ಚಿತ್ರಮಂದಿರ ಬಳಿ ಹಾಕಿದ್ದ ಪಠಾಣ್ ಚಿತ್ರದ ಬ್ಯಾನರ್ ಹರಿದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ಆಗಮಿಸಿದ ಕಾರ್ಯಕರ್ತರನ್ನ ವಶಕ್ಕೆ ಪಡೆದಿದ ಪೊಲೀಸರು.
ಬೆಳಗಾವಿ(ಜ.25): ಬೆಳಗಾವಿಯಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಅಭಿನಯದ ಪಠಾಣ್ ಚಿತ್ರ ಪ್ರದರ್ಶಿಸದಂತೆ ಒತ್ತಾಯಿಸಿ ನಗರದ ಸ್ವರೂಪ ಚಿತ್ರಮಂದಿರ ಮೇಲೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಚಿತ್ರಮಂದಿರ ಬಳಿ ಹಾಕಿದ್ದ ಪಠಾಣ್ ಚಿತ್ರದ ಬ್ಯಾನರ್ ಹರಿದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಯಕರ್ತರನ್ನ ವಶಕ್ಕೆ ಪಡೆದಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಸ್ವರೂಪ ಚಿತ್ರ ಮಂದಿರ ಎದುರು ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಓರ್ವ ಸಿಪಿಐ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಡಿಮೆ ಸೀಟು ಬಂದ್ರೂ ಗುದ್ದಾಡಿ ಬಿಜೆಪಿ ಅಧಿಕಾರಕ್ಕೆ: ರಮೇಶ್ ಜಾರಕಿಹೊಳಿ
ಹಿಂದೂಪರ ಸಂಘಟನೆಯ 30 ಕಾರ್ಯಕರ್ತರ ವಿರುದ್ಧ ದೂರು
ಸ್ವರೂಪ ಚಿತ್ರ ಮಂದಿರ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಯ 30 ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದೆ. ಬೆಳಗಾವಿಯ ಖಡೇಬಜಾರ್ ಠಾಣೆಯಲ್ಲಿ 30 ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದೆ.
ಪಠಾಣ್ ಚಿತ್ರ ಪ್ರದರ್ಶನ ಹಿಂಪಡೆಯಲು ಅಭಯ್ ಪಾಟೀಲ್ ಮನವಿ
ಬೆಳಗಾವಿಯಲ್ಲಿ ಪಠಾಣ್ ಚಿತ್ರ ಪ್ರದರ್ಶನ ಮಾಡದಂತೆ ಹಿಂದೂಪರ ಸಂಘಟನೆಗಳ ಆಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ವಿತರಕರು ಚಿತ್ರ ಪ್ರದರ್ಶನ ಹಿಂಪಡೆಯಲು ಮನವಿ ಮಾಡಿದ್ದಾರೆ. ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ವಯಂಪ್ರೇರಿತವಾಗಿ ಚಿತ್ರ ಪ್ರದರ್ಶನ ಹಿಂಪಡೆಯಲಿ. ಈ ರೀತಿ ಚಿತ್ರಗಳ ಪ್ರದರ್ಶನ ಮೂಲಕ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಆಗುವ ಸ್ಥಿತಿ ಕಂಡುಬಂದಲ್ಲಿ ಚಿತ್ರ ಪ್ರದರ್ಶನ ಹಿಂಪಡೆಯಬೇಕು. ವಿತರಕರೇ ಚಿತ್ರ ಪ್ರದರ್ಶನ ಹಿಂಪಡೆಯಬೇಕು ಎಂದು ಮನವಿ ಮಾಡ್ತೇನೆ ಅಂತ ಹೇಳಿದ್ದಾರೆ.
