವವಾಹಿನಿ ಅಧ್ಯಕ್ಷ ಸುನಿಲ್ ಬಂಗೇರಾ ಅವರು, ಯಕ್ಷಗಾನದಂತಹ ಮಹಾನ್ ಕಲೆಯೊಂದರ ರಾಜ್ಯ ಸಮ್ಮೇಳನ ನಡೆಯುವುದು ಅತ್ಯಂತ ಅವಶ್ಯಕವಾಗಿತ್ತು ಅದು ನಮಗೆ ಖುಷಿಯ ವಿಚಾರವೇ. 

Tap to resize

Latest Videos

undefined

ಯಕ್ಷಗಾನ ಸಮ್ಮೇಳನಕ್ಕೆ ಆಗಮಿಸುವ ಸರ್ವರಿಗೂ ಮೂಲಸೌಕರ್ಯ ಕೊರತೆಯಾಗದಂತೆ ಕ್ರಮ ವಹಿಸಿ: ಸಚಿವ ಸುನೀಲ್ ಕುಮಾರ್

ಈ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ನಡೆಯಬೇಕು ಎಂದು ನಾವೂ ಆಶಿಸುತ್ತೇವೆ. ಆದರೆ ಕಳೆದ ವರ್ಷವಷ್ಟೇ ಪಠ್ಯ ಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಪಾಠವನ್ನು ಕೈಬಿಟ್ಟು ಹಿಂದುಳಿದ ವರ್ಗದವರ ಭಾವನೆಗೆ ಧಕ್ಕೆ ಮಾಡಿದ, ಯಕ್ಷಗಾನದ ಯಾವುದೇ ಅನುಭವ ಇಲ್ಲದ ರೋಹಿತ್ ಚಕ್ರತೀರ್ಥರಿಂದ ದಿಕ್ಕೂಚಿಸಿ ಭಾಷಣ ಮಾಡಿಸುತ್ತಿರುವುದು ತಪ್ಪು. ಆದ್ದರಿಂದ ರೋಹಿತ್ ಚಕ್ರತೀರ್ಥರನ್ನು ಕೈ ಬಿಟ್ಟು ಉಡುಪಿ ದ.ಕ. ಜಿಲ್ಲೆಗಳಲ್ಲಿ ಯಕ್ಷಗಾನದ ಅನುಭವ ಇರುವ ಹಿರಿಯರನ್ನು ಕರೆಸಿ ದಿನ್ಸೂಚಿ ಭಾಷಣ ಮಾಡಿಸಬೇಕು ಎಂದು ಆಗ್ರಹಿಸಿದರು. 

ಹಾಗೂ ರೋಹಿತ್ ಚಕ್ರತೀರ್ಥರನ್ನು ಸಮ್ಮೇಳನಕ್ಕೆ ಆಹ್ವಾನಿಸಿರುವುದನ್ನು ಸಮರ್ಥಿಸಿಕೊಂಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರ ಹೇಳಿಕೆ ದುರಂತವೇ ಆಗಿದೆ. ಅಲ್ಲದೆ ಚಕ್ರತೀರ್ಥರಂತಹ ಇನ್ನೂ 10 ಜನರನ್ನು ಕರೆಸುತ್ತೇವೆ ಎಂಬ ಅವರ ಹೇಳಿಕೆ ಎಷ್ಟರ ಮಟ್ಟಿಗೆ ಸರಿ ತಪ್ಪು ಎನ್ನುವುದು ಅವರಿಗೇ ಗೊತ್ತಿದೆ.  ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗದವರು ಅವರಿಗೆ ಸರಿಯಾದ ಉತ್ತರ ನೀಡುತ್ತಾರೆ ಎಂಬುದು ಗೊತ್ತಿದೆ ಎಂದು ಹೇಳಿದರು. 

ಪ್ರಧಾನಿ ಮೋದಿ ಅವರಿಂದ ನಾನು ಮುಖ್ಯಮಂತ್ರಿ ಆಗಿದ್ದೇನೆ: ಬಿಎಸ್‌ವೈ ಹೆಸರು ಮರೆತ್ರಾ ಸಿಎಂ ಬೊಮ್ಮಾಯಿ

ಇದೇ ವೇಳೆ ಮಾತನಾಡಿದ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನಾ ಅವರು, ಬ್ರಹ್ಮ ಶ್ರೀ ನಾರಾಯಣ ಗುರುಗಳು ಯಾವುದೇ ಜಾತಿ ಧರ್ಮ ನೋಡದೆ ಹಿಂದುಳಿತ ವರ್ಗದ ಕಲ್ಯಾಣಕ್ಕಾಗಿ, ನ್ಯಾಯಕ್ಕಾಗಿ ಹೋರಾಡಿದವರು ಅಂತಹ ಮಹಾನ್ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಕೈಬಿಟ್ಟು ಬಿಲ್ಲವ ಸಮುದಾಯದ ಜೊತೆಗೆ ಹಿಂದುಳಿದ ವರ್ಗದವರ ಭಾವನೆಗೆ ಧಕ್ಕೆ ತಂದಿರುವವರನ್ನು ಇಲ್ಲಿನ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿರುವುದಕ್ಕೆ ನಮ್ಮ ವಿರೋಧವಿದೆ. ರಾಷ್ಟ್ರೀಯವಾದದ ಬಗ್ಗೆ ಚಿಂತಕರನ್ನು ಕರೆಯುವುದಕ್ಕೆ ನಮ್ಮ ವಿರೋಧವಿಲ್ಲ ಆದರೆ ನಾರಾಯಣ ಗುರುಗಳಿಗೆ ಅವಮಾನ ಮಾಡಿದ ವ್ಯಕ್ತಿಯನ್ನು ಕರೆಯುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದರು. ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಕಾಂಚನ್ ಅವರು ಉಪಸ್ಥಿತರಿದ್ದರು.

click me!