ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿರುವ ಹಾಸ್ಟೆಲ್‌ಗಳ ಅವ್ಯವಸ್ಥೆ ನೋಡಿದ್ರೆ ಯಾವುದೇ ಕಾರಣಕ್ಕೂ ತಮ್ಮ ಮಕ್ಕಳನ್ನು ಹಾಸ್ಟೆಲ್‌ಗೆ ಬಿಡಬಾರದು ಎಂದು ಹೇಳುವವರೇ ಹೆಚ್ಚು. ಅಷ್ಟಕ್ಕೂ ಆ ತಾಲೂಕಿನ ಹಾಸ್ಟೆಲ್‌ಗಳಲ್ಲಿ ಆಗ್ತಿರುವ ಸಮಸ್ಯೆ ಆದ್ರು ಏನು ಅಂತೀರಾ? ಈ ಸ್ಟೋರಿ ನೋಡಿ.
ಚಿತ್ರದುರ್ಗ: ಚಿತ್ರಮಕ್ಕಳು ಹಾಸ್ಟೆಲ್ ನಲ್ಲಿ ಇದ್ರೆ ಚೆನ್ನಾಗಿ ಓದಿಕೊಂಡು ಟೈಮ್ ಟು ಟೈಮ್ ಊಟ ಮಾಡಿಕೊಂಡು ಆರೋಗ್ಯವಾಗಿ ಇರ್ತಾರೆ ಅಂತ ಪೋಷಕರು ಮಕ್ಕಳನ್ನು ಹಾಸ್ಟೆಲ್‌ಗೆ ಸೇರಿಸ್ತಾರೆ. ಆದ್ರೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿರುವ ಹಾಸ್ಟೆಲ್‌ಗಳ ಅವ್ಯವಸ್ಥೆ ನೋಡಿದ್ರೆ ಯಾವುದೇ ಕಾರಣಕ್ಕೂ ತಮ್ಮ ಮಕ್ಕಳನ್ನು ಹಾಸ್ಟೆಲ್‌ಗೆ ಬಿಡಬಾರದು ಎಂದು ಹೇಳುವವರೇ ಹೆಚ್ಚು. ಅಷ್ಟಕ್ಕೂ ಆ ತಾಲೂಕಿನ ಹಾಸ್ಟೆಲ್‌ಗಳಲ್ಲಿ ಆಗ್ತಿರುವ ಸಮಸ್ಯೆ ಆದ್ರು ಏನು ಅಂತೀರಾ? ಈ ಸ್ಟೋರಿ ನೋಡಿ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದಲೂ ಒಂದಲ್ಲ ಒಂದು ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ, BCM ಹಾಸ್ಟೆಲ್‌ಗಳಲ್ಲಿ ವಿಧ್ಯಾರ್ಥಿಗಳು ಫುಡ್ ಪಾಯಿಸನ್‌ನಿಂದ ನರಳಾಟ ಅನುಭವಿಸ್ತಿದ್ದಾರೆ. ಅನಾರೋಗ್ಯಕ್ಕೆ ಒಳಗಾದ ಆ ಕ್ಷಣಕ್ಕೆ ಮಾತ್ರ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಕೊಡಿಸೋದು ಬಿಟ್ರೆ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಯಾವ ಕಾರಣಕ್ಕೆ ಈ ಘಟನೆಗಳು ಸಂಭವಿಸುತ್ತಿವೆ ಎಂದು ಅತ್ತ ಕಣ್ಣಾಡಿಸಿಯೂ ಇಲ್ಲ. ಸರ್ಕಾರಿ ಹಾಸ್ಟೆಲ್ ಗಳು ಅಂದ್ರೆ ಸಾಕು ಅಧಿಕಾರಿಗಳಿಗೆ ಇನ್ನಿಲ್ಲದ ಅಸಡ್ಡೆ, ಬೇಜವಾಬ್ದಾರಿ. ಇಂದು ಕೂಡ ಹೊಳಲ್ಕೆರೆ ಪಟ್ಟಣದ ಹೊರವಲಯದ ಕಣಿವೆ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸೇರಿದ ಅರೆ ಅಲೆಮಾರಿ ಹಾಸ್ಟೆಲ್‌ನಲ್ಲಿ ಬೆಳಗ್ಗೆ ಉಪಹಾರ ಸೇವಿಸಿದ ಸುಮಾರು 25ಕ್ಕೂ ಮಕ್ಕಳು ಅಸ್ವಸ್ಥಗೊಂಡು, ಜ್ವರ, ವಾಂತಿ, ಬೇದಿ, ಇನ್ನಿತರ ಕಾರಣಗಳಿಂದ ಹೊಳಲ್ಕೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ಬಳಿಕ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಸುಮ್ಮನಾಗಿದ್ದಾರೆ. ಇನ್ನೂ ಈ ಘಟನೆ ಸಂಬಂಧ ಮಗುವನ್ನೇ ಕೇಳಿದ್ರೆ, ನಮ್ಮ ಹಾಸ್ಟೆಲ್ ನಲ್ಲಿ ಯಾವುದೇ ವ್ಯವಸ್ಥೆ ಸರಿಯಿಲ್ಲ. ಅದಕ್ಕೆ ಈ ರೀತಿಯ ಘಟನೆಗಳು ಆಗ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಇನ್ನೂ ಮಕ್ಕಳ ಈ ಅವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ದ ಪೋಷಕರು ಹಿಡಿಶಾಪ ಹಾಕಿದ್ದಾರೆ.
