ಶಿವಮೊಗ್ಗ: ಫೆ.4ರಂದು ಸರ್ಕಾರಿ ನೌಕರರ ಸಮ್ಮೇಳನ: ಷಡ​ಕ್ಷರಿ

By Kannadaprabha News  |  First Published Jan 29, 2023, 8:36 AM IST

ಇಲ್ಲಿನ ಎನ್‌ಇಎಸ್‌ ಮೈದಾನದಲ್ಲಿ ಫೆ.4ರಂದು ಬೆಳಿಗ್ಗೆ 10.30ಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ಕಾರಿ ನೌಕರರ ಸಮ್ಮೇಳನ ಆಯೋಜಿಸಲಾಗಿದೆ ಎಂದು ರ್ಕಾರಿ ನೌಕಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಕ್ಷರಿ ಹೇಳಿದರು.


ಶಿವಮೊಗ್ಗ (ಜ.29) : ಇಲ್ಲಿನ ಎನ್‌ಇಎಸ್‌ ಮೈದಾನದಲ್ಲಿ ಫೆ.4ರಂದು ಬೆಳಿಗ್ಗೆ 10.30ಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ಕಾರಿ ನೌಕರರ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸರ್ಕಾರಿ ನೌಕಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಕ್ಷರಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಾಸಕ ಕೆ.ಎಸ್‌.ಈಶ್ವರಪ್ಪ ಉದ್ಘಾಟಿಸಲಿದ್ದಾರೆ. ಫ್ಯಾಮಿಲಿ ಮಾರ್ಚ್‌ನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು.

Tap to resize

Latest Videos

ಬಳಿಕ ಖ್ಯಾತ ವಾಗ್ಮಿ ಡಾ.ಗುರುರಾಜ ಕರ್ಜಗಿ ಅವರು ಪ್ರಜಾಸ್ನೇಹಿ ಆಡಳಿತದ ಬಗ್ಗೆ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಮಧ್ಯಾಹ್ನದ ಬಳಿಕ ಕೆಲಸದ ಒತ್ತಡಕ್ಕೆ ನಗೆ ಹಬ್ಬ ಕಾರ್ಯಕ್ರಮವನ್ನು ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್‌ ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.

ವಿಎಸ್‌ಐಎಲ್‌ ಉಳಿವಿಗೆ ಸಿಎಂ ಬಳಿ ನಿಯೋಗ: ಸಂಸ​ದ ಬಿ.ವೈ.​ರಾ​ಘ​ವೇಂದ್ರ

ಕಾರ್ಯಕ್ರಮದಲ್ಲಿ ತಾಲೂಕಿನ 7 ರಿಂದ 8 ಸಾವಿರ ನೌಕರರು ಭಾಗವಹಿಸಲಿದ್ದಾರೆ. ಅವರುಗಳಿಗೆ ಒಒಡಿ ಸೌಲಭ್ಯವನ್ನು ಜಿಲ್ಲಾಕಾರಿಗಳು ಮಂಜೂರು ಮಾಡಿದ್ದಾರೆ. ಸರ್ಕಾರಿ ನೌಕರರಿಗೆಂದೇ ಫ್ಯಾಮಿಲಿ ಮಾರ್ಚ್‌ನ್ನು ಸರ್ಕಾರಿ ನೌಕರರ ಭವನದ ಪಕ್ಕದಲ್ಲಿಯೇ ಸಿದ್ಧಪಡಿಸಲಾಗಿದೆ. ಸಂಸದ ರಾಘವೇಂದ್ರ ಅವರು ಇದರ ಉದ್ಘಾಟನೆಯನ್ನು ನೆರವೇರಿಸುವರು. ಇದರಲ್ಲಿ ಶೇ.10 ರಿಂದ 60ರವರೆಗೆ ರಿಯಾಯಿತಿ ಸಿಗಲಿದೆ. ಸುಮಾರು 4 ಕೋಟಿ ರು. ವೆಚ್ಚ ಮಾಡಿ ಇದನ್ನು ಸಿದ್ಧಪಡಿಸಲಾಗಿದೆ. ಖಾಸಗಿ ಸಂಸ್ಥೆಯೊಂದು ಇದನ್ನು ನಿರ್ವಹಿಸಲಿದೆ. ಇಲ್ಲಿನ ಪ್ರತಿಕ್ರಿಯೆ ನೋಡಿದ ಬಳಿಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಮಾರ್ಚ್‌ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದರು.

ದಿನಸಿ, ಅಗತ್ಯ ವಸ್ತುಗಳು, ಎಲೆಕ್ಟ್ರಾನಿಕ್‌ ವಸ್ತುಗಳು, ಔಷಧ ಸೇರಿದಂತೆ 1700ಕ್ಕೂ ಹೆಚ್ಚು ವಸ್ತುಗಳು ಶೇ. 10 ರಿಂದ 60 ವರೆಗೆ ರಿಯಾಯಿತಿ ದರದಲ್ಲಿ ಸಿಗಲಿವೆ. ಸರ್ಕಾರಿ ನೌಕರರಿಗೆ ಇದರಿಂದ ಪ್ರಯೋಜನ ಆಗಲಿದೆ. ಸರ್ಕಾರಿ ನೌಕರರಿಗೆ ರಾಜ್ಯದಲ್ಲಿ ಎಲ್ಲಿಯೂ ಇಲ್ಲದಷ್ಟುಸೌಲಭ್ಯ ಶಿವಮೊಗ್ಗದಲ್ಲಿ ಸಿಕ್ಕಿದೆ. ಎಲ್ಲಾ ತಾಲೂಕಿನ ಸರ್ಕಾರಿ ನೌಕರರ ಭವನಗಳಿಗೂ ಅನುದಾನ ನೀಡಲಾಗಿದೆ. ಸರ್ಕಾರಿ ನೌಕರರ ಸೊಸೈಟಿ ಮೂಲಕ 80ಕೋಟಿ ಸಾಲ ನೀಡಲಾಗಿದೆ. ಅತ್ಯಂತ ಕಡಿಮೆ ದರದಲ್ಲಿ ನಿವೇಶನಗಳನ್ನು ಒದಗಿಸಲಾಗಿದೆ. ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿದೆ ಎಂದರು.

