ಜಿಲ್ಲೆಯ ಮಸ್ಕಿ ಪಟ್ಟಣದ ಭ್ರಮಾರಂಭ ದೇಗುಲದಲ್ಲಿ ಇಂದು ಜಿಲ್ಲಾ ಮಟ್ಟದ ಪತ್ರಕರ್ತರ ದಿನಾಚರಣೆ ಹಾಗೂ ಮಸ್ಕಿ ಪತ್ರಕರ್ತರ ನೂತನ ಕಚೇರಿ ಉದ್ಘಾಟನೆ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್‌ನ ಇಬ್ಬರಿನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ರಾಯಚೂರು (ಜು.29): ಜಿಲ್ಲೆಯ ಮಸ್ಕಿ ಪಟ್ಟಣದ ಭ್ರಮಾರಂಭ ದೇಗುಲದಲ್ಲಿ ಇಂದು ಜಿಲ್ಲಾ ಮಟ್ಟದ ಪತ್ರಕರ್ತರ ದಿನಾಚರಣೆ ಹಾಗೂ ಮಸ್ಕಿ ಪತ್ರಕರ್ತರ ನೂತನ ಕಚೇರಿ ಉದ್ಘಾಟನೆ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್‌ನ ರಾಯಚೂರು ಜಿಲ್ಲಾ ವರದಿಗಾರ ಜಗನ್ನಾಥ ಪೂಜಾರ್ ಹಾಗೂ ಏಷ್ಯಾನೆಟ್ ಸುವರ್ಣನ್ಯೂಸ್‌ನ ಕ್ಯಾಮರಾಮೆನ್ ಶ್ರೀನಿವಾಸ್ ಅವರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ದಿ. ಎನ್.ಕೆ. ಕುಲಕರ್ಣಿ ಸ್ಮರಣಾರ್ಥ ನೀಡುವ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ವತಿಯಿಂದ ವಾರ್ಷಿಕ ಪ್ರಶಸ್ತಿಯನ್ನು ಏಷ್ಯಾನೆಟ್ ಸುವರ್ಣನ್ಯೂಸ್‌ನ ಇಬ್ಬರಿಗೆ ಕಾರ್ಯಕರ್ತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವನಂದ ತಗಡೂರು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಮಸ್ಕಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಬಸನಗೌಡ ತುರ್ವಿಹಾಳ ಹಾಗೂ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
undefined
ರಾಯಚೂರು ರೈತರಿಗೆ ಕೃಷ್ಣಮೃಗಗಳ ಕಾಟ: ಕಂಗಾಲಾದ ಅನ್ನದಾತ..!
ಪತ್ರಕರ್ತರು ನೊಂದವರ ದ್ವನಿಯಾಗಿ ಕೆಲಸ ಮಾಡಿ: ಬ್ಲಾಕ್‌ಮೇಲ್ ಪತ್ರಕರ್ತರು ಪತ್ರಿಕೊದ್ಯಮ ಬಿಟ್ಟು ತೊಲಗಿ. ಪತ್ರಿಕೊದ್ಯಮದ ಪಾವಿತ್ರ್ಯ ಹಾಳು ಮಾಡಬೇಡಿ ಎಂದು ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಹೇಳಿದರು. ಮಸ್ಕಿ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ನೂತನ ಪತ್ರಿಕಾ ಭವನ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪತ್ರಕರ್ತರು ವೃತ್ತಿ ಬದ್ಧತೆ ಅರಿತು ಕಾರ್ಯ ನಿರ್ವಹಿಸಬೇಕು. ನೊಂದವರ, ದೀನ ದಲಿತರ ಧ್ವನಿಯಾಗಿ ಕೆಲಸ ಮಾಡಬೇಕು ಎಂದರು. ಪತ್ರಕರ್ತರು ಒಂದು ವೇದಿಕೆಗೆ ಸೇರುವ ಒಂದು ದಿನ ಅಂದ್ರೆ ಅದು ಜುಲೈ 1.
ಮೊದಲ ಪತ್ರಿಕೆ ಪ್ರಾರಂಭವಾದ ದಿನವನ್ನು ಜುಲೈ ತಿಂಗಳ ಪೂರ್ತಿ ಪತ್ರಿಕಾ ದಿನವಾಗಿ ಆಚರಣೆ ಮಾಡಲಾಗುತ್ತದೆ. ಶ್ರದ್ದೆ, ಶ್ರಮ ವಹಿಸಿ ಮಸ್ಕಿಯಲ್ಲಿ ಸುಂದರವಾದ ಭವನ ನಿರ್ಮಾಣ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪತ್ರಿಕಾ ಭವನ ದೇವಸ್ಥಾನದಷ್ಟೆ ಶ್ರೇಷ್ಠ. ಪತ್ರಿಕೋದ್ಯಮವನ್ನು ಸವಾಲಾಗಿ ಸ್ವೀಕರಿಸಿ ನೊಂದವರಿಗೆ ನ್ಯಾಯ ಕೊಡಿಸಿ ಎಂದರು. ಇದು ಸರ್ಕಾರಿ ನೌಕರಿಯಲ್ಲ. ಪತ್ರಕರ್ತನಾಗಬೇಕಾದರೆ ಬದ್ಧತೆ ಬೇಕು. ಎಲ್ಲವನ್ನೂ ಬೇಡವಾದವ ಪತ್ರಕರ್ತನಾಗ್ತಾನೆ. ರಾತ್ರಿ ಯುಟ್ಯೂಬ ಚಾನಲ್ ಓಪನ್ ಮಾಡ್ತಾರೆ. ಬೆಳಗ್ಗೆ ಪತ್ರಕರ್ತ ಅಂದುಕೊಂಡು ಫೀಲ್ಡ್‌ಗೆ ಬರುತ್ತಾರೆ.
ಲಿಂಗಸುಗೂರು ಪೊಲೀಸರಿಂದ ತಲೆಮರೆಸಿಕೊಂಡು ಓಡಾಡ್ತಿದ್ದ ಕಳ್ಳರ ಬಂಧನ: 16 ಬೈಕ್, ಚಿನ್ನಾಭರಣ ಜಪ್ತಿ
ಇಂಥವರೆಲ್ಲ ದಂಧೆಗೊಸ್ಕರ ಪತ್ರಿಕೋದ್ಯಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬ್ಲಾಕಮೇಲ್ ತಂತ್ರ ಅನುಸರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದು ಶಬ್ಧ ಬಳಕೆಯಲ್ಲೂ ಯೋಚನೆ ಮಾಡಿಬೇಕು. ಆದರೆ ಇವತ್ತು ಎಲ್ಲಾ ನಿಬಂರ್‍ಧಗಳು ಮಾಯವಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು. ಸುಪ್ರಿಂಕೋರ್ಟ್ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ನಮ್ಮ ಜವಾಬ್ದಾರಿ ಹಾಗೂ ಲಕ್ಷ್ಮಣ ರೇಖೆ ದಾಟಿದರೆ ಹಲ್ಲೆಯಾಗುವ ಘಟನೆಗಳು ಪದೇ ಪದೆ ನಡೆಯುತ್ತಲೇ ಇರುತ್ತವೆ. ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡದೆ ಇದ್ದರೆ ನಾವು ಪತ್ರಕರ್ತರೆಂದು ಕರೆಸಿಕೊಳ್ಳಲು ಅರ್ಹರಲ್ಲ ಎಂದು ಹೇಳಿದರು.