ಕೊಲೆ ಆರೋಪಿ ದರ್ಶನ್‌ಗೆ ಜಾಮೀನು: ನಟನನ್ನು ಭೇಟಿಯಾಗಲು ಬಳ್ಳಾರಿ ಜೈಲಲ್ಲಿ ಕೈದಿಗಳ ಹಠ!

By Girish Goudar  |  First Published Oct 30, 2024, 4:48 PM IST

ದರ್ಶನ್ ಭೇಟಿ ಮಾಡಿಸುವಂತೆ ಜೈಲಿನಲ್ಲಿರು ಕೈದಿಗಳು ಒತ್ತಾಯಿಸುತ್ತಿದ್ದಾರೆ. ದರ್ಶನ್ ನೋಡುವಂತೆ ಕೈದಿಗಳು ಹಠ ಹಿಡಿದ್ದಾರೆ. ಸದ್ಯ ಬಳ್ಳಾರಿ ಜೈಲಿನಲ್ಲಿ 385 ಕೈದಿಗಳಿದ್ದಾರೆ. ಅದರಲ್ಲಿ 10ಕ್ಕೂ ಹೆಚ್ಚು ಕೈದಿಗಳು ದರ್ಶನ್ ಅಭಿಮಾನಿಗಳಿದ್ದಾರೆ.


ಬಳ್ಳಾರಿ/ಚಿತ್ರದುರ್ಗ(ಅ.30):  ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್‌ಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿದೆ. ಹೀಗಾಗಿ ದರ್ಶನ್‌ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಹಾಗೆಯೇ ಬಳ್ಳಾರಿ ಜೈಲಿನಲ್ಲಿರುವ ಕೈದಿಗಳು ದರ್ಶನ್‌ನನ್ನ ಭೇಟಿ ಮಾಡಿಸಲು ಒತ್ತಾಯಿಸಿದ್ದಾರೆ. 

ದರ್ಶನ್ ಭೇಟಿ ಮಾಡಿಸುವಂತೆ ಜೈಲಿನಲ್ಲಿರು ಕೈದಿಗಳು ಒತ್ತಾಯಿಸುತ್ತಿದ್ದಾರೆ. ದರ್ಶನ್ ನೋಡುವಂತೆ ಕೈದಿಗಳು ಹಠ ಹಿಡಿದ್ದಾರೆ. ಸದ್ಯ ಬಳ್ಳಾರಿ ಜೈಲಿನಲ್ಲಿ 385 ಕೈದಿಗಳಿದ್ದಾರೆ. ಅದರಲ್ಲಿ 10ಕ್ಕೂ ಹೆಚ್ಚು ಕೈದಿಗಳು ದರ್ಶನ್ ಅಭಿಮಾನಿಗಳಿದ್ದಾರೆ.

Tap to resize

Latest Videos

undefined

'ಕಾಲಾಯಾ ತಸ್ಮೈ ನಮಃ' ಅಂತ ನಟಿ ರಚಿತಾ ರಾಮ್ ಹೇಳಿದ್ಯಾಕೆ?

ದರ್ಶನ್ ಜೈಲಿಗೆ ಬಂದಾಗಿನಿಂದಲು ದರ್ಶನ್ ನೋಡಲು ಅವಕಾಶ ಕೊಡುವಂತೆ ಕೈದಿಗಳು ಒತ್ತಾಯಿಸಿದ್ದರು. ಈಗ ದರ್ಶನ್ ಹೊರ ಹೋಗುವ ಸುದ್ದಿ ತಿಳಿದು ಕೈದಿಗಳು ಭಾವುಕರಾಗಿದ್ದಾರಂತೆ. ಒಂದು ನಿಮಿಷ ನೋಡಲು ಬಿಡಿ  ಎಂದು ಕೈದಿಗಳು ವಿನಂತಿ ಮಾಡಿಕೊಂಡಿದ್ದಾರೆ. 