‘ಪ್ರತಿ​ಭ​ಟನೆ ಹಿಂದೆ ಯಾವ ಕುಮ್ಮಕ್ಕು ಇಲ್ಲ​’

ರಾಜ್ಯದ ಯಾವ ಸರ್ಕಾರಿ ನೌಕರರಿಗೆ ಅನ್ಯಾಯ ಅಥವಾ ಸಮಸ್ಯೆ ಎದುರಾದರೆ ಅವರ ಪರ ನಿಲ್ಲಬೇಕಾದುದ್ದು ನನ್ನ ಕರ್ತವ್ಯ. ಅದರಂತೆ ಈಚೆಗೆ ಜಿಲ್ಲೆಯಲ್ಲಿ ವಿನಾಕಾರಣ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವುದು ಗಮನಕ್ಕೆ ಬಂದಾಗ ನೌಕರರ ಪರ ನಿಂತಿದ್ದೆ. ಸೊರಬವಾಗಲಿ, ಸಾಗರವಾಗಲಿ ಎಲ್ಲಿಯೂ ನಾನು ಯಾವ ಶಾಸಕ ಹೆಸರನ್ನು ಹೇಳಿಲ್ಲ. ಡಿಸಿ ಕಚೇರಿ ಎದುರು ನೌಕರರು ಪ್ರತಿಭಟನೆ ಮಾಡಿರುವುದರಿಂದ ಹಿಂದೆ ಯಾವುದೇ ಕುಮ್ಮಕ್ಕೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಸಿ.ಎಸ್‌.ಷಡಾಕ್ಷರಿ ಉತ್ತರಿಸಿದರು.

ಕೌನ್ಸಿಲಿಂಗ್‌ ಸಿಸ್ಟಮ್‌ ಆಫ್‌ ಟ್ರಾನ್ಸಪರ್‌ ತರಬೇಕು ಎಂಬ ಬೇಡಿಕೆ ಇದೆ. ಪದೇ ಪದೇ ಅಕಾರಿಗಳನ್ನು ವರ್ಗಾವಣೆ ಮಾಡಿದರೆ ಅಭಿವೃದ್ಧಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಜಿಲ್ಲಾಕಾರಿಗಳನ್ನು ಕೂಡ ಎರಡು ವರ್ಷ ವರ್ಗಾವಣೆ ಮಾಡುವುದಿಲ್ಲ. ಅವರಿಗೂ ಕುಟುಂಬ, ಮಕ್ಕಳು ಇರುತ್ತಾರೆ. ಇದನ್ನು ಹೇಳಿದ್ದೇನೆಯೇ ಹೊರತು, ಯಾವುದೇ ರಾಜಕೀಯ ಇಲ್ಲ. ಇದನ್ನು ಯಾರೂ ವೈಯುಕ್ತಿಕವಾಗಿ ತೆಗೆದುಕೊಳ್ಳಬಾರದು ಎಂದರು.

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ: ಸಂಸತ್ತಿನ ಗಮನ ಸಳೆದ ಸಂಸದ ರಾಘವೇಂದ್ರ

ಕುಮಾರ್‌ ಬಂಗಾರಪ್ಪ ಅವರು ಮಾಜಿ ಸಚಿವರು, ಮಾಜಿ ಸಿಎಂ ಪುತ್ರ ಕೂಡ. ಅವರ ಬಗ್ಗೆ ಅಪಾರ ಗೌರವ ಇದೆ. ಅವರ ಬಗ್ಗೆ ಎಲ್ಲಿಯೂ ನಾನು ಮಾತನಾಡಿಲ್ಲ. ಹಾಗಾಗಿ ಹಕ್ಕುಚ್ಯುತಿ ಮಂಡನೆ ಮಾಡಿದರೆ ಸ್ವಾಗತಿಸುತ್ತೇನೆ. ಇನ್ನು ಅರುಣ್‌ಕುಮಾರ್‌ ಹೈಕೋರ್ಚ್‌ ಆದೇಶದ ಮೇರೆಗೆ ಶಿರಸ್ತೇದಾರ್‌ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಎನ್‌ಪಿಎಸ್‌ಗೆ ನಾನು ವಿರೋಧಿ ಅಲ್ಲ. ಇದೊಂದು ಭಾವನಾತ್ಮಕ ವಿಷಯವಾಗಿದೆ. ರಾಷ್ಟ್ರೀಯ ಸಮಸ್ಯೆ ಅದನ್ನು ಕೂಡ ಮಾಚ್‌ರ್‍ ನಂತರ ಬಗೆಹರಿಸಲು ಪ್ರಯತ್ನಿಸುವುದಾಗಿ ಹಲವು ಬಾರಿ ಹೇಳಿದ್ದೇನೆ. ಮುಂದೆ ಎನ್‌ಪಿಎಸ್‌ ಪರ ಹೋರಾಟ ಮಾಡಲಾಗುವುದು ಎಂದು ಭರವಸೆ ನೀಡಿದರು.

click me!