Ballari: ಅಪ್ಪು ಮರೆಯಾದ್ರು ಮುಗಿಯದ ಅಭಿಮಾನ: ಕೃಷ್ಣ ಶೀಲೆಯಲ್ಲಿ ಪುನೀತ್‌ ಪ್ರತಿಮೆ ಅನಾವರಣ

By Govindaraj S  |  First Published Oct 27, 2022, 12:10 AM IST

ಪವರ್ ಸ್ಟಾರ್ ಪುನೀತ್‌ ರಾಜಕುಮಾರ್ ಅಗಲಿ ವರ್ಷವಾದ್ರು ಅಪ್ಪು ಮೇಲಿನ ಅಭಿಮಾನ ಪ್ರೀತಿ ಗೌರವ ಕಿಂಚಿತ್ತೂ ಕಡಿಮೆಯಾಗಿಲ್ಲ ಅನ್ನೋದಕ್ಕೆ ಬಳ್ಳಾರಿಯ ಈ ಪ್ರತಿಮೆ ಸಾಕ್ಷಿಯಾಗಿದೆ. ಹೌದು! ದೇವರ ಮೂರ್ತಿಯನ್ನು ಮಾಡೋ ಕೃಷ್ಣ ಶಿಲೆಯಲ್ಲಿ  ಪನೀತ ರಾಜಕುಮಾರ ಅವರ ಏಳು ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಲಾಗಿದೆ. 


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್, ಬಳ್ಳಾರಿ

ಬಳ್ಳಾರಿ (ಅ.27): ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಅಗಲಿ ವರ್ಷವಾದ್ರು ಅಪ್ಪು ಮೇಲಿನ ಅಭಿಮಾನ ಪ್ರೀತಿ ಗೌರವ ಕಿಂಚಿತ್ತೂ ಕಡಿಮೆಯಾಗಿಲ್ಲ ಅನ್ನೋದಕ್ಕೆ ಬಳ್ಳಾರಿಯ ಈ ಪ್ರತಿಮೆ ಸಾಕ್ಷಿಯಾಗಿದೆ. ಹೌದು! ದೇವರ ಮೂರ್ತಿಯನ್ನು ಮಾಡೋ ಕೃಷ್ಣ ಶಿಲೆಯಲ್ಲಿ  ಪುನೀತ ರಾಜಕುಮಾರ ಅವರ ಏಳು ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಪುನೀತ್ ಅವರ ಜನಪರ ಕೆಲಸಕ್ಕೆ ಮರುಳಾದ ಅಭಿಮಾನಿ ಸುನೀಲ್ ಈ ಪುತ್ಥಳಿ ನಿರ್ಮಾಣ ಮಾಡಿದ್ದು, ಮಾಜಿ ಸಚಿವ ಜನಾರ್ದನ ರೆಡ್ಡಿ, ಶಾಸಕ ಸೋಮಶೇಖರ್ ರೆಡ್ಡಿ ಅನಾವರಣಗೊಳಿಸಿದ್ದಾರೆ.

Tap to resize

Latest Videos

undefined

ಇದು ಪವರ್ ಸ್ಟಾರ್ ಪುನೀತ ರಾಜಕುಮಾರ್ ಪವರ್ ಅಂದ್ರೆ ತಪ್ಪಾಗಲಿಕ್ಕಿಲ್ಲ: ಹೌದು! ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಕಾಲಿಕ ಮರಣ ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅವರು ಮೃತಪಟ್ಟು ವರ್ಷ ಕಳೆಯುತ್ತಾ ಬಂದಿದೆ. ಅಪ್ಪು ಕಣ್ಮರೆಯಾದ್ರು ಪುನೀತ ರಾಜಕುಮಾರ ಇನ್ನೂ ಅಭಿಮಾನಿಗಳ ಮನಸ್ಸಿನಿಂದ ಮಾಸಿಲ್ಲ. ಅಪ್ಪು ಇನ್ನಿಲ್ಲವಾದ್ರು ತಮ್ಮ ನೆಚ್ಚಿನ ನಟ ಹಾಕಿಕೊಟ್ಟ ಮಾರ್ಗದಲ್ಲಿ ಅಭಿಮಾನಿಗಳು ನಡೆಯುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮೊಂದಿಗೆ ಇಲ್ಲದಿದ್ದರೂ ಕೂಡ ಅವರು ಮಾಡಿರುವ ಸಮಾಜಮುಖಿ ಕೆಲಸಗಳು ಎಂದಿಗೂ ಜೀವಂತವಾಗಿದೆ. 

ಬೀದರ್‌: ರ‍್ಯಾಲಿಯಲ್ಲಿ ಸಿಎಂಗೆ ಅಪ್ಪು ಫೋಟೋ ನೀಡಿದ ಅಭಿಮಾನಿ..!