ವಿಷಪೂರಿತ ಮ್ಯಾಗಿ ಸೇವಿಸಿ ಮಹಿಳೆ ಸಾವು, ನಿರ್ಲಕ್ಷ್ಯಕ್ಕೆ ಬಲಿಯಾಯ್ತು ಬಡಜೀವ!
ಈ ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಯೋಗಕ್ಷೇಮ ವಿಚಾರಿಸಿದರು. ಇನ್ನೂ ಈ ತರಹದ ಪ್ರಕರಣಗಳಿಗೆ ಕಾರಣ ಏನು ಎಂಬುದನ್ನ ಅವರಿಗೇ ಕೇಳಿದ್ರೆ, ನನ್ನ ಅವಧಿಯಲ್ಲಿಯೇ 2008 ರಲ್ಲಿ ಹಾಸ್ಟೆಲ್ ನ್ನು ನಾನು ಕಟ್ಟಿಸಿದ್ದೆ. ಆದ್ರೆ ಅಲ್ಲಿಗೆ ಯಾವುದೇ ನೀರಾವರಿ ವ್ಯವಸ್ಥೆ ಇಲ್ಲ. ಹಾಗಾಗಿ ಎರಡು ಬಾರಿ ನಾನೇ ಬೋರ್ ವೆಲ್ ಕೊರೆಸಿ ನೀರನ್ನು ಪೂರೈಸಿದ್ದೇನೆ. ಕಳೆದ ಮೂರು ದಿನಗಳಿಂದ ಫಿಲ್ಟರ್ ನೀರಿನ ಸಮಸ್ಯೆ ಆಗಿ ಮಕ್ಕಳಿಗೆ ಬಿಸಿ ನೀರು ಕೊಡ್ತಿದ್ರು ಎಂದು ಮಕ್ಕಳು ಹೇಳಿದ್ರು. ಬೋರ್ ವೆಲ್ ನ ಪೈಪ್ ಲೈನ್ ಹೊಡೆದು ನೀರಿನ ವ್ಯತ್ಯಾಸ ದಿಂದ ಈ ರೀತಿ ಘಟನೆ ಆಗಿರಬಹುದು. ಹಾಸ್ಟೆಲ್ ನ 100ಕ್ಕೂ ಅಧಿಕ ಮಕ್ಕಳು ಊಟ ಮಾಡಿದ್ದಾರೆ. ಅದ್ರಲ್ಲಿ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದು, ಸತ್ಯಾಸತ್ಯತೆ ಏನು ಎಂಬುದನ್ನು ತನಿಖೆ ಮಾಡಿಸಲಾಗುವುದು. ಮತ್ತೊಮ್ಮೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಕೊಟ್ಟರು.
ಕೋಟೆನಾಡಿನಲ್ಲಿ ಕಡಿಮೆ ಆಗದ ಹಾಸ್ಟೆಲ್ ವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ!
ಒಟ್ಟಾರೆ ಹೊಳಲ್ಕೆರೆ ತಾಲೂಕಿನಲ್ಲಿಯೇ ಇರುವ ಮೂರು BCM ಹಾಸ್ಟೆಲ್ ಗಳಲ್ಲಿ ಫುಡ್ ಪಾಯಿಸನ್ ಪ್ರಕರಣಗಳು ಆಗಾಗ ಬೆಳಕಿಗೆ ಬಂದಿದ್ದು. ಅಧಿಕಾರಿಗಳು ಯಾಕೇ ಸೂಕ್ತ ಕ್ರಮ ಕೈಗೊಳ್ಳೋದ್ರಲ್ಲಿ ನಿರ್ಲಕ್ಷ್ಯ ತೋರ್ತಿದ್ದಾರೆ ಎಂಬುದು ಪೋಷಕರ ಪ್ರಶ್ನೆಯಾಗಿದೆ. ಆದ್ದರಿಂದ ಕೂಡಲೇ ಇನ್ಮುಂದೆ ಯಾವುದೇ ಹಾಸ್ಟೆಲ್ ಗಳಲ್ಲಿ ಈ ರೀತಿ ಘಟನೆ ಮರುಕಳಿಸೋದಕ್ಕೂ ಮುನ್ನವೇ ಅಧಿಕಾರಿಗಳು ಅಲ್ಲಿನ ಸಮಸ್ಯೆಗೆ ನಾಂದಿ ಹಾಡಬೇಕಿದೆ.