JSW ನೌಕರನಿಗೆ ಕೊರೋನಾ ವೈರಸ್ ಸೋಂಕು| 35 ವರ್ಷದ ನೌಕರ ತಮಿಳುನಾಡಿನ ಸೇಲಂನಲ್ಲಿರುವ ತಾಯಿ ಭೇಟಿಯಾಗಿ ಬಂದಿದ್ದರು| ಜಿಂದಾಲ್‌ನ ವಿದ್ಯಾನಗರ ಪ್ರದೇಶ ಕಂಟೈನ್ಮೆಂಟ್ ಜೋನ್ ಎಂದು ಘೋಷಣೆ|
ಬಳ್ಳಾರಿ(ಜೂ.04): ಜಿಲ್ಲೆಯ ಸಂಡೂರು ತಾಲೂಕು ತೋರಣಗಲ್ ಬಳಿಯ ಜಿಂದಾಲ್‌ನ(ಜೆಎಸ್‌ಡಬ್ಲ್ಯು) ನೌಕರನಿಗೆ ಕೊರೋನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.
35 ವರ್ಷದ ಈ ನೌಕರ ತಮಿಳುನಾಡಿನ ಸೇಲಂನಲ್ಲಿರುವ ತಾಯಿಯನ್ನು ಭೇಟಿಯಾಗಿ ಬಂದಿದ್ದರು. ಇವರ ತಾಯಿಗೆ ಕೊರೋನಾ ವೈರಸ್ ಇರುವುದು ಖಚಿತವಾಗುತ್ತಿದ್ದಂತೆಯೇ ವಿದ್ಯಾನಗರದಲ್ಲಿ ವಾಸವಾಗಿದ್ದ ಈತನನ್ನು ಕಳೆದ ಮೂರು ದಿನಗಳ ಹಿಂದೆ ಕ್ವಾರಂಟೈನ್ ಮಾಡಲಾಗಿತ್ತಲ್ಲದೆ, ಗಂಟಲು ದ್ರವ ಪಡೆದು ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿತ್ತು. ಬುಧವಾರ ರಾತ್ರಿ ಈತನಿಗೆ ಸೋಂಕು ಇರುವುದು ಖಚಿತವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜನಾರ್ದನ ತಿಳಿಸಿದ್ದಾರೆ.
ಹೆಚ್ಚುತ್ತಿರುವ ಕೊರೋನಾ ಕೇಸ್: ಜೂ.30ರ ವರೆಗೂ ಲಾಕ್‌ಡೌನ್ ಜಾರಿ
ಜಿಂದಾಲ್‌ನ ವಿದ್ಯಾನಗರ ಪ್ರದೇಶವನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿದೆ. ಜಿಂದಾಲ್ ನೌಕರನ ಪ್ರಕರಣದಿಂದ ಬುಧವಾರ ಒಂದೇ ದಿನ ಎರಡು ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ 53ಕ್ಕೇರಿದಂತಾಗಿದೆ.