ಅರ್ಚಕರೊಬ್ಬರು ದೇವಸ್ಥಾನದಲ್ಲಿ ಆಂಜನೇಯ ಮೂರ್ತಿ ತಲೆ ಮೇಲೆ ಕಾಲಿಟ್ಟು ಅಭಿಷೇಕ ಪೂಜೆ ಮಾಡಿದ ಘಟನೆಯೊಂದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಘಟನೆ ನಡೆದಿದೆ. ಅರ್ಚಕನ ವರ್ತನೆಗೆ ಸಾರ್ವಜನಿಕರಿಂದಲು ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್, ದಾವಣಗೆರೆ
ದಾವಣಗೆರೆ (ಅ.26): ಅರ್ಚಕರೊಬ್ಬರು ದೇವಸ್ಥಾನದಲ್ಲಿ ಆಂಜನೇಯ ಮೂರ್ತಿ ತಲೆ ಮೇಲೆ ಕಾಲಿಟ್ಟು ಅಭಿಷೇಕ ಪೂಜೆ ಮಾಡಿದ ಘಟನೆಯೊಂದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಘಟನೆ ನಡೆದಿದೆ. ಅರ್ಚಕನ ವರ್ತನೆಗೆ ಸಾರ್ವಜನಿಕರಿಂದಲು ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ ಕತ್ತಿಗೆ ಗ್ರಾಮದ ಅರ್ಚಕ ಮಹೇಶ್ವರಯ್ಯ ಈ ರೀತಿ ಸಾಂಪ್ರದಾಯ ಮಾಡಿ ಟೀಕೆಗೆ ಒಳಗಾಗಿದ್ದಾರೆ.
ಶಿಕಾರಿಪುರ ತಾಲ್ಲೂಕು ಬಳ್ಳೂರು ಗ್ರಾಮದ ಆಂಜನೇಯ ಸ್ವಾಮೀ ದೇವಸ್ಥಾನದಲ್ಲಿ ಮೂರ್ತಿ ಮೇಲೆ ಕಾಲಿಟ್ಟು ಅರ್ಚಕ ಮಹೇಶ್ವರ ಪೂಜೆ ಸಲ್ಲಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಘಟನೆ ನಡೆದಿದೆ. ಬೇಡರ ಕಣ್ಣಪ್ಪ ಶಿವನಿಗೆ ಒಂದು ಕಣ್ಣು ದಾನ ಕೊಟ್ಟು ಇನ್ನೊಂದು ಕಣ್ಣು ಕೊಡಲು ಶಿವಲಿಂಗದ ಮೇಲೆ ಕಾಲಿಟ್ಟಂತೆ ಆಂಜನೇಯ ಸ್ವಾಮೀ ತಲೆ ಮೇಲೆ ಕಾಲಿಟ್ಟಿ ಮಹೇಶ್ವರಯ್ಯನ ವಿಡಿಯೋ ಪುಲ್ ವೈರಲ್ ಆಗಿದೆ.
Davanagere: ಸಾಮಾಜಿಕ ಜಾಲತಾಣಗಳಲ್ಲಿ ಕಿರಿಕಿರಿ ಮಾಡುತ್ತಿದ್ದ ಮೂವರ ಬಂಧನ
ಮಹೇಶ್ವರಯ್ಯ ಆಂಜನೇಯ ಮೂರ್ತಿ ಮೇಲೆ ಕಾಲಿಟ್ಟಿದ್ದು ಏಕೆ?: ಮಹೇಶ್ವರಯ್ಯ ಮೂಲತಃ ಕತ್ತಿಗೆ ಗ್ರಾಮದವರಾಗಿದ್ದು ಜಂಗಮರಾಗಿದ್ದು ಭಿನ್ನ ತೀರಿಸುವುದು ,ಪುರೋಹಿತ ಕೆಲಸವನ್ನು ಮಾಡುತ್ತಾರೆ. ಬಳ್ಳೂರಿನಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಅಯ್ಯಪ್ಪಸ್ವಾಮಿ ಅರ್ಚಕ ನಾಗರಾಜ ಎಂಬುವರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಅಯ್ಯಪ್ಪ ಸ್ವಾಮಿ ದೇಗುಲ ಆಂಜನೇಯ ಸ್ವಾಮಿ ದೇವಾಲಯ ಅಕ್ಕಪಕ್ಕ ಇದೆ. ಆ ಕಾರಣಕ್ಕೆ ಅರ್ಚಕ ನಾಗರಾಜ್ ಅಸಹಜ ಸಾವಿನಿಂದ ಇಡೀ ಗುಡಿಯ ಆವರಣದಲ್ಲಿ ಸೂತಕದ ಛಾಯೆ ಇದ್ದು ಮೂರ್ತಿಗೆ ಪಂಚಾಮೃತ ಅಭಿಷೇಕದ ಮೂಲಕ ಶುದ್ಧೀಕರಣ ಮಾಡಲಾಗಿದೆ. ಶುದ್ಧೀಕರಣಕ್ಕೆ ಮಹೇಶ್ವರಯ್ಯರನ್ನು ಕರೆಸಿಕೊಂಡು ಪೂಜೆ ಸಲ್ಲಿಸಿ ಅಭಿಷೇಕ ಮಾಡಿಸುವ ಸಂದರ್ಭದಲ್ಲಿ ಆಂಜನೇಯ ಸ್ವಾಮಿ ಅರ್ಚಕನ ಕೋರಿಕೆಯಂತೆ ಹನುಮಂತ ನ ವಿಗ್ರಹದ ಮೇಲೆ ಮಹೇಶ್ವರಯ್ಯ ಪಾದ ಇಟ್ಟು ಅರ್ಚನೆ ಸಲ್ಲಿಸಿದ್ದಾರೆ. ಈ ವಿಡಿಯೋ ವೈರಲ್ ಆದ ನಂತರ ವಿಪರೀತ ಟೀಕೆಗಳು ವ್ಯಕ್ತವಾಗಿವೆ.
