ಬಿಎಸ್‌ವೈ ರಾಜಾಹುಲಿ ಎಂದು ಸಿದ್ದುಗೆ ಆಶೋಕ್‌ ಟಾಂಗ್‌!

By Kannadaprabha NewsFirst Published Jun 4, 2020, 10:11 AM IST
Highlights

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ರಾಜಾಹುಲಿ, ಹುಲಿಗೆ ಇನ್‌ ಡೈರೆಕ್ಟಾಗಿ ಆಡಳಿತ ಮಾಡಲು ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಟೀಕೆಗೆ ಕಂದಾಯ ಸಚಿವ ಆರ್‌. ಅಶೋಕ್‌ ಟಾಂಗ್‌ ನೀಡಿದ್ದಾರೆ.

ಚಾಮರಾಜನಗರ(ಜೂ. 04): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ರಾಜಾಹುಲಿ, ಹುಲಿಗೆ ಇನ್‌ ಡೈರೆಕ್ಟಾಗಿ ಆಡಳಿತ ಮಾಡಲು ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಟೀಕೆಗೆ ಕಂದಾಯ ಸಚಿವ ಆರ್‌. ಅಶೋಕ್‌ ಟಾಂಗ್‌ ನೀಡಿದ್ದಾರೆ.

ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಲು ಬುಧವಾರ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ಹಾಗೂ ವಿಜಯೇಂದ್ರ ಇಬ್ಬರು ಮುಖ್ಯಮಂತ್ರಿಗಳಿದ್ದಾರೆನ್ನುವ ಸಿದ್ದರಾಮಯ್ಯಗೆ ಟೀಕೆಗೆ ಅವರು ಉತ್ತರಿಸಿ, ಪ್ರತಿಯೊಬ್ಬ ಮುಖ್ಯಮಂತ್ರಿಯಾಗಿದ್ದಗಲೂ ಈ ಉಹಾಪೋಹ ಇದ್ದೇ ಇದೆ ಆದರೆ ತಿರುಳಿಲ್ಲ ಎಂದರು.

ಕಾಂಗ್ರೆಸ್‌ ಶಾಸಕರ ಉಳಿಸಿಕೊಳ್ಳದ ಸಿದ್ದರಾಮಯ್ಯ ಜತೆ ಯಾರು ಹೋಗ್ತಾರೆ?: ಈಶ್ವರಪ್ಪ

ಇದೇ ವೇಳೆ, ಎಂಟಿಬಿ ನಾಗರಾಜು ಅವರಿಗೆ ಸಚಿವಗಿರಿ ಸಿಗುತ್ತದಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಎಂಟಿಬಿ ಅವರು ಮಂತ್ರಿಗಳಾಗಿದ್ದವರು ನಮ್ಮ ಸರ್ಕಾರಕ್ಕೆ ಅವರು ನೆರವಾಗಿದ್ದು ಅವರ ಕಷ್ಟಕಾಲದಲ್ಲಿ ನಾವಿರುತ್ತೇವೆ, ಅವರ ಪರ ಬ್ಯಾಟಿಂಗ್‌ ಮಾಡುತ್ತೇನೆ ಎಂದರು.

ನಿರ್ಸರ್ಗ ಮಳೆಯ ಪ್ರಕೃತಿ ವಿಕೋಪ ಎದುರಿಸಲು ಸರ್ಕಾರ ತಯಾರಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ. ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಅವರು, ಕರ್ನಾಟಕಕ್ಕೆ ಸಂಬಂಧಿಸಿದಂತೆ ಕರಾವಳಿ ಹಾಗೂ ಮಲೆನಾಡಿನ ಭಾಗದ ಜಿಲ್ಲೆಗಳಲ್ಲಿ 50 ರಿಂದ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಮಳೆಯಾಗುವ ಸಂಭವವಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕೃತಿ ವಿಕೋಪ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರಕ್ಕೆ ಮನವಿ ಮಾಡಿದ್ದರಿಂದ ಕೇಂದ್ರದಿಂದ 4 ಎನ್‌ಡಿಆರ್‌ಎಫ್‌ ತಂಡಗಳು ರಾಜ್ಯಕ್ಕೆ ಬರಲಿದೆ ಎಂದರು.

'ಕೊರೋನಾಗೆ ಮುಂದುವರೆದ ದೇಶಗಳೇ ತತ್ತರ, ಭಾರತದಲ್ಲಿ ಮೋದಿಯಿಂದ ಕೋವಿಡ್‌ ನಿಯಂತ್ರಣ'

ರಾಜ್ಯದ ಕೊಡಗು ಜಿಲ್ಲೆಗೆ 25 ಮಂದಿ ಇರುವ ತಂಡ ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆ, ಧಾರವಾಡ ಜಿಲ್ಲೆ, ಬೆಳಗಾವಿ ಜಿಲ್ಲೆಗಳಿಗೆ ಒಂದೊಂದು ತಂಡದಂತೆ ಇನ್ನೂ ಮೂರು ತಂಡಗಳು ಮುಂದಿನ ದಿನಗಳಲ್ಲಿ ಬರಲಿದೆ ಎಂದರು.

