ಮಂಗಳೂರಿನ ಶೇ.65ರಷ್ಟುಭೂಮಿ ಮುಸ್ಲಿಂ ಒಡೆತನದಲ್ಲಿದೆ: ಲ್ಯಾಂಡ್‌ ಜಿಹಾದ್ ಬಗ್ಗೆ ಹಿಂದುಗಳು ಚಿಂತಿಸಬೇಕಿದೆ: ಸೂಲಿಬೆಲೆ

By Kannadaprabha NewsFirst Published Jan 29, 2023, 9:47 AM IST
Highlights

ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಿಂದ ನಮ್ಮ ಸಂಸ್ಕೃತಿಗೆ ಉಂಟಾಗುತ್ತಿರುವ ಹಾನಿಯನ್ನು ತಡೆಗಟ್ಟಬೇಕು, ಹಿಂದುತ್ವದ ಬಗ್ಗೆ ಅರಿವು ಮೂಡಿಸಿಕೊಂಡು ನಮ್ಮ ಭವ್ಯ ಪರಂಪರೆ ತುಂಡರಿಸಲು ಯತ್ನಿಸುವವರಿಗೆ ತಕ್ಕ ಉತ್ತರ ನೀಡಬೇಕು ಎಂದು ‘ಯುವ ಬ್ರಿಗೇಡ್‌’ನ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.

ಬೆಂಗಳೂರು (ಜ.29) : ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಿಂದ ನಮ್ಮ ಸಂಸ್ಕೃತಿಗೆ ಉಂಟಾಗುತ್ತಿರುವ ಹಾನಿಯನ್ನು ತಡೆಗಟ್ಟಬೇಕು, ಹಿಂದುತ್ವದ ಬಗ್ಗೆ ಅರಿವು ಮೂಡಿಸಿಕೊಂಡು ನಮ್ಮ ಭವ್ಯ ಪರಂಪರೆ ತುಂಡರಿಸಲು ಯತ್ನಿಸುವವರಿಗೆ ತಕ್ಕ ಉತ್ತರ ನೀಡಬೇಕು ಎಂದು ‘ಯುವ ಬ್ರಿಗೇಡ್‌’ನ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು. ಬಸವೇಶ್ವರ ನಗರದ ಗಂಗಮ್ಮ ತಿಮ್ಮಯ್ಯ ಕನ್ವೆನ್‌ಷನ್‌ ಸೆಂಟರ್‌ನಲ್ಲಿ ಹಿಂದೂ ಜನಜಾಗೃತಿ ಸಮಿತಿ ಶನಿವಾರ ಆಯೋಜಿಸಿದ್ದ ‘ರಾಜ್ಯ ಮಟ್ಟದ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಅವರು ಮಾತನಾಡಿದರು.

ಒಂದೆಡೆ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ. ಮತ್ತೊಂದೆಡೆ ಮತಾಂತರ ತಡೆಯಲು ಮುಂದಾದರೆ ಕ್ರಿಶ್ಚಿಯನ್ನರು ಅಹಿಷ್ಣುತೆ ಹೆಸರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ. ಇದು ಸಾಲದು ಎಂಬಂತೆ ಬುದ್ಧಿಜೀವಿಗಳೂ ಯಾರದೋ ಹೆಗಲ ಮೇಲೆ ಬಂದೂಕಿಟ್ಟು ಮತ್ಯಾರಿಗೋ ಗುಂಡು ಹಾರಿಸುತ್ತಿದ್ದಾರೆ. ಆದ್ದರಿಂದ ನಾವು ದೈಹಿಕ ಮತ್ತು ಮಾನಸಿಕವಾಗಿ ಸಶಕ್ತರಾಗಬೇಕು ಎಂದರು.

