Gadag: ಶಿವಕುಮಾರ ಶ್ರೀಗಳ ಸ್ಮರಣಾರ್ಥ ಬಡಾವಣೆಗೆ 'ಸಿದ್ದಗಂಗಾ' ಹೆಸರು ನಾಮಕರಣ!

By Suvarna News  |  First Published Apr 1, 2022, 1:36 PM IST

ನಗರದ ಮುಳಗುಂದ ರೋಡ್ ರಾಧಾಕೃಷ್ಣ ಬಡಾವಣೆ ಬಳಿಯ ಕೆಹೆಚ್‌ಬಿ ಕಾಲೋನಿಗೆ ಸಿದ್ದಗಂಗಾ ಬಡಾವಣೆ ಅಂತಾ ನಾಮಕರಣ ಮಾಡಲಾಯಿತು.


ಗದಗ (ಏ.01): ನಗರದ ಮುಳಗುಂದ ರೋಡ್ ರಾಧಾಕೃಷ್ಣ ಬಡಾವಣೆ (RadhaKrishna Layout) ಬಳಿಯ ಕೆಹೆಚ್‌ಬಿ ಕಾಲೋನಿಗೆ (KHB Colony) ಸಿದ್ದಗಂಗಾ ಬಡಾವಣೆ (Siddaganga Layout) ಅಂತಾ ನಾಮಕರಣ ಮಾಡಲಾಯಿತು. ನಡೆದಾಡಿದ ದೇವರು, ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮಿಗಳ (Sri Shivakumara Swamiji) 115 ನೇ ಜಯಂತಿ ದಿನದಂದೇ ಬಡಾವಣೆಯಲ್ಲಿ ಸೇರಿದ್ದ ಸ್ಥಳೀಯರು ಶ್ರೀಗಳ ಭಾವ ಚಿತ್ರವಿರುವ ನಾಮಫಲಕ ನೆಟ್ಟು,  ಪೂಜೆ ಸಲ್ಲಿಸಿದರು. ನಂತರ ಸಿಹಿ ಹಂಚಿ ಶ್ರೀಗಳ ಹುಟ್ಟುಹಬ್ಬವನ್ನು ಆಚರಿಸಿದರು.

ಮುಳಗುಂದ ರಸ್ತೆಯ ಹೌಸಿಂಗ್ ಬಡಾವಣೆಯನ್ನು ಅನೇಕರು ರಾಧಾಕೃಷ್ಣ ಬಡಾವಣೆ ಅಂತಾ ಕರೆಯುತ್ತಿದ್ದರು. ಬಡಾವಣೆಗೆ ಪ್ರತ್ಯೇಕ ಹೆಸರಿಡಬೇಕೆಂಬುದು ಸ್ಥಳೀಯರ ಬಹಳದಿನದ ಕನಸಾಗಿತ್ತು. ಎರಡು ವರ್ಷದ ಹಿಂದೆಯೇ ಬಡಾವಣೆಗೆ ಸಿದ್ದಗಂಗಾ ಶ್ರೀಗಳ ಹೆಸರಿಡಬೇಕು ಅನ್ನೋ ಪ್ಲಾನನ್ನು ಬಡಾವಣೆ ಗುರು ಹಿರಿಯರು ಮಾಡಿಕೊಂಡಿದ್ದರು. ಗದಗಿನ ಪುಟ್ಟರಾಜ ಕವಿ ಗವಾಯಿಗಳಂತೆ ತುಮಕೂರಿನ ಸಿದ್ದಗಂಗಾ ಶ್ರೀಗಳು ತ್ರಿವಿಧ ದಾಸೋಹ ನಡೆಸಿ ನೂರಾರು ಜನರಿಗೆ ದಾರಿ ದೀಪವಾದವರು. 

Latest Videos

undefined

ಅವರ ಹೆಸರು ಬಡಾವಣೆಗೆ ಸೂಕ್ತ ಅನ್ನೋ ನಿಟ್ಟಿನಲ್ಲಿ ನಾಮಕರಣ ಮಾಡಲಾಗಿದೆ. ಈ ಬಗ್ಗೆ ಈಗಾಗಲೇ ನಗರಸಭೆಯ ಚುನಾಯಿತ ಪ್ರತಿನಿಧಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಆದಷ್ಟು ಬೇಗ ಅಧಿಕೃತವಾಗಿ ಬಡಾವಣೆ ಹೆಸರು ಸಿದ್ದಗಂಗಾ ಕಾಲೋನಿಯಾಗಲಿದೆ.  ಶ್ರೀಗಳ ಹೆಸರನ್ನ ಬಡಾವಣೆಗೆ ಇಟ್ಟಿದ್ದು ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಬಡಾವಣೆಯ ನಾಮಫಲಕವನ್ನ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

