8 ಸಂಸದರ ಅಮಾನತು : ಹಿಂಪಡೆಯಲು ಆಗ್ರಹ

By Kannadaprabha News  |  First Published Sep 27, 2020, 3:09 PM IST

ಎಂಟು ಮಂದಿ ಸಂಸದರ ಅಮಾನತು ಮಾಡಲಾಗಿದ್ದು, ಇದಕ್ಕೆ ಅಸಮಾಧಾನ ಹೊರಹಾಕಿ ಅಮಾನತು ವಾಪಸ್ ಪಡೆಯಲು ಆಗ್ರಹಿಸಲಾಗಿದೆ. 


ಶಿವಮೊಗ್ಗ (ಸೆ.27): ಕೃಷಿ ಮಸೂದೆ ವಿರೋಧಿಸಿದ ಸಂಸದರನ್ನು ಅಮಾನತುಗೊಳಿಸಿರುವ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ಶುಕ್ರವಾರ ಆಮ್‌ ಆದ್ಮಿ ಪಾರ್ಟಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಅಸಾಂವಿಧಾನಿಕ ರೀತಿಯಲ್ಲಿ ರೈತರಿಗೆ ಸಂಬಂಧಿಸಿದ ಕೃಷಿ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಿರುವುದು ಸರಿಯಲ್ಲ. ಪ್ರಜಾಪ್ರಭುತ್ವ ಮೌಲ್ಯಗಳು ಉಳಿಯಬೇಕು. ಸಂಸದೀಯ ಸಂಪ್ರದಾಯಗಳನ್ನು ಉಳಿಸುವ ಜವಾಬ್ದಾರಿ ರಾಷ್ಟ್ರಪತಿಗಳಾದ ತಮ್ಮ ಮೇಲಿದೆ ಎಂದು ಮನವಿಯಲ್ಲಿ ಪ್ರತಿಪಾದಿಸಿದ್ದಾರೆ.

Tap to resize

Latest Videos

ಅಕ್ಟೋಬರ್ ಮೊದಲ ವಾರ ಸಚಿವ ಸಿ.ಟಿ.ರವಿ ರಾಜೀನಾಮೆ ? ..

ಮಸೂದೆ ಕುರಿತು ಪ್ರಶ್ನೆ ಮಾಡಿದ ಅಮ್‌ಆದ್ಮಿ ಪಕ್ಷದ ಸಂಸದರಾದ ಸಂಜಯ್‌ ಸಿಂಗ್‌ ಸೇರಿ 8 ಸದಸ್ಯರನ್ನು ಸಂಸತ್‌ ನಿಂದ ಒಂದು ವಾರ ಅಮಾನತು ಗೊಳಿಸಿರುವುದು ಒಳ್ಳೆಯ ನಡೆಯಲ್ಲ. ಇದು ಸರ್ಕಾರದ ಸರ್ವಾಧಿಕಾರಿ ವರ್ತನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಕಾರಣಕ್ಕೂ ರೈತ ಮಸೂದೆಗಳನ್ನು ಅಂಗೀಕರಿಸಬಾರದು, ಸಂಸದರನ್ನು ಅಮಾನತುಗೊಳಿಸಿರುವ ಆದೇಶವನ್ನು ರದ್ದು ಮಾಡುವಂತೆ ರಾಜ್ಯಸಭೆ ಸಭಾಧ್ಯಕ್ಷರಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು. ಅಮ್‌ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್‌.ರವಿಕುಮಾರ್‌, ದಿನೇಶ್‌, ಸುರೇಶ್‌ ಬಿ.ಕೋಟೇಕರ್‌ ಸೇರಿದಂತೆ ಹಲವರಿದ್ದರು.

click me!