*ದಾವಣಗೆರೆಯಲ್ಲಿ ಮುಸ್ಲಿಂ ಮಹಿಳೆಯರಿಂದ ಮೌನ ಪ್ರತಿಭಟನೆ
* ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಒಳ್ಳೆಯದಲ್ಲ
* ಸಿಎಂ ಒಂದು ಕೋಮು ಅಥವಾ ಪಂಗಡಕ್ಕೆ ಸೇರಿದವರಲ್ಲ
ದಾವಣಗೆರೆ(ಮಾ. 28) ಹೊಸದೊಂದು ಹೋರಾಟಕ್ಕೆ ಮುಸ್ಲಿಂ (Muslim) ಮಹಿಳೆಯರು ನಾಂದಿ ಹಾಡಿದ್ದಾರೆ ದಾವಣಗೆರೆ (Davanagere) ಅರಳಿಮರದ ಸರ್ಕಲ್ ನಲ್ಲಿ ಮುಸ್ಲಿಂ ಮಹಿಳೆಯರು (silent protest) ಮೌನ ಪ್ರತಿಭಟನೆ ನಡೆಸಿದ್ದಾರೆ. ಭಾನುವಾರ ಬೆಳಗಿನಿಂದ ಪ್ರತಿಭಟನೆ ಆರಂಭಗೊಂಡಿದೆ.
ಬಸವರಾಜ್ ಬೊಮ್ಮಾಯಿ (Basavaraj Bommai) ಎಲ್ಲರ ಮುಖ್ಯಮಂತ್ರಿ . ಕೇವಲ ಒಂದು ಕೋಮು ಪಂಗಡಕ್ಕೆ ಮಾತ್ರ ಸೀಮಿತವಲ್ಲ . ಹಿಜಾಬ್ ಹೆಸರಿನಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಇತರ ಬೆಳವಣಿಗೆಗಳು ನಿಲ್ಲಬೇಕು. ಎಲ್ಲರು ಬದುಕುವಂತಹ ವಾತವರಣ ನಿರ್ಮಾಣವಾಗಬೇಕು. ಹಿಜಾಬ್ ವಿಚಾರಕ್ಕೆ ಸಂಬಂಧಂಪಟ್ಟ ಬಹಿಷ್ಕಾರದಂತಹ ಚಟುವಟಿಕೆ ನಡೆಯುತ್ತಿದೆ ಬಹಿಷ್ಕಾರದ ಹೆಸರಿನಲ್ಲಿ ಬಡವರ ಶೋಷಣೆ ಯಾಗುತ್ತಿದೆ. ಸಂವಿಧಾನ ಬದ್ಧ ಪ್ರತಿಭಟನೆ ಮಾಡುತ್ತಿದ್ದೇವೆ ಎಂದಿದ್ದಾರೆ.
ನನ್ನ ದೇಶದಲ್ಲಿ ಆಶಾಂತಿ ವಾತವರಣ ಕದಡುವ ಪ್ರಯತ್ನದ ವಿರುದ್ಧ ನಮ್ಮ ಪ್ರತಿಭಟನೆ. ಇದು ಎಲ್ಲಿಯವೆರಗು ನಡೆಯುತ್ತೋ ನಮಗೆ ಗೊತ್ತಿಲ್ಲ ರಾಜ್ಯದಲ್ಲಿ ಶಾಂತಿ ನೆಲಸುವವರೆಗು ನನ್ನ ಪ್ರತಿಭಟನೆ ನಿರಂತರವಾಗಿರಲಿದೆ ಎಂದಿದ್ದಾರೆ.
Ban Muslim Traders: ರಾಜ್ಯಾದ್ಯಂತ ಮುಸ್ಲಿಂ ವ್ಯಾಪಾರ ನಿರ್ಬಂಧಿಸಬೇಕು: ಮುತಾಲಿಕ್
ಹಿಜಾಬ್ ಮತ್ತು ವ್ಯಾಪಾರಕ್ಕೆ ಅವಕಾಶ ಇಲ್ಲ: ಹಿಜಾಬ್ ವಿವಾದದ ನಂತರ ಆರೋಪ-ಪ್ರತ್ಯಾರೋ, ಆಕ್ರೋಶ ಎಲ್ಲವೂ ಕಂಡು ಬಂದಿದೆ. ದೇವಸ್ಥಾನದ(Temples) ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ(Muslim Traders) ಬಹಿಷ್ಕಾರ ಹಾಕುತ್ತಿರುವ ಪ್ರಸಂಗ ಕರಾವಳಿ, ಮಲೆನಾಡು, ಹಳೇ ಮೈಸೂರು ಜಿಲ್ಲೆಗಳ ಬಳಿಕ ಇದೀಗ ಉತ್ತರ ಕರ್ನಾಟಕಕ್ಕೂ(North Karnataka) ಹಬ್ಬಿದೆ.
ಕೊಲ್ಲೂರು ದೇವಾಲಯದಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿದ್ದ ಸಲಾಂ ಮಂಗಳಾರತಿಯನ್ನು ಬಂದ್ ಮಾಡುವಂತೆ ಹಿಂದು ಸಂಘಟನೆಗಳು ಮನವಿ ನೀಡಿದದ್ದವು. ಕಲಬುರಗಿ ಮಹಾನಗರ ಸೇರಿದಂತೆ ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನದ ಆವರಣದಲ್ಲಿ ಹಿಂದೂಯೇತರರಿಗೆ ವ್ಯಾಪಾರ ವಹಿವಾಟು ನಿಷೇಧಿಸುವಂತೆ ಆಗ್ರಹಿಸಿ ಶುಕ್ರವಾರ ಶ್ರೀರಾಮಸೇನೆ ಮನವಿ ಸಲ್ಲಿಸಿತ್ತು.