Love jihad ಬಗ್ಗೆ ಪ್ರತಿಯೊಬ್ಬ ಹಿಂದು ಎಚ್ಚೆತ್ತುಕೊಳ್ಳಬೇಕು: ಸೂಲಿಬೆಲೆ

ಮುಸ್ಲಿಂ ಜನಸಂಖ್ಯೆ ಹೆಚ್ಚಳ: ಮುಸ್ಲಿಮರು ಲವ್‌ ಜಿಹಾದ್‌, ಲ್ಯಾಂಡ್‌ ಜಿಹಾದ್‌ ಮಾಡುತ್ತಿದ್ದಾರೆ. ನಮ್ಮ ಯುವಕರಿಗೆ ಡ್ರಗ್‌್ಸ, ಅಫೀಮು ನೀಡಿ ಸೆಳೆಯುತ್ತಿದ್ದಾರೆ. ನಿಧಾನವಾಗಿ ಮತದಾರರ ಸಂಖ್ಯೆ ಹೆಚ್ಚಳ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಮತ ಹೊಂದಿದ್ದರೂ ಉತ್ತರ ಕನ್ನಡದಲ್ಲೂ ಮತದಾರರಾಗಿದ್ದಾರೆ. ಇಲ್ಲಿ ಮೊದಲ ಹಂತದಲ್ಲಿ ಮತದಾನ ಮಾಡಿ ಎರಡನೇ ಹಂತದಲ್ಲಿ ಉತ್ತರ ಕನ್ನಡಕ್ಕೆ ತೆರಳಿ ಮತದಾನ ಮಾಡುತ್ತಿದ್ದು, ರಾಜಕೀಯ ಸಾಮರ್ಥ್ಯ ತೋರಿಸುತ್ತಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ವಿವರಿಸಿದರು.

ಬೆಂಗಳೂರಿನಲ್ಲಿ ಕಳೆದ 10 ವರ್ಷದಲ್ಲಿ ಮುಸ್ಲಿಮರ ಜನಸಂಖ್ಯೆ ಮೂರು ಪಟ್ಟು ಹೆಚ್ಚಳವಾಗಿದೆ. 2011ರಲ್ಲಿ 18 ಲಕ್ಷ ಇದ್ದದ್ದು, 2021ರಲ್ಲಿ 46 ಲಕ್ಷ ಮುಟ್ಟಿದೆ. ಆದರೆ ನಾವು ಒಂದು ಮಕ್ಕಳಿಗೆ ಮಾತ್ರ ಸೀಮಿತವಾಗುತ್ತಾ, ಯಾವುದಾದರೂ ಗಲಾಟೆಯಾದರೆ ಸಾಕು ನಮ್ಮ ಮಕ್ಕಳನ್ನೂ ಹೊರಗೆ ಕಳುಹಿಸುತ್ತಿಲ್ಲ. ಆದ್ದರಿಂದ ನಮ್ಮ ಮಕ್ಕಳನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢರನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.

Shivamogga: ಧರ್ಮ ಇಲ್ಲದ ಅರ್ಥಕ್ಕೆ ಕಿಮ್ಮತ್ತಿಲ್ಲ: ಚಕ್ರವರ್ತಿ ಸೂಲಿಬೆಲೆ

ಲೇಖಕಿ ಡಾ ಎಸ್‌.ಆರ್‌.ಲೀಲಾ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ ಶಿಂಧೆ, ಸನಾತನ ಸಂಸ್ಥೆಯ ಧರ್ಮಪ್ರಚಾರಕ ರಮಾನಂದ ಗೌಡ ಉಪಸ್ಥಿತರಿದ್ದರು.

ಶೇ.65ರಷ್ಟುಭೂಮಿಗೆ ಮುಸ್ಲಿಂ ಒಡೆತನ: ಅಧಿಕಾರಿಯೊಬ್ಬರ ಮಾಹಿತಿಯಂತೆ ಮಂಗಳೂರಿನ ಶೇ.65ರಷ್ಟುಭೂಮಿ ಮುಸ್ಲಿಮರು ಹಾಗೂ ಶೇ.20ರಷ್ಟುಭೂಮಿ ಕ್ರಿಶ್ಚಿಯನ್ನರ ಕೈಯಲ್ಲಿದ್ದರೆ, ಇನ್ನುಳಿದ ಕೆಲ ಭಾಗ ಮಾತ್ರ ಹಿಂದೂಗಳು ಸೇರಿದಂತೆ ಅನ್ಯರ ಒಡೆತನದಲ್ಲಿದೆ. ಮಂಗಳೂರಿನಲ್ಲಿ ಸ್ಥಳೀಯ ಮುಸ್ಲಿಮರು, ಕೇರಳ ಮತ್ತು ಉತ್ತರ ಭಾರತದ ಮುಸ್ಲಿಮರು ಭೂಮಿ ಒಡೆತನ ಸಾಧಿಸುತ್ತಿದ್ದಾರೆ. ಇದು ಲ್ಯಾಂಡ್‌ ಜಿಹಾದ್‌ ಆಗಿದ್ದು, ಈ ಬಗ್ಗೆ ನಾವು ಚಿಂತಿಸಬೇಕಿದೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

click me!