ವೇಶ್ಯವಾಟಿಕೆ ದಂಧೆ: ಮೂವರು ಬಾಂಗ್ಲಾ ಪ್ರಜೆಗಳ ಅರೆಸ್ಟ್

Kannadaprabha News   | Asianet News
Published : Jan 24, 2020, 07:42 AM IST
ವೇಶ್ಯವಾಟಿಕೆ ದಂಧೆ: ಮೂವರು ಬಾಂಗ್ಲಾ ಪ್ರಜೆಗಳ ಅರೆಸ್ಟ್

ಸಾರಾಂಶ

ವೇಶ್ಯವಾಟಿಕೆ ದಂಧೆಯಲ್ಲಿ ತೊಡಗಿದ್ದ ಮೂವರು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಅಕ್ರಮವಾಗಿ ಯುವತಿಯರನ್ನಿಟ್ಟಿಕೊಂಡು ವೇಶ್ಯವಾಟಿಕೆ ನಡೆಸುತ್ತಿದ್ದರೆನ್ನಲಾಗಿದೆ.

ಬೆಂಗಳೂರು [ಜ.24]:  ಬಾಗಲೂರು ಸಮೀಪ ಮನೆಯೊಂದರ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಬಾಂಗ್ಲಾದೇಶದ ಪ್ರಜೆ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಚನ್ನಸಂದ್ರದ ಅಶ್ರಫ್‌ ಮಂಡಲ್‌, ಬಾಂಗ್ಲಾದೇಶದ ಮೊಹಮ್ಮದ್‌ ಹುಸೇನ್‌ ಹಾಗೂ ದೆಹಲಿ ಮೂಲದ ಮಹಿಳೆ ಬಂಧಿತಳಾಗಿದ್ದು, ಈ ವೇಳೆ ಇಬ್ಬರು ಮಹಿಳೆಯರನ್ನು ಸಹ ರಕ್ಷಿಸಲಾಗಿದೆ.

ಬೆಂಗಳೂರು: ಬೌನ್ಸ್‌ನಲ್ಲಿ ಬಂದಿದ್ದವರು 3 ಲಕ್ಷ ರೂ. ದೋಚಿದ್ರು, ಆಮೇಲೆ!...

ಹಲವು ತಿಂಗಳಿಂದ ಬಾಂಗ್ಲಾದೇಶದಿಂದ ಕೆಲಸ ಕೊಡಿಸುವ ನೆಪದಲ್ಲಿ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆಗೆ ಆರೋಪಿಗಳು ತಳ್ಳಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಬುಧವಾರ ರಾತ್ರಿ ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಂಡೋಮ್ ಬಳಸಲ್ಲ ಎಂದಿದ್ದಕ್ಕೆ ಸೆಕ್ಸ್ ನಿರಾಕರಿಸಿದ್ಲು : ಕೊಂದೇ ಬಿಟ್ಟ ಪಾಪಿ...

ಒಂದು ವರ್ಷದ ಅವಧಿಯಲ್ಲಿ ಬಾಂಗ್ಲಾದೇಶದಿಂದ ಇಬ್ಬರು ಯುವತಿಯರನ್ನು ಹುಸೇನ್‌ ಅಕ್ರಮವಾಗಿ ಕರೆ ತಂದಿರುವ ಬಗ್ಗೆ ಗೊತ್ತಾಗಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಮತ್ತಷ್ಟುಮಾಹಿತಿ ಸಿಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!