ಶಿವಮೊಗ್ಗ ತಾಲೂಕಿನ ಮಲವಗೊಪ್ಪ ಗ್ರಾಮದಲ್ಲಿ ಮಾ.25ರಂದು ನಡೆದ ಚನ್ನಬಸವೇಶ್ವರಸ್ವಾಮಿ ರಥೋತ್ಸವದಲ್ಲೂ ಮುಸ್ಲಿಂ ವ್ಯಾಪಾರಿಗಳು ಮಳಿಗೆ ಹಾಕುವುದಕ್ಕೆ ವಿರೋಧ ವ್ಯಕ್ತವಾಗಿದೆ. ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ಆಗಬಾರದು ಎಂಬ ದೃಷ್ಟಿಯಿಂದ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಿರಲು ದೇವಾಲಯ ಸಮಿತಿ ಹಾಗೂ ಗ್ರಾಮದ ಪ್ರಮುಖರು ಒಮ್ಮತದ ನಿರ್ಧಾರ ತೆಗೆಗೆದುಕೊಂಡಿದ್ದು ವರದಿಯಾಗಿತ್ತು.
ಇದೇ ವಿಚಾರಕ್ಕೆ ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ ಸಮರಕ್ಕೂ ವೇದಿಕೆಯಾಗಿತ್ತು. ಹಿಜಾಬ್ ಅಲ್ಲ ದುಪ್ಪಟ್ಟಾಕ್ಕೆ ಅವಕಾಶ ನೀಡಿ ಎಂದು ಮಾತನಾಡುವ ಭರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಿಂದು ಸ್ವಾಮೀಜಿಗಳ ಬಗ್ಗೆ ಮಾತನಾಡಿದ್ದು ವಿವಾದದ ಕಿಡಿ ಹೊತ್ತಿಸಿತ್ತು.
ಕೋರ್ಟ್ ಆದೇಶ ಪಾಲಿಸಿಬೇಕು: ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗುತ್ತಿದ್ದು ಕೋರ್ಟ್ ಆದೇಶ ಪಾಲಿಸಬೇಕಿದೆ ಎಂದು ಬಾದಾಮಿಯಲ್ಲಿ ಶ್ರೀರಾಮಸೆನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.
ಕೋರ್ಟ್ ಆಜ್ಞೆ ಹಿನ್ನೆಲೆಯಲ್ಲಿ ಪರೀಕ್ಷೆ ವೇಳೆ ಹಿಜಾಬ್ ಅವಕಾಶ ಇಲ್ಲ ಅಂತಾ ಸರ್ಕಾರ ಹೇಳಿದೆ. ಕೋರ್ಟ್ ಆದೇಶವನ್ನು ಪಾಲಿಸುವಂತೆ ಮೊದಲಿನಿಂದಲೂ ಸರ್ಕಾರ ಹೇಳುತ್ತ ಬಂದಿದೆ. ಯಾವುದೇ ಒಂದು ಕಾರಣಕ್ಕೆ ನಿಮ್ಮ ಭವಿಷ್ಯ ಅಂಧಕಾರಕ್ಕೆ ದೂಡಬೇಡಿ. ವಿದ್ಯೆಗೆ ಕಲ್ಲು ಹಾಕಬೇಡಿ, ಎಸ್ಸೆಸ್ಸೆಲ್ಸಿ ಅಂದ್ರೆ ಪ್ರಮುಖ ಘಟ್ಟ..ರ್ಟ್ ಆರ್ಡರ್ ನಂತೆ ಹಿಜಾಬ್ ಇಲ್ಲದೇ ಪರೀಕ್ಷೆ ಬರೆಯಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮುತಾಲಿಕ್ ಮನವಿ...
ಸುಪ್ರೀಂ ಕೋರ್ಟ್ ನಲ್ಲಿ ಆದೇಶ ಬಂದ್ಮೇಲೆ ಅದನ್ನ ಪಾಲಿಸೋಣ ವಿವಾದವನ್ನು ಹುಟ್ಟುಹಾಕಿದ sdpi, PFI, CFI ಬಾಯಿ ಮುಚ್ಕೊಂಡು ಕೂತಿದ್ದಾರೆ. ಇವರುಗಳೇ ವಿದ್ಯಾರ್ಥಿನಿಯರನ್ನು ಬಲಿ ಕೊಟ್ಟಿದ್ದಾರೆ. ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಕಲ್ಲು ಹಾಕಿದ್ದಾರೆ. ಕೋರ್ಟ್ ಆರ್ಡರ್‌ನಂತೆ ಹಿಜಾಬ್ ಇಲ್ದೇ ಪರೀಕ್ಷೆ ಬರೆಯಿರಿ..ನಿಮ್ಮಗಳ ಭವಿಷ್ಯ ಉಜ್ವಲ ಆಗುತ್ತದೆ. ಮುಸ್ಲಿಂ ಮುಖಂಡರು, ಮುಲ್ಲಾ, ಮೌಲ್ವಿ ಗಳು ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಲಿ ಎಂದು ಆಗ್ರಹಪಡಿಸಿದರು.