ಕಾರ್ಮಿಕರ ರಕ್ತ ತೆಗೆದು ಸಿಎಂ ಭಾವಚಿತ್ರಕ್ಕೆ ಹಾಕಿ ರಕ್ತಕ್ರಾಂತಿ : ಇಬ್ಬರು ಅರೆಸ್ಟ್

Suvarna News   | Asianet News
Published : Sep 27, 2020, 03:36 PM ISTUpdated : Sep 27, 2020, 05:08 PM IST
ಕಾರ್ಮಿಕರ ರಕ್ತ ತೆಗೆದು ಸಿಎಂ ಭಾವಚಿತ್ರಕ್ಕೆ ಹಾಕಿ ರಕ್ತಕ್ರಾಂತಿ : ಇಬ್ಬರು ಅರೆಸ್ಟ್

ಸಾರಾಂಶ

ಶಿವಮೊಗ್ಗದ ಸಿಮ್ಸ್ ನ ಮುಂಭಾಗದಲ್ಲಿ ಹೊರಗುತ್ತಿಗೆ ನೌಕರರ ಪರವಾಗಿ ಧರಣಿ ಕುಳಿತಿದ್ದ ವಿನಯ್ ರಾಜಾವತ್ ಹಾಗೂ ವೆಂಕಟೇಶ್ ಎಂಬುವರಿಬ್ಬರನ್ನು ಬಂಧಿಸಲಾಗಿದೆ. 

ಶಿವಮೊಗ್ಗ (ಸೆ.27) :  ಸಿಮ್ಸ್ ಹೊರಗುತ್ತಿಗೆ ನೌಕರರ ಪ್ರತಿಭಟನೆ ವೇಳೆ ಆತ್ಮಹತ್ಯೆ ಗೆ ಪ್ರಚೋದನೆ ನೀಡಿದ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. 

ಶಿವಮೊಗ್ಗದ ಸಿಮ್ಸ್ ನ ಮುಂಭಾಗದಲ್ಲಿ ಹೊರಗುತ್ತಿಗೆ ನೌಕರರ ಪರವಾಗಿ ಧರಣಿ ಕುಳಿತಿದ್ದ ವಿನಯ್ ರಾಜಾವತ್ ಹಾಗೂ ವೆಂಕಟೇಶ್ ಎಂಬುವರಿಬ್ಬರನ್ನು ಬಂಧಿಸಲಾಗಿದೆ. 

ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.  ಬಂಧಿತರ ವಿರುದ್ಧ ಆತ್ಮಹತ್ಯೆಗೆ ಪ್ರಚೋಧನೆ (ಸೆಕ್ಷನ್ 306), 353, ಸಾಂಕ್ರಾಮಿಕ ರೋಗ ಹರಡುವಿಕೆ ಕಾಯ್ದೆ 268,270 ಹಾಗೂ 288  ಅಡಿಯಲ್ಲಿ ಬಂಧಿಸಲಾಗಿದೆ.

ಕಳೆದ ಸೋಮವಾರ ಸೆ.21 ರಿಂದ ಸಿಮ್ಸ್ ನ ಹೊರಗುತ್ತಿಗೆ ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿಮ್ಸ್ ನ ಮುಂಭಾಗದಲ್ಲಿ ಧರಣಿ ನಡೆಸಿದ್ದರು

8 ಸಂಸದರ ಅಮಾನತು : ಹಿಂಪಡೆಯಲು ಆಗ್ರಹ ..

ಗುರುವಾರ ಸಿಎಂ ಬಿಎಸ್ ವೈ, ಸಂಸದ ಬಿ.ವೈ.ರಾಘವೇಂದ್ರ ಸಚಿವ ಈಶ್ವರಪ್ಪರವರ ಭಾಚಿತ್ರಕ್ಕೆ ಹೊರಗುತ್ತಿಗೆ ನೌಕರರ ರಕ್ತ ತೆಗೆದು ರಕ್ತಕ್ರಾಂತಿಗೆ ಮುಂದಾಗಿದ್ದರು.

 ರಾಜಾವತ್ ಸರ್ಕಾರದ ವತಿಯಿಂದ ಯಾರು ಸಂಧಾನಕ್ಕೆ ಬಾರದಿದ್ದರೆ ಧರಣಿ ನಿರತ ಹೊರಗುತ್ತಿಗೆ ನೌಕರರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೆ ನೀಡಿದ್ದರು.
 
ಈ ಹಿನ್ನಲೆಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು. ಇದೀಗ ಅರೆಸ್ಟ್ ಮಾಡಲಾಗಿದೆ.

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