ಪಠಾಣ್ ಚಿತ್ರ ಪ್ರದರ್ಶನಕ್ಕೆ ವಿರೋಧಿಸಿ ಪ್ರತಿಭಟನೆ ಇವತ್ತು ಪ್ರಾರಂಭವಾಗಿದೆ. ಬಹಳಷ್ಟು ಹೆಣ್ಣುಮಕ್ಕಳು ಸಹ ಪಠಾಣ್ ಚಲನಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವಿತರಕರೇ ಚಿತ್ರ ಪ್ರದರ್ಶನ ಹಿಂದೆ ತಗೆದುಕೊಳ್ಳಬೇಕು ಅಂತ ಆಗ್ರಹಿಸಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರ ಚಿತ್ರ ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಶಾಸಕ ಅಭಯ್ ಪಾಟೀಲ್ ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ಶಿವಾಜಿ ಮಹಾರಾಜರ ಚಿತ್ರ ಪೋಸ್ಟ್ ಮಾಡಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಈ ಸಂಬಂಧ ಬೆಳಗಾವಿ ನಗರ ಪೊಲೀಸ್ ಆಯುಕ್ತರನ್ನ ಭೇಟಿಯಾಗಿ ಮನವಿ ಮಾಡಿದ್ದೇನೆ. ವಿಕೃತಿ ಮೆರೆದ ಕಿಡಿಗೇಡಿಗಳ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಖರ್ಗೆ ಸಿಎಂ ಅವಕಾಶ ತಪ್ಪಿಸಿದ್ದು ಸಿದ್ದರಾಮಯ್ಯ : ಗಂಭೀರ ಆರೋಪ
ರಾಜ್ಯದಲ್ಲಿ ಯುಪಿ ಮಾದರಿ ಕಾಯ್ದೆ ಜಾರಿಗೆ ಶಾಸಕ ಅಭಯ್ ಪಾಟೀಲ್ ಆಗ್ರಹಿಸಿದ್ದಾರೆ. ಸಂಜೆ ನನಗೆ ವಿಷಯ ಗೊತ್ತಾದ ಬಳಿಕ ಪೊಲೀಸ್ ಕಮಿಷನರ್‌ರನ್ನ ಭೇಟಿಯಾಗಿ ಮಾಹಿತಿಯನ್ನ ಒದಗಿಸಿದ್ದೇವೆ. ಶೀಘ್ರವೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಒಂದೆರಡು ಕೇಸ್ ಹಾಕಿ ಬಿಟ್ರೆ ಮತ್ತೆ ಇದೇ ಕೃತ್ಯ ಮುಂದುವರಿಸುತ್ತಾರೆ. ಮತಾಂಧರಿಗೆ ಬುದ್ದಿ ಕಲಿಸಬೇಕಂದ್ರೆ ಉತ್ತರ ಪ್ರದೇಶ ಮಾದರಿಯಲ್ಲಿ ಅವರ ಆಸ್ತಿ ಮುಟ್ಟುಗೋಲು ಹಾಕಬೇಕು. ಮಹಾಪುರುಷರು, ದೇವ ದೇವತೆಗಳ ಚಿತ್ರ ಈ ರೀತಿ ಎಡಿಟ್ ಮಾಡುವ ಕೃತ್ಯ ನಿರಂತರ ನಡೆಯುತ್ತಿವೆ. ಹೀಗಾಗಿ ಉತ್ತರ ಪ್ರದೇಶ ಮಾದರಿಯಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಾಯ್ದೆಯಲ್ಲಿ ಆ ರೀತಿ ಅನಾನೂಕುಲ ಇದ್ರೆ ಕಾಯ್ದೆ ರೂಪಿಸಬೇಕೆಂದು ಸಿಎಂಗೆ ಆಗ್ರಹಿಸುತ್ತೇನೆ ಅಂತ ತಿಳಿಸಿದ್ದಾರೆ.
ಬೆಳಗಾವಿ ಗಡಿಪ್ರದೇಶ ಸೂಕ್ಷ್ಮ ಪ್ರದೇಶ
ಬೆಳಗಾವಿ ರಾಷ್ಟ್ರಕ್ಕೆ ಸಮಾಜಕ್ಕೆ ದುಡಿದ ಮಹನೀಯರ ಬಗ್ಗೆ ವಿಶೇಷವಾದ ಕಾಳಜಿ ಅಭಿಮಾನ ಇರುವಂತಹ ಸ್ಥಳವಾಗಿದೆ. ಹೀಗಾಗಿ ಆರೋಪಿಗಳ ಶೀಘ್ರ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದ ಅಭಯ್ ಪಾಟೀಲ್ ಒತ್ತಾಯಿಸಿದ್ದಾರೆ.