ಜಿಟಿಜಿಟಿ ಮಳೆಗೆ ಬೆಳೆಗಳು ಹಾನಿ: ರೈತರಿಗೆ ಸಂಕಷ್ಟ

By Kannadaprabha NewsFirst Published Aug 12, 2022, 9:33 AM IST
Highlights

ಕೆಲ ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ರೈತರ ಪ್ರಮುಖ ವಾಣಿಜ್ಯ ಬೆಳೆಗಳಾದ ಹೆಸರು ಮತ್ತು ಉದ್ದು ಕಾಯಿ ಕಟ್ಟುವ ಸಮಯದಲ್ಲಿ ಹಾನಿಯಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ಬೆಳೆ ಸಂಪೂರ್ಣ ನಾಶವಾಗುವುದರಿಂದ ರೈತರು ಆತಂಕದಲ್ಲಿದ್ದಾರೆ.

ಚಿತ್ತಾಪುರ (ಆ.12) : ಕಳೆದ ಕೆಲ ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ರೈತರ ಪ್ರಮುಖ ವಾಣಿಜ್ಯ ಬೆಳೆಗಳಾದ ಹೆಸರು ಮತ್ತು ಉದ್ದು ಕಾಯಿ ಕಟ್ಟುವ ಸಮಯದಲ್ಲಿ ಹಾನಿಯಾಗಿದೆ. ಇದೇ ರೀತಿ ಮಳೆಯು ಸುರಿಯುತ್ತಿದ್ದರೆ ಅವರ ಪ್ರಮುಖ ವಾಣಿಜ್ಯ ಬೆಳೆಯಾದ ತೊಗರಿಯು ಹಾಳಾಗಲಿ ಎನ್ನುವ ಆತಂಕ ವ್ಯಕ್ತವಾಗಿದೆ. ಕೊರೋನಾ ಹಾವಳಿಯಿಂದ ನಲುಗಿದ್ದ ರೈತರಿಗೆ ಈ ಬಾರಿಯ ಮುಂಗಾರು ಮಳೆಯು ಉತ್ತಮವಾಗಿ ಬಂದಿದ್ದರಿಂದ ಮುಂಗಾರು ಹಂಗಾಮಿನ ಹೆಸರು, ಉದ್ದು ಬೆಳೆಯನ್ನು ಹೆಚ್ಚಾಗಿ ಬಿತ್ತನೆ ಮಾಡಿದ್ದರು. ಆದರೆ ರೈತರ ನಿರೀಕ್ಷೆಗೆ ತಕ್ಕಂತೆ ಆರಂಭದಲ್ಲಿ ಉತ್ತಮವಾಗಿ ಮಳೆ ಬಂದಿದೆ. ಆದರೆ ಹೆಸರು, ಉದ್ದು ಹೂವಾಡುವ ಹಾಗೂ ಕಾಯಿ ಕಟ್ಟುವ ಹಂತದಲ್ಲಿರುವಾಗ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಾನಿಯಾಗುವ ಆತಂಕ ಮೂಡಿದೆ. ಹೀಗಾಗಿ ಬಿತ್ತನೆ, ಗೊಬ್ಬರ ಹಾಗೂ ಕೀಟನಾಶಕದ ಖರ್ಚು ಬಂದರೆ ಸಾಕು ಎನ್ನುವಷ್ಟುಚಿಂತೆಗೀಡಾಗಿದೆ.

Shivamogga: ನೆರೆ ಹಾವಳಿಗೊಳಗಾದ ರೈತರ ಹೊಲಗಳಿಗೆ ಜಿಲ್ಲಾಧಿಕಾರಿ ಭೇಟಿ: ಮಳೆಹಾನಿ ಪ್ರದೇಶದಲ್ಲಿ ಪರಿಶೀಲನೆ

ಇನ್ನು ವಾಣಿಜ್ಯ ಬೆಳೆ ತೊಗರಿ ಬಿತ್ತನೆ ಮಾಡಿರುವ ರೈತರಲ್ಲಿ ಆತಂಕ ಮೂಡಿಸಿದೆ. ಕಾರಣ ತೊಗರಿ ಬೆಳೆಯಲ್ಲಿ ಎಡೆ ಹೊಡೆಯುವ ಹಂತದಲ್ಲಿರುವಾಗ ಸುರಿಯುತ್ತಿರುವ ಮಳೆಯಿಂದ ಹೊಲದಲ್ಲಿ ಕೆಸರು ತುಂಬಿದ್ದರಿಂದ ಬೆಳೆಯ ಜೊತೆ ಹುಲ್ಲು ಬೆಳೆದಿದ್ದು, ಅದನ್ನು ತೆಗೆಯಲು ಸಾಧ್ಯವಾಗದೇ ಬೆಳೆಯನ್ನು ಸಂರಕ್ಷಿಸುವದು ತುಂಬಾ ಕಷ್ಟಕರವಾಗಿದೆ.

Karnataka Rain Effect: ಹವಾಮಾನ ವೈಪರೀತ್ಯಕ್ಕೆ ಹಾಳಾದ ಬಂಗಾರದ ಬೆಳೆ: ಕಂಗಾಲಾದ ರೈತ

 

ಕಳೆದ ಕೆಲ ವರ್ಷಗಳಿಂದ ಫಸಲು ಉತ್ತಮವಾಗಿ ಬಾರದೇ ಕಂಗಾಲಾಗಿರುವೆ. ಮುಂಗಾರು ಮಳೆ ಉತ್ತಮವಾಗಲಿದೆ ಎನ್ನುವ ಭರವಸೆಯಿಂದ ಬಿತ್ತಿದ ಹೆಸರು ಬೆಳೆ ಹಾಳಾಗಿದೆ. ಬೀಜ, ಗೊಬ್ಬರ, ಕೀಟನಾಶಕ, ಕಳೆ ತೆಗೆಯುವುದು ಸೇರಿದಂತೆ ಸಾಕಷ್ಟುಖರ್ಚು ಮಾಡಿದ್ದೇವೆ. ಆದರೀಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇದರಿಂದ ನಮಗೆ ದಿಕ್ಕೆ ತೋಚದಂತಾಗಿದೆ.

ಬಸವರಾಜ ಕೊಂಚೂರ ರೈತ

ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಬೆಳೆಯಾದ ಹೆಸರು, ಉದ್ದು ಸೇರಿದಂತೆ ವಾಣಿಜ್ಯ ಬೆಳೆಗಳು ತಾಲೂಕಿನಲ್ಲಿ ಹಾನಿಯಾಗಿದ್ದು, ಇಲಾಖೆಯ ವತಿಯಿಂದ ಬೆಳೆ ಹಾನಿ ಆಗಿರುವ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರದಿಂದ ಪರಿಹಾರ ಸಿಗುವುದು. ಅಲ್ಲದೇ ರೈತರು ಬೆಳೆ ವಿಮೆ ಮಾಡಿಸಿದ್ದರೆ ಅವರಿಗೆ ವಿಮೆ ಹಣ ಬರಲಿದೆ.

ಸಂಜುಕುಮಾರ ಮಾನಕರ್‌ ಸಹಾಯಕ ಕೃಷಿ ನಿರ್ದೇಶಕ

click me!