ದುರ್ಗಮ್ಮ ದೇಗುಲದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೂಜೆ

ಬಳ್ಳಾರಿ: ದರ್ಶನ್‌ ಷರತ್ತುಬದ್ಧ ಜಾಮೀನು ಸಿಕ್ಕ ಹಿನ್ನಲೆಯಯಲ್ಲಿ ನಗರದ ದುರ್ಗಮ್ಮ ದೇಗುಲದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೂಜೆ ಮಾಡಿಸಿದ್ದಾರೆ. ಅಭಿಮಾನಿಗಳ ಕೂಗಾಟ, ಚೀರಾಟದ ಮಧ್ಯೆ ಒಂದೆರಡು ನಿಮಿಷಗಳ ಕಾಲ ಪೂಜೆ ಮಾಡಿಸಿ ವಿಜಯಲಕ್ಷ್ಮಿ ಹೊರಟಿದ್ದಾರೆ. 

ದುರ್ಗಮ್ಮ ದೇಗುಲದ ಮುಂದೆ ಅಭಿಮಾನಿಗಳ ಸಂಭ್ರಮಾಚರಣೆ

ದರ್ಶನ್ ಗೆ ಬೇಲ್ ಸಿಕ್ಕ ಹಿನ್ನಲೆಯಲ್ಲಿ ಬಳ್ಳಾರಿ ದುರ್ಗಮ್ಮ ದೇಗುಲದ ಮುಂದೆ ಅಭಿಮಾನಿಳು ಸಂಭ್ರಮಾಚರಣೆ ಮಾಡಿದ್ದಾರೆ. ದೀಪಾವಳಿ ಹಬ್ಬದಂದು ದರ್ಶನ್ ಬಿಡುಗಡೆಯಾಗ್ತಿರೋದು ಸಂತೋಷವಾಗಿದೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. 

ನಾವಷ್ಟೇ ಅಲ್ಲ ನಮ್ಮ ಡಿಬಾಸ್ ಕೂಡ ದೀಪಾವಳಿ ಅಚರಣೆ ಮಾಡಲಿದ್ದಾರೆಂದು ದುರ್ಗಮ್ಮ ದೇಗುಲದ ಮುಂದೆ ಅಭಿಮಾನಿಗಳು ದೀಪ ಹಚ್ಚಿದ್ದಾರೆ. D boos ಹೆಸರಲ್ಲಿ ದೀಪ ಹಚ್ಚಿದ್ದಾರೆ.  ದೊಡ್ಡದಾಗಿ ಡಿ ಬಾಸ್ ಎಂದು ಬರೆದು ಡಿ ಬಾಸ್ ಎಂದು ಅಭಿಮಾನಿಗಳು ಕುಗುತ್ತಿದ್ದಾರೆ. 

ಮಧ್ಯಂತರ ಜಾಮೀನು ಸಿಕ್ಕ ಬಳಿಕ ನಟ ದರ್ಶನ್‌ ಆಪ್ತರ ಒಳಮಾತು ಬಹಿರಂಗ!

ಪಟಾಕಿ ಸಿಡಿಸಿ ಸಂಭ್ರಮ

ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಗೆ ಮದ್ಯಂತರ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಪಟ್ಟಿದ್ದಾರೆ. ಚಿತ್ರದುರ್ಗದ ಕನಕ ವೃತ್ತದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಪಟ್ಟಿದ್ದಾರೆ. 

ಚಿತ್ರದುರ್ಗದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲೂ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಪಟ್ಟಿದ್ದಾರೆ. ದರ್ಶನ್ ಭಾವಚಿತ್ರ ಪ್ರದರ್ಶಿಸಿ ಅಭಿಮಾನಿಗಳು ಸಂಭ್ರಮ ಪಟ್ಟಿದ್ದಾರೆ. ಆಟೋ ಚಾಲಕರು ಮತ್ತಿತರೆ ಅಭಿಮಾನಿಗಳು ಸಾರ್ವಜನಿಕರಿಗೆ ಸಿಹಿ ಹಂಚಿ ಹಂಚಿ ಸಂಭ್ರಮಪಟ್ಟಿದ್ದಾರೆ. 

click me!