ಅಪ್ಪು ಮರೆಯಾದ ಬಳಿಕ ಗಣಿ ನಾಡು ಬಳ್ಳಾರಿಯಲ್ಲಿ ಅವರ ಅಭಿಮಾನಿ ಸುನಿಲ್ ಮತ್ತು ಕುರವಳ್ಳಿ ನಾಗರಾಜ್ ಎನ್ನುವವರು ಕೃಷ್ಣ ಶಿಲೆಯಲ್ಲಿ ಅವರ ಅದ್ಬುತವಾದ ಪ್ರತಿಮೆ ಹಾಗೂ ಉದ್ಯಾನವನ ನಿರ್ಮಾಣ ಮಾಡಿದ್ದಾರೆ. ಬಳ್ಳಾರಿಯ ತಾಳೂರ ರಸ್ತೆಯ ಕುರುವಳ್ಳಿ ಎನ್‌ಕ್ಲೈವ್‌ನಲ್ಲಿ ಸ್ಥಾಪನೆ ಮಾಡಿರುವ ಅಪ್ಪು ಪ್ರತಿಮೆ ಅನಾವರಣಗೊಂಡಿದೆ. ಪುನೀತ ರಾಜಕುಮಾರ ಪ್ರತಿಮೆಯನ್ನ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಲೋಕಾರ್ಪಣೆ ಮಾಡಿದ್ದಾರೆ. ಈ ವೇಳೆ ಪುನೀತ ರಾಜಕುಮಾರ್‌ರನ್ನ ನೆನಪಿಸಿಕೊಂಡು ಬಾವುಕರಾದ ರೆಡ್ಡಿ. ಅಪ್ಪು ಜೊತೆಗೆ ತಮ್ಮಗಿದ್ದ ಒಡನಾಟ ವಿವರಿಸಿದ್ರು. ಪುನೀತ ರಾಜಕುಮಾರ್ ಮೈಸೂರಿನಲ್ಲಿ ನಡೆಸುತ್ತಿರುವ ಶಕ್ತಿಧಾಮದ ಶಾಖೆಯನ್ನ ಬಳ್ಳಾರಿಯಲ್ಲೂ ಆರಂಭಿಸುವುದಾಗಿ ಘೋಷಣೆ ಮಾಡಿದರು.

ಹಲವರಿಗೆ ಸ್ಪೂರ್ತಿಯಾಗಿದ್ದಾರೆ ಅಪ್ಪು: ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್‍ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಮಾಡಿರುವ ಸಮಾಜಮುಖಿ ಕೆಲಸಗಳು ಮಾದರಿಯಾಗಿವೆ.  ಅಪ್ಪು ಮರೆಯಾದ ಬಳಿಕ ಅವರ ನೆನಪು ಸಾಧನೆಗಳನ್ನ ಅಜರಾಮರಗೊಳಿಸಲು ಕಪ್ಪು ಶಿಲೆಯಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಕುರುವಳ್ಳಿ ಎನ್‌ಕ್ಲೈವ್‌ನಲ್ಲಿ ಜಿ.ಆರ್.ಆರ್.ಡೆವಲಪರ್ ಮುಖ್ಯಸ್ಥ ಸುನೀಲ್ ಕುಮಾರ್ ನಿರ್ಮಿಸಿರುವ ಅಪ್ಪು ಹೆಸರಿನ ಪಾರ್ಕ್‌ನಲ್ಲಿ ಪುನೀತ ಪ್ರತಿಮೆ ಈಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.

7 ಅಡಿ ಎತ್ತರ ಕೃಷ್ಣ ಶಿಲೆಯಲ್ಲಿ ನಿರ್ಮಿಸಿರುವ ಪುನೀತ ಪ್ರತಿಮೆ ಮುಂದೆ ಅಭಿಮಾನಿಗಳು ಸ್ಥಳೀಯರು ಸೆಲ್ಪಿ ಪೋಟೋ ತಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಅಪ್ಪುವನ್ನ ಹತ್ತಿರದಿಂದ ನೋಡಲಾಗದಿದ್ರು ಪುನೀತ ಪ್ರತಿಮೆ ನೋಡಿ ಅಭಿಮಾನಿಗಳು ಅಪ್ಪುವನ್ನ ಸ್ಮರಿಸುತ್ತಿದ್ದಾರೆ. ಅಪ್ಪು ಪ್ರತಿಮೆ ಅನಾವರಣ ಸಮಾರಂಭದಲ್ಲಿ ಭಾಗಿಯಾಗಿದ್ದ ಶಾಸಕ ಸೋಮಶೇಖರರೆಡ್ಡಿ ರಾಜ್ ಕುಟುಂಬದ ಜೊತೆಗಿದ್ದ ಒಡನಾಟವನ್ನ ಸ್ಮರಿಸಿದ್ರು. ಕೆಎಂಎಫ್ ರಾಯಭಾರಿಯಾಗಿದ್ದ ಅಪ್ಪುವಿನ ಸರಳತೆ ಗುಣಗಾನ ಮಾಡಿದ್ರು ಅಪ್ಪು ನಮ್ಮಗೆಲ್ಲರಿಗೂ ಆದರ್ಶವಾಗಿದ್ದಾರೆಂದು ಸ್ಮರಿಸಿದರು.

ಬೆಂಗಳೂರಿನ ಮೊದಲ ಸ್ಟೀಲ್ ಫ್ಲೈ ಓವರ್ ಗೆ ಪುನೀತ್ ಹೆಸರಿಡುವಂತೆ ಒತ್ತಾಯ

ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು: ಪುನೀತ್ ರಾಜ್‍ಕುಮಾರ್ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಮೇಲಿನ ಅಭಿಮಾನ ಪ್ರೀತಿ ಗೌರವ ಇನ್ನೂ ಅಭಿಮಾನಿಗಳ ಮನಸ್ಸಿನಿಂದ ಮಾಸಿಲ್ಲ. ಹೀಗಾಗಿ ಹಳ್ಳಿ ಹಳ್ಳಿ ಊರು ಊರುಗಳಲ್ಲಿ ಪುನೀತ ಪ್ರತಿಮೆ ಅನಾವರಣಗೊಳ್ಳುತ್ತಿವೆ. ಇನ್ನೂ ಪ್ರತಿಮೆ ಮುಂದೆ ಸೆಲ್ಪಿ ತೆಗೆದುಕೊಳ್ಳುವ ಮೂಲಕ ಅಭಿಮಾನಿಗಳು ಸಂಭ್ರಮಿಸಿದರು.

click me!