ಕೋವಿಡ್‌ಗೆ ಪತಿ ಬಲಿ : ನೊಂದ 3 ತಿಂಗಳ ಗರ್ಭಿಣಿ ಪತ್ನಿ ಆತ್ಮಹತ್ಯೆ

Kannadaprabha News   | Asianet News
Published : May 21, 2021, 02:32 PM ISTUpdated : May 21, 2021, 06:22 PM IST
ಕೋವಿಡ್‌ಗೆ ಪತಿ ಬಲಿ : ನೊಂದ 3 ತಿಂಗಳ ಗರ್ಭಿಣಿ ಪತ್ನಿ ಆತ್ಮಹತ್ಯೆ

ಸಾರಾಂಶ

ಕೊರೋನಾ ಮಹಾಮಾರಿ ಅಟ್ಟಹಾಸಕ್ಕೆ ತುತ್ತಾದ ಲಕ್ಷ ಲಕ್ಷ ಜೀವಗಳು ಕೊರೋನಾದಿಂದ ಪತಿ ಸಾವು - ನೊಂದ ಪತ್ನಿ ಆತ್ಮಹತ್ಯೆ ಕನಕಪುರದ ಬಸವೇಶ್ವರ ನಗರದಲ್ಲಿ ನಡೆದ ದುರಂತ

ಕನಕಪುರ (ಮೇ.21): ಕೊರೋನಾ ಮಹಾಮಾರಿ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ದಿನವೂ ಅನೇಕ ಜೀವಗಳನ್ನು ಆಹುತಿ ಪಡೆಯುತ್ತಿದ್ದು, ಕೊರೋನಾದಿಂದ ಪತಿಯನ್ನು ಕಳೆದುಕೊಂಡ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.   

ಕನಕಪುರದ ಬಸವೇಶ್ವರ ನಗರದಲ್ಲಿಂದು 3 ತಿಂಗಳ ಗರ್ಭಿಣಿ ನಂದಿನಿ (28) ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. 

"

ಗರ್ಭಿಣಿಯರು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು? ಲಸಿಕೆ ಪಡೆದುಕೊಳ್ಳಬಹುದಾ? ..

 ಮೃತ ಗೃಹಿಣಿಯ ಪತಿ ಸತೀಶ್ ಕಳೆದ 4 ದಿನಗಳ ಹಿಂದೆ ಕೊರೋನಾದಿಂದ ಮೃತಪಟ್ಟಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಂದಿನಿ ಪತಿ ಸಾವಿಗೀಡಾಗಿದ್ದು, ನೊಂದ ಮಹಿಳೆ ಡೆತ್ ನೋಟ್ ಬರೆದಿಟ್ಟು ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾರೆ.  

ಪತಿ ಸಾವಿನ ನೋವನ್ನ ಅರಗಿಸಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಗರ್ಭಿಣಿಯಾಗಿದ್ದ ನಂದಿನಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. 

ಸದ್ಯ ಈ ಸಂಬಂಧ ಕನಕಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು