ಶಿವಮೊಗ್ಗ (ಮೇ.19): ಸೋಂಕು ಹೆಚ್ಚಳವಾಗುತ್ತಿದ್ದು, ಆಂಬ್ಯುಲೆನ್ಸ್ ಎಗ್ಗಿಲ್ಲದೇ ಪಡೆಯುವ ಫೀಸ್ ಹಾವಳಿಗೆ ಇದೀಗ ಶಿವಮೊಗ್ಗದಲ್ಲಿ ಬ್ರೇಕ್ ಬಿದ್ದಿದೆ. ದುಬಾರಿ ಬಾಡಿಗೆ ಸುಲಿಗೆ ತಡೆಯಲು ಹೊಸ ಪ್ಲಾನ್ ಮಾಡಲಾಗಿದೆ.
ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಮಾಫಿಯಾ ನಡೆಯುತ್ತಿದ್ದು ಅದನ್ನು ತಡೆಯಲು ಇದೀಗ ಪೋಲಿಸ್, ಆರ್.ಟಿ.ಒ. ಜಂಟಿಯಾಗಿ ಮಾಫಿಯಾ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಆಂಬುಲೆನ್ಸ್‌ಗಳಿಗೆ ಪ್ರೀಪೇಯ್ಡ್ ವ್ಯವಸ್ಥೆ ಮಾಡಲಾಗಿದೆ.
ಶಿವಮೊಗ್ಗ : ಗುಣಮುಖರಾದ್ರೂ ಆಸ್ಪತ್ರೆಯಿಂದ ಮನೆಗೆ ಹೋಗುತ್ತಿಲ್ಲ ರೋಗಿಗಳು! .
ಮೆಗ್ಗಾನ್‌ನಿಂದ ಕೊರೋನಾ ಸೋಂಕಿತರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗಳಿಗೆ ಕರೆದೊಯ್ಯುವ ವೇಳೆ ಹೆಚ್ಚು ಹಣ ವಸೂಲಿ ಮಾಡುವುದನ್ನು ತಡೆಯಲು ಪ್ರೀಪೇಯ್ಡ್ ವ್ಯವಸ್ಥೆ ಮಾಡಿದ್ದು, ಕಿ.ಮೀ ಲೆಕ್ಕದಲ್ಲಿ ದರ ನಿಗದಿ ಮಾಡಿದ್ದಾರೆ.
ಶವ ಸಾಗಿಸಲು ಟೆಂಪೋ ಟ್ರಾವೆಲ್ಗೆ ಪ್ರತಿ ಕಿಮೀಗೆ 16 ರೂ . ಒಮ್ನಿ ಅಂಬ್ಯುಲೆನ್ಸ್ ಗೆ 11 ರು. ನಿಗದಿ ಮಾಡಿದ್ದಾರೆ.
ಮರಣೋತ್ತರ ಪರೀಕ್ಷೆ ಕೊಠಡಿ ಬಳಿ , ಮೆಗ್ಗಾನ್ ಪ್ರವೇಶದ್ವಾರದಲ್ಲಿ ಆಂಬುಲೆನ್ಸ್ ಸಹಾಯವಾಣಿ ಸಂಖ್ಯೆ ಅಳವಡಿಕೆ ಮಾಡಿದ್ದು, ಮೆಗ್ಗಾನ್ ಪ್ರವೇಶದ್ವಾರದಲ್ಲಿ ಆರ್‌ಟಿಒ ಸಿಬ್ಬಂದಿ ಆಂಬುಲೆನ್ಸ್‌ಗಳ ಮಾಹಿತಿ ಬರೆದುಕೊಳ್ಳುತ್ತಾರೆ. ಆಂಬುಲೆನ್ಸ್ ಚಾಲಕರು ನಿಗದಿತ ದರಕ್ಕಿಂತ ಹೆಚ್ಚು ಹಣ ಕೇಳಿದರೆ ಮಾಹಿತಿ ಪಡೆದು ವಾಹನ ಸೀಜ್ ಮಾಡಲಾಗುತ್ತದೆ.
ಕೊರೋನಾ ಸೋಂಕಿತರ ಶವ ಸಾಗಾಣಿಕೆ ಮತ್ತು ಕೊರೋನಾ ರೋಗಿಗಳ ರವಾನೆ ಬಗ್ಗೆ ಪೋಲಿಸ್ ಅಧಿಕಾರಿಗಳು ನಿಗಾ ಇಡಲಿದ್ದಾರೆ.