Chikkamagalauru: ದತ್ತಪೀಠಕ್ಕೆ ಹಿಂದೂ ಆರ್ಚಕರ ನೇಮಕ ಬಳಿಕ ಪ್ರಮೋದ್ ಮುತಾಲಿಕ್ ಮೊದಲ ಭೇಟಿ

By Suvarna News  |  First Published Dec 27, 2022, 6:50 PM IST

ಚಿಕ್ಕಮಗಳೂರಿನ ವಿವಾದಿತ ಕೇಂದ್ರ  ಇನಾಂ ದತ್ತಾತ್ರೆಯ ಬಾಬಾಬುಡನ್ ಸ್ವಾಮಿ ಪೀಠಕ್ಕೆ ಭೇಟಿ ನೀಡಿದ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗಂಟೆಗೂ ಹೆಚ್ಚು ಕಾಲ ಗುಹೆಯಲ್ಲಿಯೇ ಇದ್ದು ಪೂಜಾ ಕಾರ್ಯಗಳನ್ನು ನಡೆಸಿದರು.


ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಡಿ.27): ಚಿಕ್ಕಮಗಳೂರಿನ ವಿವಾದಿತ ಕೇಂದ್ರ  ಇನಾಂ ದತ್ತಾತ್ರೆಯ ಬಾಬಾಬುಡನ್ ಸ್ವಾಮಿ ಪೀಠಕ್ಕೆ ಭೇಟಿ ನೀಡಿದ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗಂಟೆಗೂ ಹೆಚ್ಚು ಕಾಲ ಗುಹೆಯಲ್ಲಿಯೇ ಇದ್ದು ಪೂಜಾ ಕಾರ್ಯಗಳನ್ನು ನಡೆಸಿದರು. ಚಿಕ್ಕಮಗಳೂರು ತಾಲ್ಲೂಕಿನ ದತ್ತ ಪೀಠಕ್ಕೆ ಭೆಟಿ ನೀಡಿದ ಅವರು, ದತ್ತ ಪಾದುಕೆಯ ದರ್ಶನ ಪಡೆದು ಬಳಿಕ ಹಿಂದೂ ಅರ್ಚಕರಿಂದ ಪಾದುಕೆಗೆ ರುದ್ರಾಭಿಷೇಕ ಪೂಜೆ ಮಾಡಿಸಿದರು, ಹಿಂದೂ ಅರ್ಚಕರ ನೇಮಕವಾದ ಬಳಿಕ ಇದೇ ಮೊದಲು ಶ್ರೀರಾಮ ಸೇನೆಯ ವತಿಯಿಂದ ದತ್ತ ಪಾದುಕೆಗೆ ವಿಶೆಷ ಪೂಜಾ ಕಾರ್ಯ ಹಮ್ಮಿಕೊಂಡಿದದ್ದರು.  ಗಂಟೆಗೂ ಹೆಚ್ಚುಕಾಲ ಪೂಜಾ ಕಾರ್ಯಗಳು ನಡೆದು, ದತ್ತ ಪೀಠದಲ್ಲಿ ಘಂಟಾನಾದ ಮೊಳಗಿತು. 