ರಾಜ್ಯಕ್ಕೆ ಕೇಂದ್ರ ಸರ್ಕಾರ ಪ್ರವಾಹ ಮತ್ತು ಪ್ರಕೃತಿ ವಿಕೋಪ ನಿಯಂತ್ರಣಕ್ಕೆ 1311 ಕೋಟಿ ರು. ಬಿಡುಗಡೆ ಮಾಡಿದೆ. ಈ ಹಣದಲ್ಲಿ ಪ್ರವಾಹದಿಂದ ತೊಂದರೆಗೆ ಸಿಲುಕಿದವರಿಗೆ ವಸತಿ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಶಾಶ್ವತ ಶೆಡ್‌ಗಳನ್ನು ನಿರ್ಮಿಸಿಕೊಡಲು ಸರ್ಕಾರ ಗಮನ ಹರಿಸುತ್ತಿದೆ. ಅಲ್ಲದೇ ಅಗ್ನಿಶಾಮಕ ದಳ ಇಲಾಖೆಗೆ ಬೇಕಾದ ಯಂತ್ರಗಳ ಖರೀದಿಗೂ ಹಣ ನೀಡಲಾಗುವುದು. ರಾಜ್ಯ ಸರ್ಕಾರ 310 ಕೋಟಿ ರು. ಹೆಚ್ಚುವರಿ ಹಣವನ್ನು ಇಟ್ಟುಕೊಂಡಿದೆ ಎಂದು ತಿಳಿಸಿದರು.

ಬಳ್ಳಾರಿ: ಜಿಂದಾಲ್‌ ನೌಕರನಿಗೆ ಮಹಾಮಾರಿ ವೈರಸ್‌ ಸೋಂಕು ದೃಢ

ಚಾಮರಾಜನಗರ ಜಿಲ್ಲಾಡಳಿತವು ಕೋವಿಡ್‌ -19 ಸಂಬಂಧ 2.74 ಕೋಟಿ ರು. ಹಣ ಬಿಡುಗಡೆ ಮಾಡಿದೆ. ಇದರಲ್ಲಿ, ವಲಸೆ ಕಾರ್ಮಿಕರಿಗೆ 50 ಲಕ್ಷ ರು. ಹಣ, ಸ್ಯಾಂಪಲ… ಪರೀಕ್ಷೆಗಾಗಿ 45 ಲಕ್ಷ ರು., ಲ್ಯಾಬ… ನಿರ್ಮಾಣಕ್ಕಾಗಿ 1.79 ಕೋಟಿ ರು. ನೀಡಿದ್ದಾರೆ. ಪಿಡಿ ಖಾತೆಯಲ್ಲಿ 3.56 ಕೋಟಿ ರು. ಹಣವಿದೆ, ಬರ ಪರಿಹಾರ, ಬೆಳೆಹಾನಿ, ಪ್ರಾಕೃತಿಕ ವಿಕೋಪ ಸಂಬಂಧ ಜಿಲ್ಲಾಧಿಕಾರಿ ಖಾತೆಯಲ್ಲಿ 12.28 ಕೋಟಿ ರು. ಇದೆ ಎಂದು ಅವರು ತಿಳಿಸಿದರು.

ಕಂದಾಯ ಇಲಾಖೆಯೂ ಕೋವಿಡ್‌ 19 ಸಂಬಂಧ ಪೊಲೀಸ್‌ ಇಲಾಖೆಗೆ 10 ಕೋಟಿ ರು., ಆರೋಗ್ಯ ಇಲಾಖೆಗೆ 70 ಕೋಟಿ ರು., ಎಲ್ಲ ಜಿಲ್ಲಾಧಿಕಾರಿಗಳಿಗೆ 152 ಕೋಟಿ ರು., ಕಾರಾಗೃಹಗಳಿಗೆ 2 ಕೋಟಿ ರು. ಹಾಗೂ ಬಿಬಿಎಂಪಿಗೆ 50 ಕೋಟಿ ರು. ಹಣ ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಶಾಸಕ ಸಿ.ಎನ್‌. ನಿರಂಜನ್‌ ಕುಮಾರ್‌, ಆರ್‌. ನರೇಂದ್ರ, ಜಿಲ್ಲಾಧಿಕಾರಿ ಡಾ.ಎಂ. ಆರ್‌. ರವಿ, ಎಸ್ಪಿ ಎಚ್‌.ಡಿ. ಆನಂದ್‌ ಕುಮಾರ್‌ ಇದ್ದರು.

ಸಚಿವರಿಂದ ಡಿಸಿ, ಎಸ್ಪಿಗೆ ಸಲ್ಯೂಟ್‌:

ಇದಕ್ಕೂ ಮುನ್ನ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಸಚಿವರಿಗೆ ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಮತ್ತು ಎಸ್ಪಿ ಎಚ್‌.ಡಿ.ಆನಂದಕುಮಾರ್‌ ಅವರು ಸಚಿವರನ್ನು ಸಲ್ಯೂಟ್‌ ಹೊಡೆದು ಬರಮಾಡಿಕೊಂಡರು. ಸಚಿವರು ಸೆಲ್ಯೂಟಿಗೆ ಪ್ರತಿ ಸೆಲ್ಯೂಟ್‌ ನೀಡಿ ಗಮನ ಸೆಳೆದರು.

click me!