ಕೆ ಸೆಟ್ ಪರೀಕ್ಷೆ ಬರೆಯಲು ಹೊರಟಿದ್ದವನ ಬೈಕ್‌ಗೆ ನೀರು ತುಂಬಿದ ಸಿಬ್ಬಂದಿ: ಪರೀಕ್ಷಾರ್ಥಿಯ ಪರದಾಟ

By Suvarna News  |  First Published Sep 27, 2020, 3:33 PM IST

ಕೆ.ಸೆಟ್ ಪರೀಕ್ಷೆ ಬರೆಯಲು ಹೊರಟಿದ್ದ ವಿದ್ಯಾರ್ಥಿ ಬೈಕ್‌ಗೆ ನೀರು ತುಂಬಿದ ಸಿಬ್ಬಂದಿ| ಯಾದಗಿರಿ ಜಿಲ್ಲೆ ಶಹಾಪುರ ಪಟ್ಟಣದ ಬಳಿ ನಡೆದ ಘಟನೆ| ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೋವು ತೋಡಿಕೊಂಡ ಪರೀಕ್ಷಾರ್ಥಿ|  


ಯಾದಗಿರಿ(ಸೆ.27): ಪೆಟ್ರೋಲ್ ಬಂಕ್ ಸಿಬ್ಬಂದಿ ಮಾಡಿದ ಯಡವಟ್ಟಿನಿಂದ ಕೆ ಸೆಟ್ ಪರೀಕ್ಷೆ ಬರೆಯಲು ಸಾಧ್ಯವಾಗದೆ ಪರೀಕ್ಷಾರ್ಥಿ ಪರದಾಡಿದ ಘಟನೆ ಜಿಲ್ಲೆ ಶಹಾಪುರ ಪಟ್ಟಣದ ಬಳಿ ಇಂದು(ಭಾನುವಾರ) ನಡೆದಿದೆ. ತಿಪ್ಪಣ್ಣ ಎಂಬುವರೇ ಕೆ ಸೆಟ್ ಪರೀಕ್ಷೆಯಿಂದ ವಂಚಿತರಾದ ಪರೀಕ್ಷಾರ್ಥಿಯಾಗಿದ್ದಾರೆ.

ಇಂದು ಕಲಬುರಗಿಲ್ಲಿ ಕೆ ಸೆಟ್ ಪರೀಕ್ಷೆ ಇತ್ತು. ಹೀಗಾಗಿ ತಿಪ್ಪಣ್ಣ ಅವರು ತಮ್ಮ ಬೈಕಿನಲ್ಲಿ ಕಲಬುರಗಿಗೆ ಹೊರಡುವ ಸಂಬಂಧ ಮಂಡಗಳ್ಳಿ ಸಮೀಪದ ಇಂಡಿಯನ್ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್‌ ಹಾಕಿಸಿದ್ದಾರೆ. ಆದರೆ, ಬಂಕ್ ಸಿಬ್ಬಂದಿ ಪೆಟ್ರೋಲ್ ಹಾಕುವ ಬದಲಿಗೆ ನೀರು ತುಂಬಿ ಕಳಿಸಿದ್ದಾರೆ. ಹೀಗಾಗಿ ಬೈಕ್‌ ಸ್ಟಾರ್ಟ್ ಆಗದೆ ತಿಪ್ಪಣ್ಣ ಅವರು ಪರೀಕ್ಷೆಗೆ ಹೋಗಲು ಸಾಧ್ಯವಾಗಿಲ್ಲ. 

Latest Videos

undefined

ಯಾದಗಿರಿ: ಭಾರೀ ಮಳೆ, ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ

ಕೆ ಸೆಟ್‌ ಪರೀಕ್ಷೆ ಕೈತಪ್ಪಿದ್ದರಿಂದ ತಿಪ್ಪಣ್ಣ ನಿಂದ ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ತಮ್ಮ ನೋವನ್ನ ತೋಡಿಕೊಂಡಿದ್ದಾನೆ.  ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಪೆಟ್ರೋಲ್, ಡೀಸೆಲ್ ಟ್ಯಾಂಕ್‌ನಲ್ಲಿ ನೀರು ಸೇರಿಕೊಂಡಿದೆ. ಇದನ್ನ ಪರೀಕ್ಷಿಸಿದೆ ಬಂಕ್‌ಗೆ ಬಂದ ಎಲ್ಲ ವಾಹನಗಳಿಗೆ ನೀರು ಮಿಶ್ರಿತ ತೈಲವನ್ನ ತುಂಬಿಸಿದ್ದಾರೆ. ಹೀಗಾಗಿ ಬೈಕ್, ಕಾರು  ಸೇರಿದಂತೆ ಇತರ ವಾಹನಗಳ ಜಾಮ್ ಆಗಿ, ಕೆಟ್ಟ ನಿಲ್ಲುತ್ತಿವೆ. ಬಂಕ್ ಮಾಲೀಕನ ನಿರ್ಲಕ್ಷ್ಯಕ್ಕೆ ಭವಿಷ್ಯದ ಬಗ್ಗೆ ಕಣಸು ಕಂಡಿದ್ದ ತಿಪ್ಪಣ್ಣ ಪರದಾಡಿದ್ದಾರೆ. 
 

click me!