Tap to resize

Latest Videos

ಸರ್ಕಾರ ಹಾಗೂ ಶಾಸಕ ಸಿ.ಟಿ.ರವಿಗೆ ಧನ್ಯವಾದ ಹೇಳಿದ ಮುತಾಲಿಕ್
ದತ್ತ ಪಾದುಕೆ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಪ್ರಮೋದ್ ಮುತಾಲಿಕ್ ಹಿಂದೂ ಅರ್ಚಕರ ನೇಮಕ ಆಗಿ, ಪೂಜೆ ರುದ್ರಾಭಿಷೇಕ, ಶಂಕಾನಾದ, ಆರತಿ ಎಲ್ಲವನ್ನೂ ನೋಡಿ, ಕೇಳಿ ನಿಜವಾಗಿಯೂ ಧನ್ಯ ಆಯ್ತು. ಸುದೀರ್ಘವಾದ ಹೋರಾಟಕ್ಕೆ ಬೆಲೆ ಸಿಕ್ಕಿದೆ ಎನ್ನುವುದು ನಮಗೆ ಗೊತ್ತಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರ, ಶಾಸಕ ಸಿ.ಟಿ ರವಿಯವರಿಗೆ ಧನ್ಯವಾದವನ್ನು ತಿಳಿಸುತ್ತೇನೆ ಎಂದರು.ಕಾನೂನಾತ್ಮಕವಾಗಿಮುಂದಿನ ದಿನಗಳಲ್ಲಿ ಇನ್ನೂ ಹೆಚ್ವಿನ ಕೆಲಸವಾಗಬೇಕು. ಮುಸ್ಲಿಂ ಸಮಾಜಕ್ಕೆ ವಿನಂತಿ ಮಾಡಿಕೊಳ್ಳುತ್ತೇನೆ, ಒಳಗೆ ಸೌಹಾರ್ದಯುತವಾಗಿ ಪಾದುಕೆಯ ಪೂಜೆ, ರುದ್ರಾಭಿಷೇಕವಾಗುತ್ತಿದೆ. ಆರತಿ , ಘಂಟೆ, ಶಂಖನಾದ ಎಲ್ಲವೂ ಇಸ್ಲಾಮಿಗೆ ವಿರುದ್ಧವಾಗಿದೆ. ಹಾಗಾಗಿ ಇದನ್ನು ಬಿಟ್ಟುಕೊಟ್ಟು ನಾಗೇನಹಳ್ಳಿಯಲ್ಲಿ ನಮಾಜು, ಪೂಜೆ ಪುನಸ್ಕಾರಗಳನ್ನು ಮಾಡಿಕೊಳ್ಳಬೇಕು. 25 ವರ್ಷಗಳ ಹಿಂದೆಯೂ ಕೂಡಾ ಇಲ್ಲಿನ ಹಿರಿಯರಾದ ನಾಣಯ್ಯ, ವಿಠ್ಠಲ್ ರಾಯ್, ಸತ್ತಾತ್ರೆಯ ಶೆಟ್ಟಿ ಸೇರಿದಂತೆ ಅನೇಕರು ಪರಿಶ್ರಮಪಟ್ಟಿದ್ದಾರೆ ಅವರಿಗೂ ಕೂಡಾ ಹಿಂದೂ ಅರ್ಚಕರ ನೇಮಕ ಆನಂದವಾಗಿದೆ.

ಇನ್ನೂ ಗರ್ಭ ಗುಡಿಯ ಒಳಗೆ ಪೂಜೆ ನಡೆಯುತ್ತಿರುವುದರಿಂದ, ನಾಸ್ತಿಕವಾದಿಗಳು, ಗೋ ಹಂತಕರು, ಗೋ ಭಕ್ಷಕರು, ಮೂರ್ತಿ ಪೂಜೆ ನಂಬಲಾರದವರು ದತ್ತಪಾದುಕೆಯ ಗರ್ಭ ಗುಡಿಯ ಒಳಗೆ ಹೋಗಬಾರದು, ಕುರಾನಿನ ಪ್ರಕಾರ ಅದು ನಿಷಿದ್ಧ ದತ್ತಪೀಠದ ಆವರಣ ಪೂರ್ಣ ಪ್ರಮಾಣದಲ್ಲಿ ದತ್ತ ಪೀಠ ಹಿಂದೂ ಪೀಠವಾಗುವವರೆಗೆ ನಮ್ಮ  ಹೋರಾಟ ಮುಂದುವರೆಯುತ್ತೆ, ಕಾನೂನಾತ್ಮಕವಾಗಿ ನಡೆಯುತ್ತಿದೆ. ಆಂದೋಲನಾತ್ಮಕವಾಗಿನಡೆಯುತ್ತಿದೆ. ನಮಾಜ್, ಉರುಸ್ ಮಾಡ್ತಾರೆ ಅವುಗಳೆಲ್ಲವನ್ನು ಸ್ಥಳಾಂತರಗೊಳಿಸುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತೆ ಎಂದರು. 

