ಗದಗ : ಆಸ್ಪತ್ರೆ ಸಿಬ್ಬಂದಿ ಯಡವಟ್ಟಿಗೆ 10 ನಿಮಿಷದಲ್ಲೇ ಹೋಯ್ತು ಸೋಂಕಿತೆ ಪ್ರಾಣ

By Suvarna NewsFirst Published May 19, 2021, 1:12 PM IST
Highlights
  • ಜೀಮ್ಸ್ ನಲ್ಲಿ ಸಿಬ್ಬಂದಿ‌ ಎಡವಟ್ಟಿಗೆ ಸೋಂಕಿತ ಮಹಿಳೆ ಬಲಿ
  • ವೆಂಟಿಲೇಟರ್ ತೆಗೆದು ಬೇರೆ ವೆಂಟಿಲೇಟರ್ ಅಳವಡಿಸುವಾಗ ದುರಂತ
  • ವೆಂಟಿಲೇಟರ್ ಅಳವಡಿಸಲು ಮುಂದಾಗಿದ್ದ ವೇಳೆ 10 ನಿಮಿಷದಲ್ಲಿಯೇ ಮಹಿಳೆ  ಸಾವು

ಗದಗ (ಮೇ.19): ಗದಗದ ಜೀಮ್ಸ್ ನಲ್ಲಿ ಸಿಬ್ಬಂದಿ‌ ಎಡವಟ್ಟಿಗೆ ಸೋಂಕಿತ ಮಹಿಳೆ ಬಲಿಯಾಗಿದ್ದಾರೆ. ಸಿಬ್ಬಂದಿ ನಿರ್ಲಕ್ಷ್ಯಕ್ಕೆ ನಗರದ ಅಂಬೇಡ್ಕರ್ ಬಡಾವಣೆಯ 52 ವರ್ಷದ ಕೋವಿಡ್ ಸೋಂಕಿತೆ ಸಾವಿಗೀಡಾಗಿದ್ದಾರೆ. 

ಜೀಮ್ಸ್ ಆಸ್ಪತ್ರೆಯಲ್ಲಿ ಇಂದು 4.30ರ ಸುಮಾರಿಗೆ ಸೋಂಕಿತ ಮಹಿಳೆಗೆ ಅಳವಡಿಸಿದ್ದ ವೆಂಟಿಲೇಟರ್ ತೆಗೆದು ಬೇರೆ ವೆಂಟಿಲೇಟರ್ ಅಳವಡಿಸುವಾಗ ದುರಂತವಾಗಿದೆ.  ಚೆನ್ನಾಗಿದ್ದ ವೆಂಟಿಲೇಟರ್ ತೆಗೆದು ಮತ್ತೊಂದು ವೆಂಟಿಲೇಟರ್ ಅಳವಡಿಸಲು ಮುಂದಾಗಿದ್ದ ವೇಳೆ 10 ನಿಮಿಷದಲ್ಲಿಯೇ ಮಹಿಳೆ ನರಳಿ ಪ್ರಾಣ ಬಿಟ್ಟಿದ್ದಾರೆ.

ವೆಂಟಿಲೇಟರ್ ಬದಲು ಮಾಡುವ ಮುನ್ನ ಪರ್ಯಾಯ ಆಕ್ಸಿಜನ್ ವ್ಯವಸ್ಥೆ ಮಾಡುವಂತೆ ಕುಟುಂಬ ಕೇಳಿಕೊಂಡಿತ್ತು.  ಆದರೆ ಕುಟುಂಬಸ್ಥರ ಮನವಿಗೆ ಕಿವಿಗೊಡದ ಅಸ್ಪತ್ರೆ ಸಿಬ್ಬಂದಿ ವೆಂಟಿಲೇಟರ್ ಬದಲಾವಣೆ ಮಾಡಲು ಮುಂದಾಗಿದ್ದಾರೆ.  

ಕಳಪೆ ವೆಂಟಿಲೇಟರ್‌ಗಳಿಂದ ಹೆಚ್ಚಿದ ಸಾವು: ಎಚ್‌.ಕೆ. ಪಾಟೀಲ ..

ವೆಂಟಿಲೇಟರ್ ತೆರವುಗೊಳಿಸಿ ಕೆವಲ 10 ನಿಮಿಷದಲ್ಲಿ ಮಹಿಳೆ ಸಾವಿಗೀಡಾಗಿದ್ದಾರೆ. ಕುಟುಂಬಸ್ಥರ ಕಣ್ಣ ಮುಂದೆಯೇ ಸೋಂಕಿತೇ ನರಳಿ ಪ್ರಾಣ ಬಿಟ್ಟಿದ್ದಾರೆ. 

ಕಣ್ಣು ಮುಂದೆಯೇ ಅಕ್ಕನ ಜೀವ ಹೋಗಿದ್ದನ್ನು ಸಹೋದರ ಕಣ್ಣಾರೆ ಕಂಡಿದ್ದು, ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಅಲ್ಲದೇ ಜೀಮ್ಸ್ ಆಸ್ಪತ್ರೆ ಸಿಬ್ಬಂದಿ  ನಿರ್ಲಕ್ಷ್ಯದಿಂದ ಈ ರೀತಿ ದುರಂತವಾಗಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!