ಮಧುಮೇಹ, ಬಿ.ಪಿ.ಗೆ ಮುನ್ನೆಚ್ಚರಿಕೆಯೇ ಮದ್ದು!

By Kannadaprabha News  |  First Published Mar 28, 2022, 8:27 AM IST

* ಹೆಚ್ಚುವರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್‌.ಎಸ್‌.ಗಡೇದ ಅಭಿಮತ

* ಮಧುಮೇಹ, ಬಿ.ಪಿ.ಗೆ ಮುನ್ನೆಚ್ಚರಿಕೆಯೇ ಮದ್ದು


ಮೂಡಲಗಿ(ಮಾ.28): ಮಧುಮೇಹ ಮತ್ತು ರಕ್ತದೊತ್ತಡ ಕಾಯಿಲೆಗಳು ದೇಹದಲ್ಲಿ ಆಶ್ರಯ ಪಡೆಯುವದಕ್ಕಿಂತ ಮುಂಚೆ ಪ್ರತಿಯೊಬ್ಬರೂ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಚಿಕ್ಕೋಡಿಯ ಹೆಚ್ಚುವರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್‌.ಎಸ್‌.ಗಡೇದ ಹೇಳಿದರು.

ಇಲ್ಲಿಯ ಅಂಜುಮನ್‌ ಎ ಇಸ್ಲಾಂ ಎಜುಕೇಷನ್‌ ಹಾಗೂ ಸೋಶಿಯಲ್‌ ಡೆವಲೆಪಮೆಂಟ್‌ ಸೊಸೈಟಿ ಹಾಗೂ ಖಿದಮತ್‌ ಸೋಸಿಯಲ್‌ ವೆಲಫæೕರ್‌ ಕಮಿಟಿಯಿಂದ ಮದರಸಾ ದಾರುಲ್‌ ಉಲೂಮದಲ್ಲಿ ಆಯೋಜಿಸಿದ್ದ ಮಧುಮೇಹ ಮತ್ತು ನೇತ್ರತಪಾಸಣೆ ಶಿಬಿರದ ಉದ್ಘಾಟಿಸಿ ಮಾತನಾಡಿದ ಅವರು, ಮಧುಮೇಹ ಮತ್ತು ರಕ್ತದೊತ್ತಡ ದೇಹದಲ್ಲಿ ಕಾಣಿಸಿಕೊಂಡರೆ ಸರಿಯಾದ ಉಪಚಾರ ಮಾಡಿಕೊಳ್ಳಬೇಕು ಎಂದರು.

Tap to resize

Latest Videos

ಮಧುಮೇಹ ಮತ್ತು ರಕ್ತದೊತ್ತಡ ಕಾಯಿಲೆಗಳನ್ನು ನಿರ್ಲಕ್ಷಿಸಿದರೆ ಪಾಶ್ರ್ವವಾಯು, ಹೃದಯಘಾತ, ಕಿಡ್ನಿ ನಿಷ್ಕಿ್ರಯತೆ ಹೀಗೆ ಹಲವಾರು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ವೈದ್ಯರ ಸಲಹೆ ಪಡೆದುಕೊಂಡು ನಿಯಮಿತವಾಗಿ ಮಾತ್ರೆಗಳನ್ನು ತೆಗೆದುಕೊಂಡು ರೋಗಗನ್ನು ನಿಯಂತ್ರಿಸಿಕೊಳ್ಳಬೇಕು. ಅಂಜುಮನ್‌ ಸೊಸೈಟಿಯವರು ಜನರ ಆರೋಗ್ಯ ತಪಾಸಣೆಯಂತ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಬೆಳಗಾವಿಯ ಕುಷ್ಟರೋಗ ನಿವಾರಣಾಧಿಕಾರಿ ಡಾ.ಚಾಂದನಿ ದೇವಡಿ ಮಾತನಾಡಿ, ಆಯುಷ್ಮಾನ್‌ ಭಾರತ ಯೋಜನೆಯಲ್ಲಿ ಬಿಪಿಎಲ್‌ ಕಾರ್ಡ್‌ದಾರರ ಕುಟುಂಬಗಳ ಚಿಕಿತ್ಸೆಗಾಗಿ .5 ಲಕ್ಷ ಹಾಗೂ ಎಪಿಎಲ್‌ಕಾರ್ಡದಾರರಿಗೆ .1 ಲಕ್ಷ ಧನಸಹಾಯವಿದ್ದು ಜನರು ಇಂಥ ಯೋಜನೆಗಳಿಗೆ ನೊಂದಣಿ ಮಾಡಿಕೊಂಡು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತಸಹಾಯಕ ನಾಗಪ್ಪ ಶೇಖರಗೋಳ ಶಿಬಿರವನ್ನು ಉದ್ಘಾಟಿಸಿದರು.

ಅಂಜುಮನ್‌ ಎ ಇಸ್ಲಾಂ ಸೊಸೈಟಿ ಅಧ್ಯಕ್ಷ ಮಲೀಕ ಹುಣಶ್ಯಾಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ತಹಶೀಲ್ದಾರ್‌ ಡಿ.ಜೆ.ಮಹಾತ್‌, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಬಿಇಒ ಅಜಿತ್‌ ಮನ್ನಿಕೇರಿ, ಸಿಪಿಐ ವೆಂಕಟೇಶ ಮುರನಾಳ, ಪಿಎಸ್‌ಐ ಹಾಲಪ್ಪ ಬಾಲದಂಡಿ, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಬಾಲಶೇಖರ ಬಂದಿ, ಡಾ.ಭಾರತಿ ಕೋಣಿ, ಡಾ.ರಾಜೇಂದ್ರ ಕಣದಾಳೆ, ಡಾ. ಮಹಮ್ಮದ ಆರೀಫ, ಡಾ.ದೀಪಾ ಮಾಚಪ್ಪನವರ,ಕಮಿಟಿ ಪದಾಧಿಕಾರಿಗಳು,ಸದಸ್ಯರು ಇದ್ದರು.ವೇದಿಕೆಯಲ್ಲಿದ್ದರು.

ಲಾಲ್‌ಸಾಬ್‌ ಸೈದಾಪುರ ಸ್ವಾಗತಿಸಿದರು, ಎಸ್‌.ಎಂ.ದಬಾಡಿ ನಿರೂಪಿಸಿದರು, ನೂರ್‌ಅಹ್ಮದ್‌ ಪೀರಜಾದೆ ವಂದಿಸಿದರು.

click me!