ಮಿಕ್ಸಿ ಸ್ಟೋಟ  ವ್ಯವಸ್ಥಿತವಾದ ಟೆರರಿಸಂನ ಬೇರೆ ಬೇರೆ ಪ್ರಕಾರ : 
ಹಾಸನದಲ್ಲಿ ಕೊರಿಯರ್ ನಲ್ಲಿ ಬಂದ ಮಿಕ್ಸಿ ಸ್ಪೋಟಗೊಂಡ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ಗಮನಕ್ಕೆ ಬಂದ ಪ್ರಕಾರ ಕೊರಿಯರ್ ಮೂಲಕ ಬಂದ ಮಿಕ್ಸಿ ಓಪನ್ ಮಾಡಿದಾಗ ಬ್ಲಸ್ಟ್ ಆಗಿದೆ. ಇದೊಂದು ವ್ಯವಸ್ಥಿತವಾದ ಟೆರರಿಸಂನ ಬೇರೆಬೇರೆ ಪ್ರಕಾರಗಳಲ್ಲಿ ಇದೂ ಒಂದು. ಶಾರೀಕ್ ಮುಖಾಂತರ ಕುಕ್ಕರ್ ಮೂಲಕ ಸ್ಪೋಟ ಮಾಡಲು ಯತ್ನಿಸಿದ್ದು.ಈ ರೀತಿಯಾಗಿ ಅನೇಕ ವಿಧಾನಗಳ ಮೂಲಕ ಮಾಡುವ ಕುಕೃತ್ಯಗಳನ್ನು ತಡೆಯುವನ್ನ್ಯ್ ತಡೆಯುವ ಕೆಲಸ ಆಗಬೇಕು.ಕೆಂದ್ರದ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದ ಬಾಂಬ್ ಬ್ಲಾಸ್ಟ್ ಪ್ರಕರಣಗಳನ್ನು ಹತ್ತಿಕ್ಕುವ ಕೆಲ್ಸ ಆಗುತ್ತಿದೆ. ಅದನ್ನು ತಡೆದುಕೊಳ್ಳಲಾಗದೆ. ಅಲ್ಲಲ್ಲಿ ಬೇರೆ ಬೇರೆ ರೀತಿಯಲ್ಲಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿದೆ ಅದನ್ನೂ ಹತ್ತಿಕ್ಕುವ ಕೆಲಸ ಮಾಡುತ್ತಾರೆ.

Mutalik: ಕಾರ್ಕಳದಲ್ಲಿ ಸುನೀಲ್ ಕುಮಾರ್ ವಿರುದ್ಧ ಮುತಾಲಿಕ್ ಕಾದಾಟ: ಕ್ಷೇತ್ರ ಬಿಡುವಂತೆ ಸಲಹೆ

ನಮ್ಮ ಸರ್ವೇ ಪ್ರಕಾರ ಕಾರ್ಕಳ ನಂ.1 : 
ಮುಂಬರೋ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಹಿನ್ನಲೆಯಲ್ಲಿ ರಾಜ್ಯದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ವೆ ಕಾರ್ಯ ನಡೆಸಲಾಗಿದ್ದು ಅದರಲ್ಲಿ ಕಾರ್ಕಳ ನಂಬರ್ 1 ಸ್ಥಾನ ಪಡೆದುಕೊಂಡಿದೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು. ಈ ಮೂಲಕ ಮುಂಬರೋ ಚುನಾವಣೆಯಲ್ಲಿ ಕಾರ್ಕಳದಲ್ಲಿ ಗುರು-ಶಿಷ್ಯರ ಕಾದಾಟ ನಡೆಯುತ್ತಾ ಎನ್ನುವ ಪ್ರಶ್ನೆ ಹುಟ್ಟುಹಾಕಿದ್ದು ಈ ಬಗ್ಗೆ ಜನವರಿ ಮೊದಲ ವಾರದಲ್ಲಿ ಅನೌನ್ಸ್ ಮಾಡುತ್ತೇನೆ ಎಂದು ತಿಳಿಸಿದರು. ಕಾರ್ಕಳ ಕ್ಷೇತ್ರದಲ್ಲಿ ಐದಾರು ಬಾರಿ ಪ್ರವಾಸ ಮಾಡಿದ್ದೇನೆ,  ನನ್ನ ಜೊತೆ ಓಡಾಡುವವರ ಮೇಲೆ ಕೇಸ್ ಹಾಕುತ್ತಿದ್ದರು, ಏಳೆಂಟು ಕ್ಷೇತ್ರದಲ್ಲಿ ಚರ್ಚೆ ನಡೆಯುತ್ತಿದೆ. ನಾನು ಘೋಷಣೆ ಮಾಡಿ ಪ್ರಚಾರವನ್ನೇ ಆರಂಭಿಸಿಲ್ಲ ಈಗಲೇ ಸುನೀಲ್ ಕುಮಾರ್ ಗೆ ಭಯದ ವಾತಾವರಣ ಹುಟ್ಟಿದೆ.ನಮ್ಮನ್ನ ಹೆದರಿಸಿ-ಬೆದರಿಸುವ ಪ್ರಯತ್ನ ಬೇಡ ಎಂದು ಹೇಳಿ ಹಿಂದುತ್ವದಲ್ಲಿ ಉಡುಪಿ-ಮಂಗಳೂರಲ್ಲಿ ಒಳ್ಳೆ ವಾತಾವರಣವಿರುವ ಕಾರಣ ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವುದಾಗಿ  ತಿಳಿಸಿದರು. 

Assembly election: ಮುಂದಿನ ಚುನಾವಣೆಯಲ್ಲಿ ನನ್ನ ಸ್ಪರ್ಧೆ ನಿಶ್ಚಿತ: ಪ್ರಮೋದ್‌ ಮುತಾಲಿಕ್

ಗಡಿವಿವಾದ ರಾಜಕೀಯ ಪ್ರೇರಿತ: 
ಗಡಿವಿವಾದ ರಾಜಕೀಯ ಪ್ರೇರಿತವಾದದ್ದು, ಬೆಳಗಾವಿಯಲ್ಲಿ ಕನ್ನಡಿಗರು-ಮರಾಠಿಗಳರು ಸಹೋದರರಂತೆ ಇದ್ದಾರೆ ಎಂದು ತಿಳಿಸಿದರು. ರಾಜಕೀಯ ನಾಯಕರು ತಮ್ಮ ರಾಜಕೀಯ ಬೆಳೆ ಬೇಯಿಸಲು ಕರ್ನಾಟಕ-ಮಹಾಷ್ಟ್ರದ ರಾಜಕೀಯ ನಾಯಕರು ಕಿಡಿ ಹಚ್ಚುತ್ತಿದ್ದಾರೆ ಎಂದು ಕಿಡಿಕಾರಿದರು. ಗಡಿವಿವಾದ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ, ಈಬಗ್ಗೆ ರಾಜಕೀಯ ನಾಯಕರು ಮಾತಾಡದ್ರೆ  ನ್ಯಾಯಾಂಗ ನಿಂದನೆ ಆಗುತ್ತೆ ಎಂದು ತಿಳಿಸಿದರು. ಮಹಾರಾಷ್ಟ್ರ ಬಿಜೆಪಿ-ಕಾಂಗ್ರೆಸ್ ಬೆಳಗಾವಿ ಮಹಾರಾಷ್ಟ್ರದ್ದು ಅಂತಾರೆ, ಕರ್ನಾಟಕ ಬಿಜೆಪಿ-ಕಾಂಗ್ರೆಸ್ ಬೆಳಗಾವಿ ಕರ್ನಾಟಕದ್ದು ಅಂತಾರೆ ಈ ಮೂಲಕ ಎರಡು ರಾಷ್ಟ್ರೀಯ ಪಕ್ಷಗಳೇ ದ್ವಂದ್ವ ನಿಲುವು ಹೇಗೆ ತೆಗೆಕೊಳ್ತಾರೆ ಎಂದು ಹೇಳಿ  ಸುಪ್ರೀಂ ಕೋರ್ಟಿನಿಂದ ತೀರ್ಪು ಬರುವವರೆಗೂ ಬಾಯಿ ಮುಚ್ವಿಕೊಂಡು ಇರಿ ಎಂದು ರಾಜಕೀಯ ನಾಯಕರಿಗೆ ತಾಕೀತು ಮಾಡಿದರು.

click me!