ಮಂಗಳೂರಿನಲ್ಲಿ ಬಾಂಬ್ ಪ್ರಕರಣ ನಡೆದ ಬೆನ್ನಲ್ಲೇ ಕೊಡಗಿನಲ್ಲಿ ಭದ್ರತಾ ದೃಷ್ಟಿಯಿಂದ ಹೊರಗಿನಿಂದ ಬಂದ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಸುಮಾರು 5000 ಕಾರ್ಮಿಕರ ದಾಖಲೆಗಳನ್ನು ಶುಕ್ರವಾರ ಪರಿಶೀಲಿಸಿದ್ದಾರೆ. ಒರಿಜಿನಲ್ ಡಾಕ್ಯುಮೆಂಟ್ ನೀಡದವರು ಜಿಲ್ಲೆ ಬಿಡುವಂತಿಲ್ಲ ಎಂದು ಕೊಡಗು ಎಸ್ಪಿ ಡಾ. ಸುಮನ್ ಪನ್ನೇಕರ್ ಹೇಳಿದ್ದಾರೆ.
ಮಡಿಕೇರಿ(ಜ.24): ಜಿಲ್ಲೆಯಾದ್ಯಂತ ಗುರುವಾರ ನಡೆದ ವಲಸಿಗ ಕಾರ್ಮಿಕರ ದಾಖಲಾತಿ ಪರಿಶೀಲನೆಯಲ್ಲಿ, ಸುಮಾರು 5 ಸಾವಿರ ಕಾರ್ಮಿಕರು ದಾಖಲೆಗಳನ್ನು ಹಾಜರುಪಡಿಸಿದ್ದಾರೆ.
ಆದರೆ, 500 ಮಂದಿ ಅಪೂರ್ಣ ದಾಖಲೆಗಳನ್ನು ನೀಡಿದ್ದು, ಇವರು ನೈಜ ದಾಖಲೆ ಹಾಜರುಪಡಿಸುವವರೆಗೂ ಜಿಲ್ಲೆಯಿಂದ ಹೊರಹೋಗುವಂತಿಲ್ಲ. ಈ ಬಗ್ಗೆ ಆಯಾ ತೋಟ ಮಾಲೀಕರಿಗೆ ಸೂಚನೆ ನೀಡಲಾಗಿದೆ ಎಂದು ಕೊಡಗು ಎಸ್ಪಿ ಡಾ. ಸುಮನ್ ಪನ್ನೇಕರ್ ಹೇಳಿದ್ದಾರೆ. ದಾಖಲೆ ಪರಿಶೀಲನೆಗೂ ಪೌರತ್ವ ಅಥವಾ ಎನ್‌ಆರ್‌ಸಿ ಕಾಯ್ದೆಗೂ ಸಂಬಂಧವಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.
ಬಾಂಬ್ ತಯಾರಿ ಬಗ್ಗೆ ರಿಸರ್ಚ್ ಮಾಡಿದ್ದ ಆದಿತ್ಯ, ಟೆಕ್ನಿಕಲಿ ಎಕ್ಸ್‌ಪರ್ಟ್
ಕೊಡಗು ಜಿಲ್ಲೆಯ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಹೊರರಾಜ್ಯಗಳ ವಲಸೆ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ದಾಖಲೆ ನೀಡದವರು ಯಾವುದೇ ಕಾರಣಕ್ಕು ಜಿಲ್ಲೆಯಿಂದ ಹೊರಹೋಗುವಂತಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ್ ಹೇಳಿದ್ದಾರೆ.
ತಮ್ಮ ಕಚೇರಿಯಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ, ಅಸ್ಸಾಂ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ್ ಮತ್ತಿತರ ರಾಜ್ಯಗಳ ಸುಮಾರು 5 ಸಾವಿರ ಮಂದಿ ತಮ್ಮ ದಾಖಲೆಗಳನ್ನು ಹಾಜರುಪಡಿಸಿದ್ದು, 500 ಮಂದಿ ಅಪೂರ್ಣದಾಖಲೆ ಸಲ್ಲಿಸಿದ್ದಾರೆ. ಮುಂದಿನ ಒಂದು ವಾರದೊಳಗೆ ಅಂಥವರು ಪರಿಪೂರ್ಣ ದಾಖಲೆ ಒದಗಿಸಲು, ಆಯಾ ತೋಟ ಮಾಲೀಕರಿಗೆ ಸೂಚನೆ ನೀಡಲಾಗಿದೆ. ದಾಖಲೆಗಳ ಪರಿಶೀಲನಾ ಕಾರ್ಯ ಮುಂದುವರಿಸಲಿದೆ ಎಂದು ಹೇಳಿದ್ದಾರೆ.
'ಸಿಂಗಲ್ ಹ್ಯಾಂಡ್ ಆಪರೇಷನ್ ಏರ್ಪೋರ್ಟ್', ಬಾಂಬ್ ತಯಾರಿಕೆಗೆ ಬಳಸಿದ್ದು 100 ಸಾಮಾಗ್ರಿ
ಅನ್ಯರಾಜ್ಯಗಳಿಂದ ಬಂದ ಕಾಫಿ ತೋಟ ಕಾರ್ಮಿಕರು, ರೆಸಾರ್ಟ್ ಮತ್ತು ಕಟ್ಟಡ ಕಾರ್ಮಿಕರು ಜಿಲ್ಲೆಯಲ್ಲಿ ನೆಲೆಸಿದ್ದು, ಇವರಿಂದ ಹಿಂದೆ ಅಪರಾಧ ಪ್ರಕರಣಗಳು ನಡೆದಿವೆ. ಕೆಲವರಲ್ಲಿ ದಾಖಲಾತಿ ಇಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಮೂರು ತಾಲೂಕುಗಳಲ್ಲೂ ದಾಖಲೆ ಪರಿಶೀಲನೆ ಮಾಡಲಾಗಿದೆ. ಈ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ ಸತ್ಯಾಸತ್ಯತೆ ತಿಳಿದುಕೊಳ್ಳಲಾಗುವುದು. ಇದು ಇಲಾಖೆಗೆ ಡಾಕ್ಯುಮೆಂಟರಿಯಾಗಲಿದ್ದು, ಇತರೆ ಅಪರಾಧ ಪತ್ತೆಗೂ ಸಹಕಾರಿಯಾಗಲಿದೆ. ಕೆಲವರು ನೀಡಿದ ಶಿಕ್ಷಣದ ದಾಖಲೆ ಮತ್ತು ಜೆರಾಕ್ಸ್ ಪ್ರತಿಗಳನ್ನು ಪರಿಶೀಲನೆಗೆ ಕಾಯ್ದಿರಿಸಲಾಗಿದೆ ಎಂದು ಡಾ. ಸುಮನ್ ಹೇಳಿದ್ದಾರೆ.
ಬೆಳ್ಳಂಬೆಳಗ್ಗೆ SSLC ಮಕ್ಕಳ ಮನೆಗಳಿಗೆ ಶಾಸಕ ಭೇಟಿ..!
ಅಸ್ಸಾಂ ಮತ್ತಿತರ ರಾಜ್ಯಗಳಿಂದ ಬಂದವರ ಬಗ್ಗೆ ಜನರಲ್ಲಿ ಗೊಂದಲ ಮತ್ತು ಭಯವಿರುವ ಹಿನ್ನೆಲೆಯಲ್ಲಿ ಮತ್ತು ಗಣರಾಜ್ಯೋತ್ಸವದ ಭದ್ರತೆ ಹಿನ್ನೆಲೆಯಲ್ಲಿ ದಾಖಲೆ ಪರಿಶೀಲನೆ ನಡೆದಿದ್ದು, ಇದಕ್ಕೂ ಎನ್‌ಆರ್‌ಸಿ ಅಥವಾ ಪೌರತ್ವ ತಿದ್ದುಪಡಿ ಕಾಯ್ದೆಗೂ ಸಂಬಂಧವಿಲ್ಲ ಎಂದು ಎಸ್ಪಿ ಸ್ಪಷ್ಟನೆ ನೀಡಿದರು.
ತೋಟ ಮಾಲೀಕರೇ ಸ್ವಂತ ಆಸಕ್ತಿಯಿಂದ ಕಾರ್ಮಿಕರನ್ನು ದಾಖಲೆ ಸಹಿತ ಕರೆತಂದು ಪರಿಶೀಲನೆಗೆ ಸಹಕಾರ ನೀಡಿರುವುದು ಉತ್ತಮ ಬೆಳವಣಿಗೆ ಎಂದು ಎಸ್ಪಿ ಹೇಳಿದ್ದಾರೆ.