ಕ್ಷಮೆಯಾಚಿಸಿ ನನ್ನಿಂದ ತಪ್ಪಾಗಿದೆ ಎಂದ ಆಂಜನೇಯ ಮೂರ್ತಿ ಮೇಲೆ ಕಾಲಿಟ್ಟ ಅರ್ಚಕ ಮಹೇಶ್ವರಯ್ಯ ಸ್ವಾಮಿ: ಆಂಜನೇಯ ಸ್ವಾಮೀ ಮೂರ್ತಿಯ ಮೇಲೆ ಕಾಲಿಟ್ಟು ಪೂಜೆ ಮಾಡಿದ್ದ ಮಹೇಶ್ವರಯ್ಯ ಸ್ವಾಮೀ ಸುವರ್ಣನ್ಯೂಸ್‌ನಲ್ಲೇ ಕ್ಷಮೆಯಾಚಿಸಿದ್ದಾರೆ. ಈ ಹಿಂದೆ ಅದೊಂದು ಸಂಪ್ರದಾಯ ಇತ್ತು. ಆದ್ರೆ ಈಗ ಇಲ್ಲ ನನ್ನದು ತಪ್ಪಾಗಿದೆ ಎಂದು ವಿಡಿಯೋ ಹೇಳಿಕೆ ನೀಡಿದ್ದಾರೆ. ಏಷ್ಯಾನೆಟ್ ಸುವರ್ಣನ್ಯೂಸ್‌ನಲ್ಲಿ ಸುದ್ದಿ ಪ್ರಸಾರವಾಗಿದ್ದ ವೇಳೆ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದ ಮಹೇಶ್ವರಯ್ಯ ತುಂಬಾ ಭಕ್ತರ ಮನಸ್ಸಿಗೆ ನೋವಾಗಿದೆ ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎಂದಿದ್ದಾರೆ.
ಶಾಸಕ ರೇಣುಕಾಚಾರ್ಯ ಸಮ್ಮುಖ ಬಿಜೆಪಿ ಸೇರ್ಪಡೆಯಾದ ಮುಸ್ಲಿಮರು
ದೇವರ ಮೇಲೆ ಕಾಲಿಟ್ಟು ಅಭಿಷೇಕ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಸಾರ್ವಜನಿಕರು ಆಕ್ರೋಶಕೊಂಡು ಪೋನ್ ಮೇಲೆ ಪೋನ್ ಮಾಡಿದ್ದಾರೆ. ತಪ್ಪು ಅರಿವಾದ ಮಹೇಶ್ವರಯ್ಯ ಇನ್ನು ಮುಂದೆ ಹಾಗೆ ಮಾಡುವುದಿಲ್ಲ ಎಂದು ಕ್ಷಮೆಯಾಚಿಸಿದ್ದಾರೆ. ಈ ಹಿಂದೆ ಅಂತಹದೊಂದು ಸಂಪ್ರದಾಯ ಇತ್ತು ಎಂದು ನಮ್ಮ ಗುರುಗಳು ಹೇಳುತ್ತಿದ್ದರು. ಹೊಸ ಮೂರ್ತಿಗಳಿಗೆ ಜೀವ ಕೊಡುವ ಸಂದರ್ಭಗಳಲ್ಲಿ, ಮೂರ್ತಿ ಶುದ್ಧೀಕರಣ ಸಂದರ್ಭದಲ್ಲಿ ಆ ರೀತಿ ಮಾಡುತ್ತಿದ್ದರಂತೆ ಆದ್ರೆ ಇತ್ತಿಚೆಗೆ ಅಂತಹ ಆಚರಣೆ ಇಲ್ಲ. ನಾನು ಯಾವತ್ತು ಆ ರೀತಿ ಮಾಡುವುದಿಲ್ಲ. ಹಿಂದೂಗಳ ಭಾವನೆಗೆ ಧಕ್ಕೆ ತಂದ ನೋವು ಇದೆ ಸಮಾಜದಲ್ಲಿ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.