Tumakuru: ತ್ರಿವಿಧ ದಾಸೋಹಿ ಶಿವಕುಮಾರ ಶ್ರೀ ಜನ್ಮದಿನಕ್ಕೆ ಸಿದ್ಧಗಂಗೆ ಸಜ್ಜು

ಶಿವಕುಮಾರ ಶ್ರೀ ಪ್ರಶಸ್ತಿ ಮೀರಿದವರು, ಭಾರತ ರತ್ನ ಕೇಳೋಲ್ಲ: ಲಿಂಗೈಕ್ಯರಾಗಿರುವ ಪೂಜ್ಯ ಶಿವಕುಮಾರ ಶ್ರೀಗಳು(Shivakumara Swamiji) ಪ್ರಶಸ್ತಿಗಳನ್ನು ಮೀರಿದವರು. ಹೀಗಾಗಿ ಭಾರತ ರತ್ನ(Bharat Ratna) ಕೇಳಿ ಪಡೆಯುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಯಾರೂ ಚರ್ಚೆ ಮಾಡಲೇಬಾರದು ಎಂದು ಸಿದ್ಧಗಂಗಾ ಮಠಾಧೀಶರಾಗಿರುವ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ಅದಾಗಿ ಬಂದದ್ದು ಅಮೃತಕ್ಕೆ ಸಮಾನ. ಕೇಳಿ ಬಂದಿದ್ದು ವಿಷಕ್ಕೆ ಸಮಾನ ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. 

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪೂಜ್ಯರಿಗೆ ಭಾರತ ರತ್ನ ಕೊಡುವ ಬಗ್ಗೆ ಯಾರೂ ಕೂಡ ಮಾತು ಆಡಬಾರದು. ಅದನ್ನು ಕೇಳಿ ಪಡೆಯುವ ಪ್ರಶ್ನೆಯೇ ಇಲ್ಲ. ಆದ್ದರಿಂದ ಯಾರೂ ಈ ಬಗ್ಗೆ ಕೇಳಲೇಬಾರದು, ಚರ್ಚೆ ಕೂಡ ಮಾಡಲೇಬಾರದು ಎಂದರು. ಪೂಜ್ಯರು ಅದನ್ನು ಮೀರಿರುವಂತವರು. ಅದು ಬಂದ ತಕ್ಷಣ ಅವರ ಗೌರವ ಹೆಚ್ಚುವಂತಹದ್ದಲ್ಲ. ಹಾಗಾಗಿ ಅದನ್ನು ನಾವು ಯಾರೂ ನಿರೀಕ್ಷೆ ಮಾಡಬಾರದು, ಮಾಡಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಶಿವಕುಮಾರ ಶ್ರೀಗೆ ಭಾರತರತ್ನ ಬಗ್ಗೆ ಅಮಿತ್‌ ಶಾ ಜತೆ ಚರ್ಚೆ: ಸಿದ್ಧಗಂಗಾ ಮಠದ(Siddaganga Matha) ಲಿಂಗೈಕ್ಯ ಶ್ರೀಗಳಾದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡುವ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit Sha) ಅವರೊಂದಿಗೆ ಚರ್ಚಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ(BS Yediyurappa) ತಿಳಿಸಿದ್ದಾರೆ. 

Tumakuru: ದ್ವೇಷ ನಿಲ್ಲಲಿ, ಭ್ರಾತೃತ್ವ ಹಬ್ಬಲಿ: ರಾಹುಲ್‌ ಗಾಂಧಿ

ತುಮಕೂರಿನ ಸಿದ್ಧಗಂಗಾ ಮಠಕ್ಕೆ ಸೋಮವಾರ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಏ.1ರಂದು ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ಕಾರ್ಯಕ್ರಮಕ್ಕೆ ಅಮಿತ್‌ ಶಾ ಆಗಮಿಸುತ್ತಿದ್ದು ಅಂದು ಅವರೊಂದಿಗೆ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಬಗ್ಗೆ ಮಾತುಕತೆ ನಡೆಸುತ್ತೇನೆ. ಅವರು ಏನು ತೀರ್ಮಾನ ಕೈಗೊಳ್ಳುತ್ತಾರೋ ನೋಡೋಣ ಎಂದು ತಿಳಿಸಿದರು. ಅಮಿತ್‌ ಶಾ ಅವರು ಮೊದಲು ಲಿಂಗೈಕ್ಯ ಶ್ರೀಗಳ ಗದ್ದುಗೆ ದರ್ಶನ ಪಡೆದ ಬಳಿಕ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದು ಅಂದು ಸುಮಾರು 2-3 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.

click me!