ಗಡಿ ಜಿಲ್ಲೆಗೂ ಕಾಲಿಟ್ಟ ಬ್ಲಾಕ್ ಫಂಗಸ್ : ಇಬ್ಬರಲ್ಲಿ ಪತ್ತೆ

Suvarna News   | Asianet News
Published : May 19, 2021, 02:11 PM IST
ಗಡಿ ಜಿಲ್ಲೆಗೂ ಕಾಲಿಟ್ಟ ಬ್ಲಾಕ್ ಫಂಗಸ್ : ಇಬ್ಬರಲ್ಲಿ ಪತ್ತೆ

ಸಾರಾಂಶ

ಗಡಿ ಜಿಲ್ಲೆಗೂ ಕಾಲಿಟ್ಟ ಬ್ಲಾಕ್ ಫಂಗಸ್ : ಇಬ್ಬರಲ್ಲಿ ಪತ್ತೆ  ಗಡಿ ಜಿಲ್ಲೆ ಚಾಮರಾಜನಗರ ಹಾಗೂ ಬೆಳಗಾವಿ ಜಿಲ್ಲೆಗೂ ಇದೀಗ  ಬ್ಲ್ಯಾಕ್ ಫಂಗಸ್ ಕಾಲಿಟ್ಟಿದೆ ಚಾಮರಾಜನಗರದ ಜಿಲ್ಲೆಯಲ್ಲಿ ಇಬ್ಬರು -ಬೆಳಗಾವಿಯಲ್ಲೊಬ್ಬರಿಗೆ ಸೋಂಕು

 ಚಾಮರಾಜನಗರ/ಬೆಳಗಾವಿ (ಮೇ.19): ಕೊರೋನಾತಂಕದ ನಡುವೆಯೆ ಮತ್ತೊಂದು ಆತಂಕ ಶುರುವಾಗಿದೆ.  ಗಡಿ ಜಿಲ್ಲೆ ಚಾಮರಾಜನಗರ ಹಾಗೂ ಬೆಳಗಾವಿ ಜಿಲ್ಲೆಗೂ ಇದೀಗ  ಬ್ಲ್ಯಾಕ್ ಫಂಗಸ್ ಕಾಲಿಟ್ಟಿದೆ. ಚಾಮರಾಜನಗರದ ಜಿಲ್ಲೆಯಲ್ಲಿ ಇಬ್ಬರು ಕೊರೋನಾ ಸೋಂಕಿತರಲ್ಲಿ ಬ್ಲಾಕ್ ಫಂಗಸ್ ಸೋಂಕು ಕಾಣಿಸಿಕೊಂಡಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಓರ್ವ ವ್ಯಕ್ತಿಗೆ ಸೋಂಕಿ ತಗುಲಿದೆ. 

ಗಡಿ ಜಿಲ್ಲೆಯಲ್ಲಿ ಇಬ್ಬರು : ಚಾಮರಾಜನಗರದಲ್ಲಿ ಇಬ್ಬರು ಕೊರೋನಾ ಸೋಂಕಿತರಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗುಲಿದೆ.  ಗುಂಡ್ಲುಪೇಟೆ ತಾಲೋಕಿನ ಹಂಗಳದ ವ್ಯಕ್ತಿ ಹಾಗು ಚಾಮರಾಜನಗರ ತಾಲೂಕಿನ ಕಾಳನಹುಂಡಿ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.  

ಬ್ಲ್ಯಾಕ್ ಫಂಗಸ್‌ಗೂ ಔಷಧಿ ಕೊರತೆ: ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಕುಮಾರಸ್ವಾಮಿ .. 

ಇಬ್ಬರನ್ನು ಮೈಸೂರು ಕೆ.ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರವಿ ಮಾಹಿತಿ ನೀಡಿದ್ದಾರೆ.  .

ಚಿಕ್ಕೋಡಿಯಲ್ಲೊಂದು ಕೇಸ್:  ಬೆಳಗಾವಿ ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಪ್ರಕರಣ ಬೆಳಕಿಗೆ ಬಂದಿದೆ. ಬಾಗಲಕೋಟೆ ಮೂಲದ ಧರ್ಮಣ್ಣ ನರಸಪ್ಪ ದಳವಾಯಿ ಎಂಬ ವ್ಯಕ್ತಿ ಅಥಣಿ ಕೊಕಟನೂರು ಗ್ರಾಮದಲ್ಲಿದ್ದು, ಆತನಿಗೆ ಬ್ಲಾಕ್ ಫಂಗಸ್ ಧೃಢಪಟ್ಟಿದೆ.  

ಕೊರೋನಾ ಸೊಂಕಿಗೆ ತುತ್ತಾಗಿದ್ದ ಕೆಲ ದಿನಗಳ ಹಿಂದೆ ಜಮಖಂಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ, ಜಮಖಂಡಿವಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದ ಕಾರಣಕ್ಕೆ ಕೊಕಟನೂರು ಗ್ರಾಮಕ್ಕೆ ಆಗಮಿಸಿದ್ದ. ಕೊಕಟನೂರು ಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಮುಖ ಹಾಗೂ ಕಣ್ಣಿನ ಬಾವು ಕಾಣಿಸಿಕೊಂಡಿತ್ತು. ವೈದ್ಯರ ತಪಾಸಣೆ ಬಳಿಕ ವ್ಯಕ್ತಿಗೆ ಬ್ಲಾಕ್ ಫಂಗಸ್ ದೃಢಪಟ್ಟಿದೆ.

ಬ್ಲ್ಯಾಕ್ ಪಂಗಸ್ ಕಾಣಿಸಿಕೊಂಡ ಹಿನ್ನೆಲೆ ಅಥಣಿ ತಹಶೀಲ್ದಾರ್ ಗೆ ವಿಷಯ ತಿಳಿಸಲಾಗಿದೆ.  

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?